ಶೇರ್‌ಚಾಟ್ ಸಮೂಹ ನೀತಿ
Last updated: 10th March 2021
ನಿಮ್ಮ ಸ್ನೇಹಿತರು ಮತ್ತು ಇತರ ಸಮಾನ ಮನಸ್ಕ ವ್ಯಕ್ತಿಗಳೊಂದಿಗೆ ಸಂಪರ್ಕಿಸಲು ಶೇರ್‌ಚಾಟ್ ನಲ್ಲಿ ಈಗ ನೀವು ಗುಂಪುಗಳನ್ನು ("ಗುಂಪುಗಳು") ರಚಿಸಬಹುದು ಅಥವಾ ಗುಂಪುಗಳಿಗೆ ಸೇರಬಹುದು. ಹಂಚಿಕೊಂಡ ಆಸಕ್ತಿಗಳ ಸಹಿತ ಸಮುದಾಯಗಳೇ ಗುಂಪುಗಳಾಗಿವೆ. ಇವು ಮಾಹಿತಿ ವಿನಿಮಯ ಮಾಡುತ್ತವೆ, ಕಂಟೆಂಟ್ ರಚಿಸುತ್ತವೆ ಮತ್ತು ನಮ್ಮ ಪ್ಲಾಟ್‌ಫಾರಂನಲ್ಲಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತವೆ.
ಈ ವಿಭಾಗವು ಗುಂಪುಗಳಿಗೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ನಿಗದಿಸುತ್ತದೆ. ದಯವಿಟ್ಟು ಗಮನಿಸಿ, ನಮ್ಮ ಪ್ಲಾಟ್‌ಫಾರಂನಲ್ಲಿ ಯಾವುದೇ ಮಾಹಿತಿಯೊಂದಿಗೆ ನಡೆಯುವಂತೆ, ಗುಂಪುಗಳಲ್ಲಿ ನಿಮ್ಮ ಚಟುವಟಿಕೆಗಳು ಶೇರ್‌ಚಾಟ್ ಕಂಟೆಂಟ್ ಮತ್ತು ಸಮುದಾಯ ಮಾರ್ಗಸೂಚಿಗಳು, ಶೇರ್‌ಚಾಟ್ ಗೌಪ್ಯತೆ ನೀತಿ ಮತ್ತು ನಮ್ಮ ಶೇರ್‌ಚಾಟ್ ಕುಕೀ ನೀತಿ (ಒಟ್ಟಾರೆಯಾಗಿ "ನಿಯಮಗಳು") ಗೆ ಒಳಪಟ್ಟಿರುತ್ತವೆ.
#
ಗುಂಪುಗಳು ಹೇಗೆ ಕೆಲಸ ಮಾಡುತ್ತವೆ?ಯಾವುದೇ ವಿಷಯ, ಥೀಮ್, ಸಮಸ್ಯೆ ಅಥವಾ ಚಟುವಟಿಕೆಯ ಬಗ್ಗೆ ನೀವು ಗುಂಪು ರಚಿಸಬಹುದು ಅಥವಾ ಗುಂಪಿಗೆ ಸೇರಬಹುದು. ವಿಷಯ, ನಿಮ್ಮ ಹಿಂದಿನ ವರ್ತನೆ ಅಥವಾ ನಿಮ್ಮ ಚಟುವಟಿಕೆಗಳು ನಮ್ಮ ನಿಯಮಗಳನ್ನು ಉಲ್ಲಂಘಿಸಿದರೆ ಗುಂಪಿನಲ್ಲಿ ಭಾಗವಹಿಸುವ, ಗುಂಪು ರಚಿಸುವ ಅಥವಾ ಗುಂಪಿಗೆ ಸೇರುವ ನಿಮ್ಮ ವಿನಂತಿಯನ್ನು ನಾವು ನಿರಾಕರಿಸಬಹುದು.
ವಿಷಯವನ್ನು ಹುಡುಕುವ ಮೂಲಕ ಅಥವಾ ಪ್ಲಾಟ್‌ಫಾರಂನಲ್ಲಿ ಗುಂಪುಗಳನ್ನು ಹುಡುಕುವ ಮೂಲಕ ನೀವು ಗುಂಪಿಗೆ ಸೇರಬಹುದು. ಸ್ನೇಹಿತರ ಮೂಲಕ ಗುಂಪಿಗೆ ಸೇರಲು ನಿಮ್ಮನ್ನು ಆಹ್ವಾನಿಸಬಹುದು ಅಥವಾ ಶೇರ್‌ಚಾಟ್ ಸಂಪರ್ಕಕಕ್ಕೆ ಆಹ್ವಾನಿಸಬಹುದು.
ಗುಂಪಿಗೆ ಸೇರಿದಾಗ, ನಿಮ್ಮ ಮತ್ತು ನಿಮ್ಮ ಗುಂಪಿನ ಸದಸ್ಯರುಗಳ ಚಟುವಟಿಕೆಗಳ ಬಗ್ಗೆ ಕಾಲಕಾಲಕ್ಕೆ ಸೂಚನೆಗಳನ್ನು ನೀವು ಸ್ವೀಕರಿಸುತ್ತೀರಿ.
ಗುಂಪನ್ನು ತೊರೆಯಲು, ಗುಂಪಿನ ಹೋಮ್‌ಪೇಜ್‌ಗೆ ನೀವು ಹೋಗಬಹುದು ಮತ್ತು ‘ಗುಂಪು ತೊರೆಯಿರಿ’ ಆಯ್ಕೆಯನ್ನು ಆಯ್ಕೆ ಮಾಡಬಹುದು. ಗುಂಪನ್ನು ತೊರೆದಾಗ, ಸದಸ್ಯರ ಪಟ್ಟಿಯಿಂದ ನಿಮ್ಮ ಹೆಸನ್ನು ತೆಗೆದುಹಾಕಲಾಗುತ್ತದೆ ಮತ್ತು ಗುಂಪಿನಲ್ಲಿ ಚಟುವಟಿಕೆಗಳ ಅಪ್‌ಡೇಟ್‌ಗಳನ್ನು ನೀವು ಇನ್ನು ಸ್ವೀಕರಿಸುವುದಿಲ್ಲ.
#
ಗುಂಪುಗಳ ವಿಧಗಳುಇದರಲ್ಲಿ ಎರಡು ವಿಧದ ಗುಂಪುಗಳು ಇವೆ: ಸಾರ್ವಜನಿಕ ಮತ್ತು ಖಾಸಗಿ.
- ಸಾರ್ವಜನಿಕ ಗುಂಪುಗಳು: ಸಾರ್ವಜನಿಕ ಗುಂಪುಗಳನ್ನು ಮುಕ್ತವಾಗಿ ಹುಡುಕಬಹುದು. ಸದಸ್ಯರಲ್ಲದವರು ಗುಂಪು ಸದಸ್ಯರನ್ನು ನೋಡಬಹುದು ಹಾಗೂ ಗುಂಪಿನಲ್ಲಿ ಪ್ರಕಟವಾಗುವ ಪೋಸ್ಟ್‌ಗಳನ್ನು ನೋಡಬಹುದು..
- ಖಾಸಗಿ ಗುಂಪುಗಳು: ಗುಂಪಿನಲ್ಲಿ ಜನರ ಪಟ್ಟಿಯನ್ನು ಮತ್ತು ಅವರು ಪೋಸ್ಟ್ ಮಾಡಿದ ಕಂಟೆಂಟ್ ಅನ್ನು ಸದಸ್ಯರು ಮಾತ್ರ ನೋಡಬಹುದು. ಸದಸ್ಯರಿಂದ ಲಿಂಕ್ ಮೂಲಕ ಮಾತ್ರ ಖಾಸಗಿ ಗುಂಪುಗಳನ್ನು ಪ್ರವೇಶಿಸಬಹುದು. ಸದಸ್ಯತ್ವದ ಆಧಾರದ ಮೇಲೆ ಗುಂಪುಗಳನ್ನು ವರ್ಗೀಕರಿಸಲಾಗುತ್ತದೆ. ಕೆಲವು ಗುಂಪುಗಳಿಗೆ ಸೇರಲು ಅಡ್ಮಿನ್/ ಮಾಡರೇಟರ್ ಪೂರ್ವಾನುಮತಿ ಬೇಕಾಗುತ್ತದೆ, ಇತರೆ ಗುಂಪುಗಳು ಎಲ್ಲ ಸದಸ್ಯರಿಗೂ ಮುಕ್ತವಾಗಿರುತ್ತವೆ.
#
ಗುಂಪುಗಳಲ್ಲಿ ಸಂವಹನಗುಂಪಿನ ಸದಸ್ಯರುಗಳೊಂದಿಗೆ ಪಠ್ಯ, ಚಿತ್ರಗಳು, ವೀಡಿಯೋ ಅಥವಾ ಆಡಿಯೋ ಚಾಟ್‌ಗಳ ಮೂಲಕ ಸಂವಹನ ನಡೆಸಲು ನಿಮಗೆ ShareChat ಪ್ಲಾಟ್‌ಫಾರಂ ಅನುವು ಮಾಡುತ್ತದೆ. ಗುಂಪಿನ ಸದಸ್ಯರುಗಳೊಂದಿಗೆ ನೇರವಾಗಿ ಮಾತನಾಡಲು ಅವರನ್ನು "ಪಿಂಗ್" ಮಾಡುವ ಅವಕಾಶವನ್ನೂ ನೀವು ಹೊಂದಿರುತ್ತೀರಿ.
ನೇರ ಸಂವಹನಗಳಲ್ಲೂ ಗುಂಪಿನ ಸದಸ್ಯರ ಕಡೆಗೆ ನಿಮ್ಮ ವರ್ತನೆಯು ಬಳಕೆಯ ನಿಯಮಗಳಿಗೆ ("ನಿಯಮಗಳು") ಬದ್ಧವಾಗಿರುತ್ತದೆ ಮತ್ತು ಇದರ ಯಾವುದೇ ಉಲ್ಲಂಘನೆಯಿಂದಾಗಿ ಸಂಬಂಧಿಸಿದ ಗುಂಪಿನಿಂದ ನಿಮ್ಮನ್ನು ತೆಗೆದುಹಾಕಲು, ಅಮಾನತುಗೊಳಿಸಲು ಅಥವಾ ನಮ್ಮ ಸೇವೆಗಳನ್ನು ರದ್ದು ಮಾಡುವುದು ಸೇರಿದಂತೆ ಇತರ ಕ್ರಮಗಳಿಗೆ ಕಾರಣವಾಗಬಹುದು.
ಗುಂಪಿನಲ್ಲಿ ನೀವು ಪೋಸ್ಟ್ ಮಾಡುವ ಕಂಟೆಂಟ್ ಇತರರಿಗೆ ಕಾಣಿಸದಿರಬಹುದು. ಇದು ಇತರ ಬಳಕೆದಾರರ ವೀಕ್ಷಣೆದಾರ ಸೆಟ್ಟಿಂಗ್‌ಗಳನ್ನು ಅವಲಂಬಿಸಿರುತ್ತದೆ (ಉದಾಹರಣೆಗೆ, ಟ್ರೆಂಡಿಂಗ್/ಜನಪ್ರಿಯ ಪೋಸ್ಟ್‌ಗಳನ್ನು ಮೊದಲು ನೋಡಲು ಅವರು ಆಯ್ಕೆ ಮಾಡಿಕೊಂಡಿದ್ದರೆ). ಕೆಲವು ಸನ್ನಿವೇಶಗಳಲ್ಲಿ, ನಿಮ್ಮ ಪೋಸ್ಟ್ ಅನ್ನು ಸ್ಪ್ಯಾಮ್ ಎಂದು ವರ್ಗೀಕರಿಸಿದ್ದರೆ, ಇತರ ಬಳಕೆದಾರರು ಸೂಕ್ತವಲ್ಲ ಎಂದು ಫ್ಲ್ಯಾಗ್ ಮಾಡಿದರೆ ಅಥವಾ ನಮ್ಮ ತಂಡದ ಪರಿಶೀಲನೆಗೆ ಒಳಪಡುತ್ತಿದ್ದರೆ, ಇದರ ಪರಿಣಾಮವಾಗಿ ನಿರ್ಬಂಧಿಸಲ್ಪಟ್ಟಿರುತ್ತದೆ ಅಥವಾ ಸೀಮಿತ ವೀಕ್ಷಣೆಗೆ ಲಭ್ಯವಿರುತ್ತದೆ. ನಮ್ಮ ನಿಯಮಗಳು ಅಥವಾ ಕಂಟೆಂಟ್ ಮತ್ತು ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆ ಕಂಡುಬಂದಲ್ಲಿ ನಿಮ್ಮ ಪೋಸ್ಟ್ ಅನ್ನು ನಾವು ಅಮಾನತು ಕೂಡಾ ಮಾಡಬಹುದು.
ನಿಮ್ಮ ಕಂಟೆಂಟ್ ಅನ್ನು ಅನುಚಿತವಾಗಿ ಅಮಾನತು ಮಾಡಲಾಗಿದೆ ಅಥವಾ ಇತರ ಬಳಕೆದಾರರು ನೋಡಲಾಗದು ಎಂದು ನೀವು ಭಾವಿಸಿದರೆ, ನಿಮ್ಮ ಗ್ರೂಪ್ ಅಡ್ಮಿನ್/ಮಾಡರೇಟರ್‌ಗೆ ನೀವು ಸೂಚನೆ ನೀಡಬೇಕಾಗಬಹುದು.
#
ಗುಂಪುಗಳಲ್ಲಿ ನಿಮ್ಮ ಗೌಪ್ಯತೆಯನ್ನು ರಕ್ಷಿಸುವುದುನೀವು ಸೇರುವ ಯಾವುದೇ ಗುಂಪಿನ ಸೆಟ್ಟಿಂಗ್‌ಗಳನ್ನು ದಯವಿಟ್ಟು ಪರಿಶೀಲಿಸಿ. ಅಡ್ಮಿನ್ ಅಥವಾ ಮಾಡರೇಟರ್ ಆಗಿ ನೀವು ಕಾಲಕಾಲಕ್ಕೆ ನಿಮ್ಮ ಗುಂಪಿನ ಸೆಟ್ಟಿಂಗ್‌ಗಳನ್ನು ನೀವು ನೋಡಬಹುದು ಮತ್ತು ತಿದ್ದುಪಡಿ ಮಾಡಬಹುದು.
ಶೇರ್‌ಚಾಟ್ ನಲ್ಲಿ ನಿಮ್ಮ ಗುಂಪನ್ನು ಹುಡುಕುವ ಸಾಮರ್ಥ್ಯ, ಯಾವ ಸದಸ್ಯರು ನೋಡಬಹುದು ಮತ್ತು ಕಾಲಕಾಲಕ್ಕೆ ಅಡ್ಮಿನ್‌ಗಳು/ ಮಾಡರೇಟರ್‌ಗಳನ್ನು ಗುರುತಿಸುವುದನ್ನು ತಿದ್ದುಪಡಿ ಮಾಡಲು ಗೌಪ್ಯತೆ ಸೆಟ್ಟಿಂಗ್‌ಗಳು ನಿಮಗೆ ಅನುವು ಮಾಡುತ್ತವೆ.
ಗುಂಪಿನ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಆಧರಿಸಿ, ನಮ್ಮ ತಂಡಗಳು, ತೃತೀಯ ಪಕ್ಷದ ಗುತ್ತಿಗೆದಾರರು ಅಥವಾ ಇತರ ಪಕ್ಷಗಳು ಗುಂಪಿನಲ್ಲಿ ಬಳಕೆದಾರರು ತೆಗೆದುಕೊಳ್ಳುವ ಕ್ರಮಗಳನ್ನು ನೋಡಲು ಸಾಧ್ಯವಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಕಂಟೆಂಟ್ ಅನ್ನು ಮಾಡರೇಟ್ ಮಾಡುವ ಉದ್ದೇಶಗಳು, ದೂರುಗಳಿಗೆ ಅನುಗುಣವಾಗಿ ಕ್ರಮ ತೆಗೆದುಕೊಳ್ಳುವುದು, ನಮ್ಮ ಆಂತರಿಕ ನಿಯಮಗಳು/ ನೀತಿಗಳನ್ನು ಜಾರಿಗೊಳಿಸುವುದು, ಶೇರ್‌ಚಾಟ್ ಪ್ಲಾಟ್‌ಫಾರಂನ ಕಾರ್ಯಕ್ಷಮತೆಯನ್ನು ಪರಿಶೀಲಿಸುವುದು, ನಮ್ಮ ಸೇವೆಗಳನ್ನು ಸುಧಾರಿಸುವುದು ಅಥವಾ ನಮ್ಮ ನಿಯಮಗಳು ಅನುಮತಿಸಿದ ಪ್ರಕಾರ ಇತರ ಕ್ರಮಗಳನ್ನು ತೆಗೆದುಕೊಳ್ಳುವ ಉದ್ದೇಶಕ್ಕೆ ಈ ಹಕ್ಕುಗಳನ್ನು ಬಳಸಬಹುದು.
ಪ್ಲಾಟ್‌ಫಾರಂನಲ್ಲಿ ಗುಂಪುಗಳ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಕೇವಲ ಅಡ್ಮಿನ್‌ಗಳು ಮತ್ತು ಮಾಡರೇಟರ್‌ಗಳು ಅಪ್‌ಡೇಟ್ ಮಾಡಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ಶೇರ್‌ಚಾಟ್ ಗುಂಪಿನ ಗೌಪ್ಯತೆ ಸೆಟ್ಟಿಂಗ್‌ಗೆ ಪದೇ ಪದೇ ಮಾಡುವ ಬದಲಾವಣೆಗಳನ್ನು ತಡೆಯಬಹುದು.
ಗುಂಪು 3,000 ಸದಸ್ಯರನ್ನು ಮೀರಿದ ನಂತರ ಗುಂಪಿನ ಗೌಪ್ಯತೆ ನೀತಿಯನ್ನು ಅಡ್ಮಿನ್ ಅಥವಾ ಮಾಡರೇಟರ್ ಬದಲಾವಣೆ ಮಾಡಲಾಗದು. ಆದಾಗ್ಯೂ, ಬಳಕೆದಾರರ ವಿನಂತಿಗಳು ಅಥವಾ ಇತರ ಪರಿಗಣನೆಗಳನ್ನು ಆಧರಿಸಿ ಶೇರ್‌ಚಾಟ್ ತಂಡಗಳು ಇಂತಹ ಬದಲಾವಣೆಗಳನ್ನು ಮಾಡಬಹುದು.
#
ಅಡ್ಮಿನ್‌ಗಳು ಮತ್ತು ಮಾಡರೇಟರ್‌ಗಳು#
ಗುಂಪು ನಿರ್ವಹಣೆ ಹುದ್ದೆಗಳುಗುಂಪನ್ನು ನಿರ್ವಹಿಸುವುದು ಅಡ್ಮಿನ್‌ಗಳು ಮತ್ತು ಮಾಡರೇಟರ್‌ಗಳು (ಒಟ್ಟಾರೆಯಾಗಿ "ಗುಂಪು ಮ್ಯಾನೇಜರ್‌ಗಳು") ಶೇರ್‌ಚಾಟ್ ಗುಂಪುಗಳಲ್ಲಿ ತೆಗೆದುಕೊಳ್ಳುವ ಸ್ವಯಂಪ್ರೇರಿತ ಹುದ್ದೆಯಾಗಿದೆ. ಸದಸ್ಯರನ್ನು ತೆಗೆದುಹಾಕುವ ಮತ್ತು ಗುಂಪುಗಳನ್ನು ಅಳಿಸುವ ಹೆಚ್ಚುವರಿ ಹಕ್ಕುಗಳು ಅಡ್ಮಿನ್‌ಗಳು ಹೊಂದಿರುತ್ತಾರೆ. ಅಡ್ಮಿನ್‌ಗಳು ಮತ್ತು ಮಾಡರೇಟರ್‌ಗಳಿಬ್ಬರೂ ಗುಂಪಿನ ನಿಯಮಗಳನ್ನು ಅಭಿವೃದ್ಧಿಪಡಿಸಬಹುದು, ಗುಂಪಿನ ವಿವರಣೆ / ಟ್ಯಾಗ್‌ಗಳನ್ನು ಒದಗಿಸಬಹುದು, ಪೋಸ್ಟ್‌ಗಳನ್ನು ಅಳಿಸಬಹುದು, ದೂರುಗಳನ್ನು ಪರಿಶೀಲಿಸಬಹುದು ಅಥವಾ ಸದಸ್ಯರನ್ನು ತಾತ್ಕಾಲಿಕವಾಗಿ ಅಮಾನತು ಮಾಡಬಹುದು.
ಗುಂಪನ್ನು ರಚಿಸುವ ಸಮಯದಲ್ಲಿ ಸ್ವಯಂ ನೇಮಕಾತಿಯನ್ನು ಮಾಡಬಹುದು ಅಥವಾ ಮೊದಲೇ ಅಡ್ಮಿನ್‌ಗಳು /ಮಾಡರೇಟರ್‌ಗಳಿಂದ ನೇಮಕಾತಿ ಮಾಡಲ್ಪಡಬಹುದು.
ಆದಾಗ್ಯೂ, ತಮ್ಮ ಅಧಿಕಾರವನ್ನು ಅವು ಗುಂಪಿನೊಳಗೆ ಮಾತ್ರ ಜಾರಿ ಮಾಡಬಹುದು. ಅಡ್ಮಿನ್‌ಗಳು/ಮಾಡರೇಟರ್‌ಗಳು ಶೇರ್‌ಚಾಟ್ ನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ. ಶೇರ್‌ಚಾಟ್ ತನ್ನ ವಿವೇಚನೆಯ ಮಿತಿಯಲ್ಲಿ ಅಥವಾ ಯಾವುದೇ ನಿಯಮಗಳ ಉಲ್ಲಂಘನೆ ಸೇರಿದಂತೆ ಯಾವುದೇ ಕಾರಣಕ್ಕೆ ಬಳಕೆದಾರರ ಅಡ್ಮಿನ್/ಮಾಡರೇಟರ್ ಹಕ್ಕನ್ನು ಹಿಂಪಡೆಯಬಹುದು.
ಗುಂಪು ಮ್ಯಾನೇಜರ್‌ಗಳ ಕೆಲವು ಪ್ರಮುಖ ಹುದ್ದೆಗಳು ಮತ್ತು ಜವಾಬ್ದಾರಿಗಳೆಂದರೆ:
ಪ್ರಮುಖ ಕಾರ್ಯನಿರ್ವಹಣೆ | ಅಡ್ಮಿನ್ | ಮಾಡರೇಟರ್ |
---|---|---|
ಇತರ ಅಡ್ಮಿನ್‌ಗಳನ್ನು ನೇಮಿಸಬಹುದು | ✓ | × |
ಇತರ ಮಾಡರೇಟರ್‌ಗಳನ್ನು ನೇಮಿಸಬಹುದು | ✓ | ✓ |
ಪೋಸ್ಟ್‌ಗಳನ್ನು ಮಿತಿಗೊಳಿಸಬಹುದು, ಅಮಾನತು ಮಾಡಬಹುದು | ✓ | × |
ಪೋಸ್ಟ್‌ಗಳನ್ನು ಅಮಾನತು ಮಾಡಬಹುದು, ಮಿತಿಗೊಳಿಸಬಹುದು ಮತ್ತು ಗುಂಪಿನ ಸದಸ್ಯರನ್ನು ತೆಗೆದುಹಾಕಬಹುದು | ✓ | ✓ |
Iಗುಂಪಿನ ನಿಯಮಗಳಿಗೆ ಬದ್ಧವಾಗಿಲ್ಲದಿದ್ದರೆ ಬಳಕೆದಾರರಿಗೆ ಎಚ್ಚರಿಕೆಗಳು/ ನೋಟಿಸ್‌ಗಳನ್ನು ನೀಡಬಹುದು | ✓ | ✓ |
ಗುಂಪನ್ನು ನಿರ್ವಹಿಸಲು ಅನುಮತಿಸುವ ಮೂಲಕ, ಗುಂಪು ಮ್ಯಾನೇಜರ್‌ಗಳು ಈ ಸಮ್ಮತಿಯನ್ನು ನೀಡುತ್ತಾರೆ:
- ನಮ್ಮ ಅನ್ವಯಿಕ ಮಾರ್ಗಸೂಚಿಗಳನ್ನು ಅನುಸರಿಸುವುದು.
- ಗುಂಪು ಸದಸ್ಯರಿಂದ ವರದಿಗಳು / ದೂರುಗಳನ್ನು ಸ್ವೀಕರಿಸುವುದು ಮತ್ತು ಪೋಸ್ಟ್‌ಗಳನ್ನು ತೆಗೆದುಹಾಕುವುದು, ಬಳಕೆದಾರರನ್ನು ಅಮಾನತು ಮಾಡುವುದು ಅಥವಾ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಅಗತ್ಯ ಯಾವುದೇ ಇತರ ಕ್ರಮಗಳನ್ನು ತೆಗೆದುಕೊಳ್ಳುವಂತಹ ಕ್ರಮಗಳನ್ನು ತೆಗೆದುಕೊಳ್ಳುವುದು.
- ಬದಲಿಗೆ ಮಾಡರೇಶನ್ ಕ್ರಮಗಳನ್ನು ತೆಗೆದುಕೊಳ್ಳುವುದು.
- ಗುಂಪು ಸಂಬಂಧಿ ನಿಯಮಗಳನ್ನು ರಚಿಸುವುದು ಮತ್ತು ಅವುಗಳನ್ನು ಜಾರಿಗೊಳಿಸುವುದು (ಅವು ನಿಯಮಗಳು ಅಥವಾ ಅಡ್ಮಿನ್ ಅಥವಾ ಮಾಡರೇಟರ್‌ಗೆ ಅನ್ವಯವಾಗುವ ಯಾವುದೇ ಇತರ ನಿಯಮಗಳಿಗೆ ಸಂಘರ್ಷ ಉಂಟು ಮಾಡುವಂತಿಲ್ಲ).
- ತಮ್ಮ ಕೆಲಸಗಳನ್ನು ಮಾಡಲು ಅವರು ಯಾವುದೇ ಸಂಭಾವನೆಯನ್ನು ಸ್ವೀಕರಿಸುವುದಿಲ್ಲ.
#
ಗುಂಪು ಮ್ಯಾನೇಜರ್‌ಗಳಿಗೆ ಮೌಲ್ಯಗಳು ಮತ್ತು ಉತ್ತಮ ಅಭ್ಯಾಸಗಳುಗುಂಪು ಮ್ಯಾನೇಜರ್‌ಗಳು ಇದಕ್ಕೆ ಬದ್ದವಾಗಿರಬೇಕು:
- ತಮ್ಮ ಗುಂಪುಗಳಲ್ಲಿ ಮಾಡಬೇಕಿರುವುದು ಮತ್ತು ಮಾಡಬಾರದವುಗಳ ಸ್ಪಷ್ಟ ಮಾರ್ಗಸೂಚಿಗಳನ್ನು ಒದಗಿಸುವುದು
- ಸಕ್ರಿಯವಾಗಿರಿ. ಗುಂಪು ಮ್ಯಾನೇಜರ್ ಆಗಿ ನಿಮ್ಮ ಸಮುದಾಯಕ್ಕೆ ನಾಯಕತ್ವವನ್ನು ಒದಗಿಸಿ. ಸೂಕ್ತವಿದ್ದಲ್ಲಿ ಎಚ್ಚರಿಕೆ ನೀಡಿ, ಬಳಕೆದಾರರಿಗೆ ಪ್ರತಿಕ್ರಿಯೆ ನೀಡಿ ಮತ್ತು ಅಗತ್ಯವಿದ್ದರೆ ಪೋಸ್ಟ್‌ಗಳನ್ನು ಮಿತಿಗೊಳಿಸಿ ಮತ್ತು ಅಮಾನತು ಮಾಡಿ
- ನಮ್ಮ ಸಮುದಾಯದೊಳಗೆ ಆರೋಗ್ಯಕರ ಮತ್ತು ತೊಡಗಿಸಿಕೊಳ್ಳುವ ಸಂವಾದಗಳನ್ನು ಪ್ರೋತ್ಸಾಹಿಸಿ. ನಮ್ಮ ಸಮುದಾಯ ನೀತಿಯನ್ನು ಉಲ್ಲಂಘಿಸಬಹುದಾದ ಯಾವುದೇ ಸಂವಾದಗಳನ್ನು ನೋಡಿ
- ಈ ಕೆಲಸದಲ್ಲಿ ನಿಮಗೆ ಸಹಾಯ ಮಾಡಲು ಗುಂಪು ಮ್ಯಾನೇಜರ್‌ಗಳು ತಂಡವನ್ನು ಅಭಿವೃದ್ಧಿಪಡಿಸಿ, ಸಹ ಅಡ್ಮಿನ್‌ಗಳು ಮತ್ತು ಮಾಡರೇಟರ್‌ಗಳನ್ನು ನೇಮಿಸಿ.
#
ಗುಂಪು ಮ್ಯಾನೇಜರ್‌ಗಳು ಮತ್ತು ಬಳಕೆದಾರರ ಸಾಮಾನ್ಯ ಸಮಸ್ಯೆಗಳುಶೇರ್ಚಾಟ್ ಗುಂಪುಗಳ ಸಮುದಾಯ ಸದಸ್ಯರಾಗಿ, ಇತರ ಬಳಕೆದಾರರನ್ನು ರಿಸ್ಕ್‌ಗೆ ದೂಡಬಹುದಾದ ವರ್ತನೆಯನ್ನು ದಯವಿಟ್ಟು ಗಮನಿಸಿ ಮತ್ತು ಗುರುತಿಸಿ/ವರದಿ ಮಾಡಿ. ಗುಂಪುಗಳಲ್ಲಿನ ಯಾವುದೇ ಚಟುವಟಿಕೆಯು ನಮ್ಮ ನೀತಿಗಳನ್ನು ಉಲ್ಲಂಘಿಸುತ್ತದೆ ಎಂದು ನೀವು ಭಾವಿಸಿದರೆ, ಇದನ್ನು ನಮ್ಮ ಅಪ್ಲಿಕೇಶನ್‌ನಲ್ಲಿ ನಮಗೆ ಅಥವಾ ನಿಮ್ಮ ಗುಂಪು ಮ್ಯಾನೇಜರ್‌ಗಳಿಗೆ ದಯವಿಟ್ಟು ವರದಿ ಮಾಡಿ.
#
ನಿಷೇಧಿತ ಅಭ್ಯಾಸಗಳುಗುಂಪುಗಳು ಈ ಕೆಳಗಿನವುಗಳಲ್ಲಿ ತೊಡಗಿಸಿಕೊಳ್ಳುವಂತಿಲ್ಲ ಎಂದು ಸ್ಪಷ್ಟವಾಗಿ ಗಮನಿಸಿ:
- ಸ್ಕ್ಯಾಮ್‌ಗಳು/ಮೋಸದ ಚಟುವಟಿಕೆ: ಬೇಗ ಶ್ರೀಮಂತರಾಗುವ ಸ್ಕೀಮ್‌ಗಳು, ನಕಲಿ ಉದ್ಯೋಗಗಳು ಅಥವಾ ತಪ್ಪುದಾರಿಗೆಳೆಯುವ, ಮೋಸ ಮಾಡುವ ಅಥವಾ ಬಳಕೆದಾರರನ್ನು ವಂಚಿಸುವ ಇತರ ಚುಟವಟಿಕೆಗಳನ್ನು ಪ್ರೋತ್ಸಾಹಿಸುವುದು.
- ಅಕ್ರಮ ಅಥವಾ ನಿಯಂತ್ರಿತ ಐಟಮಗಳು: ಅಕ್ರಮ ಸರಕುಗಳು ಅಥವಾ ಸೇವೆಗಳು ಹಾಗೂ ಬಳಕೆದಾರರು ಒದಗಿಸಲು ಅಧಿಕಾರ ಹೊಂದಿಲ್ಲದ ನಿಯಂತ್ರಿತ ಸರಕುಗಳು ಅಥವಾ ಸೇವೆಗಳ ಮಾರಾಟನವನ್ನು ಪ್ರೋತ್ಸಾಹಿಸುವುದು. ಉದಾಹರಣೆಗೆ, ಗ್ಯಾಂಬ್ಲಿಂಗ್, ಅಕ್ರಮ ಲಾಟರಿಗಳು, ಮಾದಕ ದ್ರವ್ಯ ಮತ್ತು ನಿಯಂತ್ರಿತ ಮಾದಕ ದ್ರವ್ಯ ಅಥವಾ ಶಿಫಾರಸು ಮಾಡಿದ ಔಷಧಗಳ ಮಾರಾಟ ಪ್ರೋತ್ಸಾಹಿಸುವುದು.
- ಸುಳ್ಳು ಸಹ ಸಂಬಂಧ: ಅಧಿಕಾರ ನೀಡಿಲ್ಲದಿದ್ದಲ್ಲಿ ಒಬ್ಬ ವ್ಯಕ್ತಿ, ಬ್ರಾಂಡ್ ಅಥವಾ ಸಂಸ್ಥೆಯ ಪರವಾಗಿ ವರ್ತಿಸುತ್ತಿದ್ದೇವೆ ಎಂಬ ಪರಿಕಲ್ಪನೆಯನ್ನು ಗುಂಪುಗಳು ಅಥವಾ ಗುಂಪುಗಳಲ್ಲಿನ ಚಟುವಟಿಕೆಗಳು ನೀಡಬಾರದು.
- ಅಪಾಯಕಾರಿ ಭಾಷಣ ಅಥವಾ ವ್ಯಕ್ತಿಗಳನ್ನು ಪ್ರೋತ್ಸಾಹಿಸುವುದು: ಅಪರಾಧ ಚಟುವಟಿಕೆಗಳು ಅಥವಾ ಇಂತಹ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ವ್ಯಕ್ತಿಗಳು / ಸಂಘಟನೆಗಳನ್ನು ಗುಂಪುಗಳು ಪ್ರೋತ್ಸಾಹಿಸುವಂತಿಲ್ಲ. ಯಾವುದೇ ಅಪರಾದ ಚಟುವಟಿಕೆ, ದ್ವೇಷ ಭಾಷಣ, ಹಿಂಸೆ ಮತ್ತು ಅಕ್ರಮ ಚಟುವಟಿಕೆಗಳನ್ನು ಪರಸ್ಪರರಲ್ಲಿ ನಡೆಸುವುದಕ್ಕಾಗಿ ಸಹಕಾರಕ್ಕೆ ಗುಂಪುಗಳನ್ನು ನೀವು ಬಳಸಬಾರದು.
- ಸಮ್ಮತಿಯಿಲ್ಲದ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು: ಯಾವುದೇ ವ್ಯಕ್ತಿಯನ್ನು ಅಪಾಯಕ್ಕೀಡು ಮಾಡುವ ಅಥವಾ ದುರ್ಬಳಕೆ ಮಾಡುವ, ವೇಶ್ಯಾವೃತ್ತಿ ಅಥವಾ ಎಸ್ಕಾರ್ಟ್ ಸೇವೆಗಳನ್ನು ಪ್ರೋತ್ಸಾಹಿಸುವ ಅಥವಾ ಬಯಸುವ ಉದ್ದೇಶಗಳಿಗೆ ಚಿತ್ರಗಳನ್ನು ಪೋಸ್ಟ್ ಮಾಡುವ ಕಂಟೆಂಟ್ ಅನ್ನು ಗುಂಪುಗಳು ಪ್ರೋತ್ಸಾಹಿಸುವಂತಿಲ್ಲ; ಮಕ್ಕಳ ಪೋರ್ನೋಗ್ರಫಿ (ರಚನೆ, ಪ್ರೋತ್ಸಾಹ, ಉತ್ತೇಜನ, ವರ್ಗಾವಣೆ ಅಥವಾ ಮಕ್ಕಳ ಪೋರ್ನೋಗ್ರಫಿಯನ್ನು ಬ್ರೌಸ್ ಮಾಡುವುದೂ ಸೇರಿದಂತೆ, ಇದಕ್ಕೆ ಸೀಮಿತಗೊಳ್ಳದಂತೆ); ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಲೈಂಗಿಕ ಮೂರ್ತೀಕರಣ, ಸಮ್ಮತಿಯಿಲ್ಲದ ಚಟುವಟಿಕೆಗಳು ಮತ್ತು ಲೈಂಗಿಕ ದೌರ್ಜನ್ಯದ ಕಂಟೆಂಟ್ ಅನ್ನು ಗುಂಪುಗಳು ಪ್ರೋತ್ಸಾಹಿಸುವಂತಿಲ್ಲ.
#
ಡೇಟಾ ಸಂಗ್ರಹಈ ಡೇಟಾ ಸಂಗ್ರಹ ಅಭ್ಯಾಸವನ್ನು ಶೇರ್‌ಚಾಟ್ ನಡೆಸುತ್ತಿಲ್ಲ, ನೀವು ನಡೆಸುತ್ತಿದ್ದೀರಿ ಎಂಬುದಾಗಿ ಬಳಕೆದಾರರಿಗೆ ಸ್ಪಷ್ಟವಾಗಿ ಮತ್ತು ಅಭಿವ್ತಕ್ತಿಪೂರ್ವಕವಾಗಿ ಸಂವಹನ ನಡೆಸಿ. ನಿಮ್ಮ ವಿನಂತಿಯಲ್ಲಿ ಉಲ್ಲೇಖಿಸಿದ ಉದ್ದೇಶಗಳಿಗೆ ಡೇಟಾ ಅನ್ನು ಬಳಸಬೇಕು. ಸಂಗ್ರಹಿಸಿದ ಡೇಟಾವನ್ನು ನಿರ್ದಿಷ್ಟಪಡಿಸಿದ ಉದ್ದೇಶಗಳಿಗೆ ಮಾತ್ರ ಮತ್ತು ಅನ್ವಯಿಕ ಕಾನೂನುಗಳಿಗೆ ಅನುಗುಣವಾಗಿ ಮಾತ್ರ ಬಳಸಿ.
ಶೇರ್‌ಚಾಟ್ ಇಂದ ನಿರ್ದಿಷ್ಟ ಅನುಮತಿ ಇಲ್ಲದೇ ನಮ್ಮ ಗುಂಪುಗಳಲ್ಲಿ ಸ್ವಯಂಚಾಲಿತ ಮತ್ತು ಸಾಮೂಹಿಕ ಡೇಟಾ ಸಂಗ್ರಹವನ್ನೂ ಬಳಕೆದಾರರಿಗೆ ನಿಷೇಧಿಸಲಾಗಿದೆ
#
ಪ್ರಚಾರಗಳು, ಸ್ಫರ್ಧೆಗಳು ಮತ್ತು ಇತರ ಚಟುವಟಿಕೆಗಳನ್ನು ನಡೆಸುವುದುಸ್ಫರ್ಧೆಗಳು, ಆಟಗಳು ಅಥವಾ ಇತರ ಪ್ರಚಾರ ಚಟುವಟಿಕೆಗಳನ್ನು ನಡೆಸಲು ನೀವು ಗುಂಪುಗಳನ್ನು ಬಳಸಬಹುದಾದರೂ, ಅನ್ವಯಿಕ ಕಾನೂನುಗಳಿಗೆ ಇಂತಹ ಚಟುವಟಿಕೆಗಳು ಬದ್ಧವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಳಕೆದಾರರು ಜವಾಬ್ದಾರರಾಗಿರುತ್ತಾರೆ. ಪ್ರತಿ ಸ್ಫರ್ಧೆಯ ಆಟಕ್ಕೂ ಬ್ರ್ಯಾಂಡ್‌ಗಳು, ಅಧಿಕಾರಿಗಳು ಮತ್ತು ಅಗತ್ಯಕ್ಕೆ ಅನುಗುಣವಾಗಿ ಯಾವುದೇ ಇತರ ಪಕ್ಷದಿಂದ ಅನುಮತಿ ಅಗತ್ಯವಿರುತ್ತದೆ. ಒದಗಿಸಿದ ಯಾವುದೇ ಬೆಲೆಗಳೂ ಅನ್ವಯಿಕ ಭಾರತೀಯ ಕಾನೂನುಗಳಿಗೆ ಅನುಗುಣವಾಗಿರಬೇಕು.
ಈ ಚಟುವಟಿಕೆಗಳನ್ನು ಶೇರ್‌ಚಾಟ್ ನಿಂದ ನಡೆಸಲಾಗುತ್ತಿಲ್ಲ ಮತ್ತು ಅವುಗಳಿಗೆ ಶೇರ್‌ಚಾಟ್ ಜವಾಬ್ದಾರನಲ್ಲ ಅಥವಾ ಹೊಣೆಗಾರನಲ್ಲ ಎಂದು ಸ್ಫರ್ಧಿಗಳು ಸ್ಪಷ್ಟವಾಗಿ ನಿರ್ದಿಷ್ಟಪಡಿಸಬೇಕು
#
ಬ್ರ್ಯಾಂಡ್‌ಗಳು ಮತ್ತು ಬೌದ್ಧಿಕ ಸ್ವತ್ತು ಬಳಕೆದಯವಿಟ್ಟು ಬ್ರ್ಯಾಂಡ್ ಹೆಸರುಗಳು, ಟ್ರೇಡ್‌ಮಾರ್ಕ್‌ಗಳು, ಹಕ್ಕುಸ್ವಾಮ್ಯ ಮತ್ತು ಇತರ ಬೌದ್ಧಿಕ ಸ್ವತ್ತನ್ನು ಅನ್ವಯಿಕ ಕಾನೂನುಗಳಿಗೆ ಅನುಗುಣವಾಗಿ ಬಳಸಿ. ಬ್ರ್ಯಾಂಡ್/ಸಂಸ್ಥೆಯೊಂದಿಗೆ ನಿಮ್ಮ ಸಹಭಾಗಿತ್ವ ಅಥವಾ ನಿಮ್ಮ ಚಟುವಟಿಕೆಗಳ ವಾಣಿಜ್ಯ ರೂಪಗಳ ಬಗ್ಗೆ ಅಗತ್ಯವಿದ್ದಲ್ಲಿ ಬಹಿರಂಗಗೊಳಿಸುವಿಕೆ ಮತ್ತು ಹಕ್ಕು ಹೇಳಿಕೆಗಳನ್ನು ದಯವಿಟ್ಟು ಒದಗಿಸಿ.
ನಿಮ್ಮ ಗುಂಪು ಫ್ಯಾನ್/ಬೆಂಬಲಿಗರ ಕ್ಲಬ್ ಆಗಿದ್ದರೆ ಅಥವಾ ಕೆಲವು ಸಂಸ್ಥೆಗಳು, ವ್ಯಕ್ತಿಗಳು ಅಥವಾ ಬ್ರ್ಯಾಂಡ್‌ಗಳ ಬಗ್ಗೆ ಚರ್ಚೆ ನಡೆಸುವುದಾಗಿದ್ದರೆ, ದಯವಿಟ್ಟು ಹಕ್ಕುಹೇಳಿಕೆಯನ್ನು ಪ್ರಕಟಿಸಿ ಮತ್ತು ಇಂತಹ ನಟರು, ವ್ಯಕ್ತಿಗಳು, ಬ್ರ್ಯಾಂಡ್‌ಗಳು ಅಥವಾ ಸಂಸ್ಥೆಗಳೊಂದಿಗೆ ನೀವು ಸಂಬಂಧ ಹೊಂದಿಲ್ಲ ಮತ್ತು ಅವರನ್ನು ಯಾವುದೇ ರೀತಿಯಲ್ಲಿ ಪ್ರತಿನಿಧಿಸುವುದಿಲ್ಲ ಎಂದು ಸ್ಪಷ್ಟವಾಗಿ ನಮೂದಿಸಿ.
#
ಗುಂಪಿನ ಹೆಸರುಗಳು ಮತ್ತು ಗುರುತುಗುಂಪಿನ ಹೆಸರುಗಳು ಸ್ಪಷ್ಟವಾಗಿ ಗುಂಪಿನ ಕಾರಣ ಮತ್ತು ಉದ್ದೇಶವನ್ನು ಸ್ಪಷ್ಟಪಡಿಸಬೇಕು. ಸೂಕ್ತವಿದ್ದಲ್ಲಿ ಅವರು ದ್ವೇಷಯುತ ಭಾಷೆಯನ್ನು ಬಳಸಬಾರದು, ತಮ್ಮ ವರ್ತನೆಯಲ್ಲಿ ಅತ್ಯಂತ ಸಹಜವಾಗಿರಬೇಕು ಮತ್ತು ಅಕ್ರಮ ಚಟುವಟಿಕೆಗಳನ್ನು ನಡೆಸಲು ಪ್ರೋತ್ಸಾಹಿಸಬಾರದು ಅಥವಾ ಅಕ್ರಮ / ಅಪಾಯಕಾರಿ ವ್ಯಕ್ತಿಗಳು ಅಥವಾ ಸಂಸ್ಥೆಗಳ ಪ್ರಚಾರವನ್ನು ಮಾಡಬಾರದು.
#
ಉದ್ಯೋಗ ಪೋಸ್ಟಿಂಗ್ಗಳುಗುಂಪುಗಳಲ್ಲಿ ಒದಗಿಸುವ ಯಾವುದೇ ಉದ್ಯೋಗ ಅಥವಾ ಇಂಟರ್ನ್‌ಶಿಪ್ ಹುದ್ದೆಗಳ ಬಗ್ಗೆ ದಯವಿಟ್ಟು ಸ್ಪಷ್ಟ ವಿವರಣೆಗಳನ್ನು, ಹೇಗೆ ಅರ್ಜಿ ಸಲ್ಲಿಸುವುದು, ಅರ್ಹತೆ ಮಾನದಂಡ, ಸಂಪರ್ಕ ವಿವರಗಳು ಮತ್ತು ಇತರ ಮಾಹಿತಿಯನ್ನು ನೀಡಿ. ಉದ್ಯೋಗ ಸ್ಕ್ಯಾಮ್‌ಗಳು ಅಥವಾ ಇತರ ಮೋಸದ ಅಭ್ಯಾಸಗಳನ್ನು ನಡೆಸಲು ಗುಂಪುಗಳನ್ನು ಬಳಸಲಾಗದು. ಆದಾಗ್ಯೂ, ನಮ್ಮ ಅನ್ವಯಿಕ ಕಾನೂನುಗಳ ಉಲ್ಲಂಘನೆಯಲ್ಲಿ ನೀವು ಅಕ್ರಮ, ಮೋಸದ ಅಥವಾ ಅಪಾಯಕಾರಿ ಉದ್ಯೋಗಗಳಿಗೆ ಜಾಹೀರಾತು ನೀಡಬಾರದು. ಉದ್ಯೋಗದ ಪೋಸ್ಟಿಂಗ್‌ಗಳು ಅಕ್ರಮವಾಗಿ ವ್ಯಕ್ತಿಗಳ ವಿರುದ್ಧ ಅಕ್ರಮವಾಗಿ ತಾರತಮ್ಯವನ್ನು ಉಂಟು ಮಾಡಬಾರದು.
#
ಗುಂಪು ಮತ್ತು ಬಳಕೆದಾರರ ವರ್ತನೆಯನ್ನು ವರದಿ ಮಾಡುವುದುಈ ಗುಂಪು ನೀತಿ ಅಥವಾ ಅನ್ವಯಿಕ ಕಾನೂನುಗಳು ಸೇರಿದಂತೆ ನಮ್ಮ ನಿಯಮಗಳಿಗೆ ಬಳಕೆದಾರರು ಬದ್ಧವಾಗಿಲ್ಲ ಎಂದು ಭಾವಿಸಿದರೆ ಯಾವುದೇ ಚಟುವಟಿಕೆಗಳನ್ನು ವರದಿ ಮಾಡಬಹುದು. ವರದಿಗಳನ್ನು (i) ಗುಂಪು ಮ್ಯಾನೇಜರ್ (ii) ಇನ್ನು ಕೆಲವು ಸನ್ನಿವೇಶಗಳಲ್ಲಿ ಶೇರ್‌ಚಾಟ್ ಗೆ ಸಲ್ಲಿಸಬಹುದು.
ಗುಂಪು ಮ್ಯಾನೇಜರ್ ಆಗಿ, ಗುಂಪಿನಲ್ಲಿ ಯಾರಾದರೂ ಯಾವುದೇ ಚಟುವಟಿಕೆಯನ್ನು ನಿಮಗೆ ವರದಿ ಮಾಡಿದರೆ ನಿಮಗೆ ಸೂಚನೆ ನೀಡಲಾಗುತ್ತದೆ. ಆಗ ನೀವು ವರದಿಯನ್ನು ಈ ರೀತಿ ನಿರ್ವಹಿಸಬಹುದು:
- ಯಾವುದೇ ಕ್ರಮ ತೆಗೆದುಕೊಳ್ಳದಂತೆ ನಿರ್ಧರಿಸುವುದು,
- ಬಳಕೆದಾರರಿಗೆ ಎಚ್ಚರಿಕೆ ನೀಡುವುದು
- ಪೋಸ್ಟ್ ಅನ್ನು ಮಾಡರೇಟ್ ಮಾಡುವುದು
- ಬಳಕೆದಾರರನ್ನು ಅಮಾನತು ಮಾಡುವುದು
- ಗುಂಪಿನಿಂದ ಬಳಕೆದಾರರನ್ನು ತೆಗೆದುಹಾಕುವುದು
ಇದರ ಜೊತೆಗೆ, ಗುಂಪಿನಲ್ಲಿ ಚಟುವಟಿಕೆಗಳ ಬಗ್ಗೆ ಬಳಕೆದಾರರ ದೂರುಗಳನ್ನು ನಾವೂ ಕೂಡ ಪರಿಶೀಲಿಸಬಹುದು. ಇಂತಹ ಸನ್ನಿವೇಶಗಳಲ್ಲಿ ನಾವು ನಿಯಮಗಳನ್ನು ಈ ರೀತಿಯಾಗಿ ಜಾರಿ ಮಾಡಬಹುದು:
- ಕೆಲವು ನಿಯಮಗಳನ್ನು ಜಾರಿಗೊಳಿಸುವಂತೆ ಕೇಳುವುದು ಅಥವಾ ಎಚ್ಚರಿಕೆಗಳನ್ನು ನೀಡುವುದು
- ತಾತ್ಕಾಲಿಕ ಅಮಾನತುಗಳು
- ಸವಲತ್ತುಗಳನ್ನು ತೆಗೆದುಹಾಕುವುದು,
- ಕಂಟೆಂಟ್ ತೆಗೆದುಹಾಕುವುದು ಅಥವಾ ಪ್ರವೇಶಾವಕಾಶ ಮಿತಿಗೊಳಿಸುವುದು / ಕಂಟೆಂಟ್ ತಲುಪುವಿಕೆ
- ಗುಂಪುಗಳಿಂದ ಬಳಕೆದಾರರನ್ನು ತೆಗೆದುಹಾಕುವುದು
- ಗುಂಪಿಗೆ ಹೊಸ ಸದಸ್ಯರ ಸೇರ್ಪಡೆಯನ್ನು ತಡೆಯುವುದು
- ಗುಂಪನ್ನು ನಿಷೇಧಿಸುವುದು / ಮುಚ್ಚುವುದು
#
ಸಾಮಾನ್ಯಪ್ಲಾಟ್ಫಾರಂನಲ್ಲಿನ ಗುಂಪುಗಳನ್ನು ಅರ್ಥವತ್ತಾದ ಸಂಪರ್ಕಗಳನ್ನು ರಚಿಸಲು, ಸಮಾನ ಮನಸ್ಕರೊಂದಿಗೆ ಸಂವಹನ ನಡೆಸಲು, ನಿಮ್ಮ ಅಭಿಪ್ರಾಯ ಮತ್ತು ಆಸಕ್ತಿಗಳನ್ನು ಹಂಚಿಕೊಳ್ಳಲು ಹಾಗೂ ಒಳನೋಟಗಳುಳ್ಳ ಚರ್ಚೆಗಳನ್ನು ನಡೆಸಲು ಪರಿಕರವನ್ನಾಗಿ ಬಳಸಬಹುದಾಗಿದೆ. ಸುರಕ್ಷಿತವಾದ ಮತ್ತು ಬೆಳೆಯುತ್ತಿರುವ ಸಮುದಾಯವನ್ನು ಪ್ರೋತ್ಸಾಹಿಸಲು, ಈ ಮೇಲಿನ ಮಾರ್ಗಸೂಚಿಗಳ ಗುಚ್ಛಕ್ಕೆ ಬದ್ಧವಾಗಿರುವುದು ಮತ್ತು ಪ್ಲಾಟ್‌ಫಾರಂನ ನೀತಿಗಳಿಗೆ ಅನುಗುಣವಾಗಿರುವುದು ಅಗತ್ಯ. ಸುರಕ್ಷಿತ ಸ್ಥಳವನ್ನು ರಚಿಸಲು ಮತ್ತು ಗುಂಪುಗಳ ವೈಶಿಷ್ಟ್ಯಗಳ ಮೂಲಕ ಪ್ಲಾಟ್‌ಫಾರಂನಲ್ಲಿ ವೈವಿಧ್ಯತೆ ಮತ್ತು ಸಮಗ್ರತೆಯನ್ನು ಪ್ರೋತ್ಸಾಹಿಸಲು ಸಹಾಯ ಮಾಡುವಂತೆ ಬಳಕೆದಾರರನ್ನು ನಾವು ಆಗ್ರಹಿಸುತ್ತೇವೆ. ವಿನಯದಿಂದ ಹಾಗುಯ ವಿನೀತವಾಗಿರುವಂತೆ ಮತ್ತು ದ್ವೇಷ ಭಾಷಣ, ದೌರ್ಜನ್ಯ, ನಿಂದನೆ, ಸ್ಪ್ಯಾಮ್ ಮತ್ತು ಅಕ್ರಮ ಚಟುವಟಿಕೆಗಳಿಂದ ದೂರವಿರುವಂತೆ ನಮ್ಮ ಬಳಕೆದಾರರನ್ನು ನಾವು ಪ್ರೋತ್ಸಾಹಿಸುತ್ತೇವೆ.