Skip to main content

ಖಾತೆ ಡಿಲೀಟ್ ಮಾಡುವ ನೀತಿ - FAQs

Last updated: 14th December 2022

1. ಖಾತೆಯನ್ನು ಡಿಲೀಟ್ ಮಾಡುವ ಪ್ರಕ್ರಿಯೆಯನ್ನು ನೀವು ಹೇಗೆ ಪ್ರಾರಂಭಿಸುತ್ತೀರಿ?

  • ನಿಮ್ಮ ಆ್ಯಪ್ ನಲ್ಲಿ 'ಸೆಟ್ಟಿಂಗ್ಸ್' ಗೆ ಹೋಗಿ ಮತ್ತು 'ಅಕೌಂಟ್ ಡಿಲೀಟ್' ಕ್ಲಿಕ್ ಮಾಡಿ
  • ಲಾಗಿನ್ ಮಾಡಿ ಮತ್ತು ನಿಮ್ಮ ಖಾತೆಯನ್ನು ದೃಢೀಕರಿಸಿ.
  • ನಿಮ್ಮ ಮೊಬೈಲ್ ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನಮೂದಿಸಿ (ನಿಮ್ಮ ಖಾತೆಗೆ ಸಂಬಂಧಿಸಿದ ಸಂಬಂಧಿತ ಮಾಹಿತಿಯನ್ನು ಡೌನ್‌ಲೋಡ್ ಮಾಡಲು ನಿಮಗೆ ಸಹಾಯ ಮಾಡಲು ನಿಮ್ಮನ್ನು ಸಂಪರ್ಕಿಸಲು ಇದು ನಮಗೆ ಅನುವು ಮಾಡಿಕೊಡುತ್ತದೆ)
  • ನಿಮ್ಮ ಖಾತೆಯನ್ನು ಡಿಲೀಟ್ ಮಾಡಲು ನಿಮ್ಮ ಕಾರಣವನ್ನು ನಮೂದಿಸಿ (ನೀವು ಬಯಸಿದರೆ)
  • 'ಸಬ್ಮಿಟ್’' ಕ್ಲಿಕ್ ಮಾಡಿ

2. ಖಾತೆಯನ್ನು ಡಿಲೀಟ್ ಮಾಡಲು ನಾನು ವಿನಂತಿಯನ್ನು ಸಲ್ಲಿಸಿದಾಗ ಏನಾಗುತ್ತದೆ?

ಒಮ್ಮೆ ನೀವು ನಮ್ಮ ಆ್ಯಪ್ ನಿಂದ ಖಾತೆಯನ್ನು ಡಿಲೀಟ್ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದರೆ, ನಿಮ್ಮ ಖಾತೆಯನ್ನು ಪ್ರವೇಶಿಸಲು ನಿಮಗೆ ಸಾಧ್ಯವಾಗುವುದಿಲ್ಲ ಮತ್ತು ನಿಮ್ಮ ಪ್ರೊಫೈಲ್, ಲೈಕ್ಸ್, ಫಾಲೋವರ್ಸ್, ಕಾಮೆಂಟ್ಸ್, ಫೋಟೋಗಳು, ವಿಡಿಯೋಗಳು, ಪೋಸ್ಟ್‌ಗಳು, ಚಾಟ್‌ ಸೇರಿದಂತೆ ನಿಮ್ಮ ಖಾತೆಯ ಗುಣಲಕ್ಷಣಗಳು ಇತರರಿಗೆ ಗೋಚರಿಸುವುದಿಲ್ಲ. ಅಲ್ಲದೆ, ಆ್ಯಪ್ ಮೂಲಕ ಯಾವುದೇ ವಿಷಯವನ್ನು ಡೌನ್‌ಲೋಡ್ ಮಾಡಲು/ಶೇರ್ ಮಾಡಲು/ಪೋಸ್ಟ್ ಮಾಡಲು/ಅಪ್‌ಲೋಡ್ ಮಾಡಲು ಅಥವಾ ಲಭ್ಯವಾಗುವಂತೆ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ.

ನಿಮ್ಮ ಖಾತೆ ಮತ್ತು ಅದರ ಕಂಟೆಂಟ್ ಗಳನ್ನು ಸಂಪೂರ್ಣವಾಗಿ ಡಿಲೀಟ್ ಮಾಡಲು ನಮಗೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ನೀವು ಖಾತೆಯನ್ನು ಡಿಲೀಟ್ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ ನಂತರ ನಿಮ್ಮಿಂದ ರಚಿಸಲಾದ ಕಂಟೆಟ್ ನ ಕೆಲವು ಲಿಂಕ್‌ಗಳು ಕೆಲವು ದಿನಗಳವರೆಗೆ ಗೋಚರಿಸಬಹುದು. ಆದಾಗ್ಯೂ, ಅಂತಹ ಲಿಂಕ್‌ಗಳಿಂದ ನಿಮ್ಮ ಪ್ರೊಫೈಲ್ ಅನ್ನು ಪ್ರವೇಶಿಸಲಾಗುವುದಿಲ್ಲ.

ನಿಮ್ಮ ಖಾತೆಯನ್ನು ನೀವು ಡಿಲೀಟ್ ಮಾಡಿದ ನಂತರ, ಸೀಮಿತ ಅವಧಿಯವರೆಗೆ ವಿವಿಧ ನಿಯಂತ್ರಕ ಮತ್ತು ಅನುಸರಣೆ ಉದ್ದೇಶಗಳಿಗಾಗಿ ನಿಮ್ಮ ಖಾತೆಯಿಂದ ರಚಿಸಲಾದ ವೈಯಕ್ತಿಕ ಮಾಹಿತಿ ಸೇರಿದಂತೆ ಕೆಲವು ಡೇಟಾವನ್ನು ನಾವು ಉಳಿಸಿಕೊಳ್ಳುತ್ತೇವೆ. ನಿಮ್ಮ ಖಾತೆಯನ್ನು ಡಿಲೀಟ್ ಮಾಡುವುದಕ್ಕೆ ಸಂಬಂಧಿಸಿದ ಒಟ್ಟು ಮಾಹಿತಿಯನ್ನು ನಾವು ಉಳಿಸಿಕೊಳ್ಳಬಹುದು.

3. ನಾನು ಡಿಲೀಟ್ ಮಾಡುವ ವಿನಂತಿಯನ್ನು ನಿಲ್ಲಿಸಬಹುದೇ?

ಒಮ್ಮೆ ನೀವು ಖಾತೆ ಡಿಲೀಟ್ ಮಾಡುವ ವಿನಂತಿಯನ್ನು ಸಲ್ಲಿಸಿದರೆ, ನಿಮ್ಮ ವಿನಂತಿಯನ್ನು ಸಲ್ಲಿಸಿದ 30 ದಿನಗಳಲ್ಲಿ ನಮ್ಮ ಆ್ಯಪ್ ಗೆ ಲಾಗ್ ಇನ್ ಮಾಡಲು ಮತ್ತು ಡಿಲೀಟ್ ಮಾಡುವ ವಿನಂತಿಯನ್ನು ರದ್ದುಗೊಳಿಸಲು ನೀವು ಆಯ್ಕೆಯನ್ನು ಹೊಂದಿರುತ್ತೀರಿ. ಆದಾಗ್ಯೂ, 30 ದಿನಗಳ ನಂತರ, ನಿಮ್ಮ ಖಾತೆಯನ್ನು ಡಿಲೀಟ್ ಮಾಡಲಾಗುತ್ತದೆ ಮತ್ತು ಅದನ್ನು ಹಿಂಪಡೆಯಲಾಗುವುದಿಲ್ಲ.

4. ನನ್ನ ಡೇಟಾವನ್ನು ನಾನು ಹೇಗೆ ಡೌನ್‌ಲೋಡ್ ಮಾಡಬಹುದು?

ಖಾತೆ ಅಳಿಸುವಿಕೆ ವಿನಂತಿ ಸಲ್ಲಿಕೆ ಸಮಯದಲ್ಲಿ ನಮಗೆ ಒದಗಿಸಲಾದ ಇಮೇಲ್ ಐಡಿಯಲ್ಲಿ ನೀವು ಡೌನ್‌ಲೋಡ್ ಲಿಂಕ್ ಅನ್ನು ಪಡೆಯುತ್ತೀರಿ. ಡೌನ್‌ಲೋಡ್ ಲಿಂಕ್ ಇಮೇಲ್ ದಿನಾಂಕದಿಂದ ಏಳು (7) ದಿನಗಳ ಅವಧಿಯವರೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ನಿಮ್ಮ ಖಾತೆಯ ಡೇಟಾವನ್ನು ಡೌನ್‌ಲೋಡ್ ಮಾಡಲು ಇಮೇಲ್‌ನಲ್ಲಿ ಒದಗಿಸಲಾದ ಎಲ್ಲ ಹಂತಗಳನ್ನು ನೀವು ಅನುಸರಿಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇತರ ವಿಷಯಗಳ ಜೊತೆಗೆ ನಿಮ್ಮ ಖಾತೆಯ ಡೇಟಾವು ನೋಂದಣಿ ಸಮಯದಲ್ಲಿ ನಮಗೆ ಒದಗಿಸಿದಂತೆ ನಿಮ್ಮ ಪೋಸ್ಟ್‌ಗಳು, ಕಾಮೆಂಟ್‌ಗಳು, ನೇರ ಸಂದೇಶಗಳು ಮತ್ತು ಪ್ರೊಫೈಲ್ ವಿವರಗಳನ್ನು ಒಳಗೊಂಡಿರುತ್ತದೆ. ಆದ್ದರಿಂದ, ನಿಮ್ಮ ಖಾತೆಯ ಡೇಟಾವನ್ನು ಸ್ವೀಕರಿಸಲು ನಿಮ್ಮ ಸರಿಯಾದ ಇಮೇಲ್ ಐಡಿಯನ್ನು ಒದಗಿಸುವುದು ಮುಖ್ಯವಾಗಿದೆ. ಡೌನ್‌ಲೋಡ್‌ಗಾಗಿ ಈ ಮಾಹಿತಿಯ ನಕಲನ್ನು ನಿಮಗೆ ಒದಗಿಸಲು ನಮಗೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂಬುದನ್ನು ದಯವಿಟ್ಟು ಗಮನಿಸಿ.

5. ಡಿಲೀಟ್ ಮಾಡಿದ ನಂತರ ನನ್ನ ಖಾತೆಯಲ್ಲಿ ಲಭ್ಯವಿರುವ ಮಿಂಟ್ಸ್ ಮತ್ತು ಚೀರ್ಸ್‌ಗೆ ಏನಾಗುತ್ತದೆ?

ಖಾತೆಯನ್ನು ಡಿಲೀಟ್ ಮಾಡುವುದನ್ನು ಪ್ರಾರಂಭಿಸುವ ಮೊದಲು ಲಭ್ಯವಿರುವ ಕಾಯಿನ್ಸ್ ಅನ್ನು ಬಳಸಲು ನಾವು ಬಳಕೆದಾರರನ್ನು ಪ್ರೋತ್ಸಾಹಿಸುತ್ತೇವೆ. ಹಾಗಾಗಿ, ನಾವು ಯಾವುದೇ ಮರುಪಾವತಿಯನ್ನು ನೀಡುವುದಿಲ್ಲ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು https://help.sharechat.com/policies/coins-policy ನಲ್ಲಿ ಲಭ್ಯವಿರುವ ಕಾಯಿನ್ಸ್ ನೀತಿಯನ್ನು ನೋಡಿ.