ನನ್ನ ಪ್ರೊಫೈಲ್ ಖಾಸಗಿಯಾಗಿದ್ದಾಗ ಏನಾಗುತ್ತದೆ?
ಸ್ವಯಂಚಾಲಿತವಾಗಿ ಫಾಲೋವಿಂಗ್ ಇಲ್ಲ
ನಿಮ್ಮೊಂದಿಗೆ ಸಂವಹನ ನಡೆಸಲು ಅಥವಾ ನಿಮ್ಮ ಪ್ರೊಫೈಲ್ ವಿವರಗಳನ್ನು ನೋಡಲು ಬಳಕೆದಾರರು ನಿಮಗೆ ಪಾಲೋ ವಿನಂತಿಯನ್ನು ಕಳುಹಿಸಬೇಕಾಗುತ್ತದೆ.
ಲಾಕ್ ಮಾಡಿದ ಪ್ರೊಫೈಲ್ ಚಿತ್ರ
ನಿಮ್ಮ ಫಾಲೋವರ್‌ಗಳಲ್ಲದ ಬಳಕೆದಾರರು ನಕಲಿ ಖಾತೆಯನ್ನು ರಚಿಸಲು ನಿಮ್ಮ ಪ್ರೊಫೈಲ್ ಚಿತ್ರ ಬಳಸಲಾಗದು ಅಥವಾ ಎಕ್ಸ್‌ಪಾಂಡ್ ಮಾಡಲಾಗದು.
ಪೋಸ್ಟ್‌ಗಳ ಗೌಪ್ಯತೆ
ನಿಮ್ಮ ಪೋಸ್ಟ್‌ಗಳಿಗೆ ಅನಗತ್ಯ ಅಥವಾ ಮನಸಿಗೆ ಬಂದ ಕಾಮೆಂಟ್‌ಗಳನ್ನು ಅನಾಮಿಕರು ಪೋಸ್ಟ್ ಮಾಡುವುದನ್ನು ತಡೆಯಿರಿ. ನಿಮ್ಮ ಪೋಸ್ಟ್‌ಗಳು ನಿಮ್ಮ ಪ್ರೊಫೈಲ್‌ನಲ್ಲಿ ಮತ್ತು ನಿಮ್ಮ ಫಾಲೋವರ್‌ಗಳ ಫಾಲೋ ಫೀಡ್‌ನಲ್ಲಿ ಮಾತ್ರ ಕಾಣಿಸುತ್ತದೆ. ಹಾಗೆಯೇ, ನಿಮ್ಮ ಪೋಸ್ಟ್‌ಗಳನ್ನು ಯಾರೂ ಡೌನ್‌ಲೋಡ್ ಮಾಡಲಾಗದು.
ಯಾವುದೇ ಅನಗತ್ಯ ಸಂದೇಶಗಳಿಲ್ಲ
ನೀವು ಅನುಮತಿಸುವವರು ಮಾತ್ರ ನಿಮಗೆ ಮೆಸೇಜ್ ಮಾಡಬಹುದು ಅಥವಾ ನೀವೇ ಮೊದಲು ಸಂವಹನ ಆರಂಭಿಸಿದವರು ಮಾತ್ರ ನಿಮಗೆ ಸಂದೇಶ ಕಳುಹಿಸಬಹುದು. ಇದರಿಂದ, ನಿಮ್ಮ ಇನ್‌ಬಾಕ್ಸ್‌ಗೆ ಅನಾಮಿಕರು ಅನಗತ್ಯ ಸಂದೇಶ ಕಳುಹಿಸುವುದನ್ನು ತಡೆಯುತ್ತದೆ/ಕಡಿಮೆ ಮಾಡುತ್ತದೆ.
ಯಾವುದೇ ವೈಯಕ್ತಿಕ ಮಾಹಿತಿ ಸಾರ್ವಜನಿಕವಲ್ಲ
ಇದು ನಿಮ್ಮ ಲಿಂಗ, ರಾಶಿ, ನೀವು ಸೇರಿದ ಗುಂಪುಗಳು ಅಥವಾ ನೀವು ಅಡ್ಮಿನ್ ಆಗಿರುವ ಗುಂಪುಗಳು, ಪ್ರಮುಖ ಕ್ರಿಯೇಟರ್ ಸ್ಥಿತಿ, ಫಾಲೋವಿಂಗ್ ಮತ್ತು ಫಾಲೋವರ್ಸ್ ಲಿಸ್ಟ್ ಅನ್ನೂ ಒಳಗೊಂಡಿರುತ್ತದೆ. ಈ ಎಲ್ಲ ಮಾಹಿತಿಯನ್ನು ನಿಮ್ಮ ಫಾಲೋವರ್‌ಗಳು ಮಾತ್ರ ನೋಡಬಹುದು.