ಶೇರ್‌ಚಾಟ್ ಬಳಕೆಯ ಷರತ್ತುಗಳು
Last updated: 31st August 2024
ಬಳಕೆಯ ಈ ಷರತ್ತುಗಳು ("ಷರತ್ತುಗಳು") ಭಾರತದ ಕಾನೂನುಗಳಡಿ ಸ್ಥಾಪಿತವಾಗಿರುವ ಖಾಸಗಿ ಸಂಸ್ಥೆಯಾದ, ಮೊಹಲ್ಲಾ ಟೆಕ್ ಪ್ರೈವೆಟ್ ಲಿಮಿಟೆಡ್, ನಾರ್ತ್ ಟವರ್ ಸ್ಮಾರ್ಟ್‌ವರ್ಕ್ಸ್, ವೈಷ್ಣವಿ ಟೆಕ್ ಪಾರ್ಕ್, ಸರ್ವೆ ನಂ. 16/1 & ನಂ. 17/2 ಅಂಬಲಿಪುರ ಗ್ರಾಮ, ವರ್ತೂರು ಹೋಬಳಿ, ಬೆಂಗಳೂರು ನಗರ, ಕರ್ನಾಟಕ - 560103 ಇಲ್ಲಿ ತನ್ನ ನೋಂದಾಯಿತ ಕಛೇರಿಯನ್ನು ಹೊಂದಿರುವ ಮೊಹಲ್ಲಾ ಟೆಕ್ ಪ್ರೈ. ಲಿ. ("ಶೇರ್‌ಚಾಟ್", "ಕಂಪನಿ", "ನಾವು", "ನಮಗೆ" ಮತ್ತು "ನಮ್ಮ") ಇವರಿಂದ ಲಭ್ಯವಾಗುವಂತೆ ಮಾಡಲ್ಪಟ್ಟ https://sharechat.com/ ಇಲ್ಲಿ ಸ್ಥಾಪಿತವಾಗಿರುವ ನಮ್ಮ ವೆಬ್‌ಸೈಟ್ ಮತ್ತು/ಅಥವಾ ಶೇರ್‌ಚಾಟ್ ಮೊಬೈಲ್ ಅಪ್ಲಿಕೇಶನ್ನಿನ (ಒಟ್ಟಾರೆಯಾಗಿ "ಪ್ಲ್ಯಾಟ್‌ಫಾರ್ಮ್") ನಿಮ್ಮ ಬಳಕೆಯನ್ನು ಆಳುತ್ತವೆ. "ನೀವು" ಮತ್ತು "ನಿಮ್ಮ" ಎಂಬ ಪದಗಳು ಈ ಪ್ಲ್ಯಾಟ್‌ಫಾರ್ಮ್‌ನ ಬಳಕೆದಾರರನ್ನು ಉಲ್ಲೇಖಿಸುತ್ತವೆ.
ಈ ಮಾರ್ಗಸೂಚಿಗಳು ಶೇರ್ ಚಾಟ್ ಬಳಕೆಯ ನಿಯಮಗಳನ್ನು, ಶೇರ್ ಚಾಟ್ ಪ್ರೈವಸಿ ಪಾಲಿಸಿ, ಮತ್ತು ಶೇರ್ ಚಾಟ್ ಕುಕಿ ಪಾಲಿಸಿ (ಒಟ್ಟಾರೆಯಾಗಿ, "ನಿಯಮಗಳು") ಜೊತೆಗೆ ಓದಬೇಕು. ಈ ಮಾರ್ಗಸೂಚಿಗಳಲ್ಲಿ ಬಳಸಲಾದ ದೊಡ್ಡಕ್ಷರ ಪದಗಳು ನಿಯಮಗಳಲ್ಲಿ ಅಂತಹ ಪದಗಳಿಗೆ ನೀಡಲಾದ ಅರ್ಥವನ್ನು ಹೊಂದಿವೆ.
ನಮ್ಮ ಸೇವೆಗಳು (ನಾವು ಕೆಳಗೆ ವಿವರಿಸಿದಂತೆ) ಮತ್ತು ಈ ನಿಯಮಗಳು ಭಾರತೀಯ ಪೀನಲ್ ಕೋಡ್, ೧೮೬೦, ಗೆ ಅನುಗುಣವಾಗಿರುತ್ತವೆ, ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ, ೨೦೦೦, ಅದರಲ್ಲಿ ಮಾಡಿದ ಎಲ್ಲಾ ತಿದ್ದುಪಡಿಗಳು ಮತ್ತು ಅದರ ಅಡಿಯಲ್ಲಿ ರೂಪುಗೊಂಡಿರುವ ನಿಯಮಗಳನ್ನು ಒಳಗೊಂಡಂತೆ. ನಮ್ಮ ಪ್ಲ್ಯಾಟ್ಫಾರ್ಮ್ನಲ್ಲಿ ನೀವು ಖಾತೆಯನ್ನು ರಚಿಸಿದಾಗ ಅಥವಾ ನಮ್ಮ ಪ್ಲ್ಯಾಟ್ಫಾರ್ಮ್ ಅಥವಾ ನಮ್ಮ ಯಾವುದೇ ಸೇವೆಗಳನ್ನು ಬಳಸಿದಾಗ, ನೀವು ಈ ನಿಯಮಗಳನ್ನು ಅಂಗೀಕರಿಸುತ್ತೀರಿ ಎಂದು ಒಪ್ಪುತ್ತೀರಿ. ಆದರೆ, ನಾವು ಭಾರತದ ಗಣರಾಜ್ಯ ಹೊರತುಪಡಿಸಿ ಯಾವುದೇ ದೇಶದ ಕಾನೂನುಗಳನ್ನು ಅನುಸರಣೆ ಪ್ರತಿನಿಧಿಸುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ನಮ್ಮ ಸೇವೆಗಳನ್ನು ಬಳಸಲು ನೀವು ಬಯಸಿದರೆ, ದಯವಿಟ್ಟು ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಹಾಗೆ ಮಾಡಲು ಅನುಮತಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.
ನಮ್ಮ ಪ್ಲ್ಯಾಟ್ಫಾರ್ಮ್ ಅನ್ನು ಬಳಸುವಾಗ ನೀವು ಮತ್ತು ನಾವು ಕೆಲವು ನಿಯಮಗಳನ್ನು ಪಾಲಿಸಬೇಕು. ಈ ಟರ್ಮ್ಸ್ ನಲ್ಲಿ ನಾವು ಈ ನಿಯಮಗಳನ್ನು ಪಟ್ಟಿ ಮಾಡಿದ್ದೇವೆ. ದಯವಿಟ್ಟು ಈ ಟರ್ಮ್ಸ್ ಗಳು ಮತ್ತು ಎಲ್ಲಾ ಇತರ ಹೈಪರ್ಲಿಂಕ್ ಗಳನ್ನು ಎಚ್ಚರಿಕೆಯಿಂದ ಓದಿ. ನಮ್ಮ ಪ್ಲಾಟ್ಫಾರ್ಮ್ ಬಳಸುವ ಮೂಲಕ, ನೀವು ಈ ನಿಯಮಗಳನ್ನು ಒಪ್ಪುತ್ತೀರಿ ಎಂಬುದನ್ನು ನೆನಪಿನಲ್ಲಿಡಿ. ಮತ್ತು, ನೀವು ಭಾರತದ ಹೊರಗೆ ಈ ಸೇವೆಗಳನ್ನು ಬಳಸುತ್ತಿದ್ದರೆ, ದಯವಿಟ್ಟು ನಿಮ್ಮ ಸ್ಥಳೀಯ ಕಾನೂನುಗಳನ್ನು ಅನುಸರಿಸಿರಿ.
ನಿಯಮಗಳು ಮತ್ತು ಸೇವೆಗಳಲ್ಲಿ ಬದಲಾವಣೆಗಳು
ನಮ್ಮ ಪ್ಲಾಟ್ಫಾರ್ಮ್ ಕ್ರಿಯಾಶೀಲವಾಗಿದ್ದು ಶೀಘ್ರವಾಗಿ ಬದಲಾಗಬಹುದು. ಹಾಗೆಯೇ, ನಮ್ಮ ವಿವೇಚನೆಯಿಂದ ನಾವು ಒದಗಿಸುವ ಸೇವೆಗಳನ್ನು ನಾವು ಬದಲಾಯಿಸಬಹುದು. ನಾವು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಯಾವುದೇ ವೈಶಿಷ್ಟ್ಯಗಳನ್ನು ಅಥವಾ ಸೇವೆಗಳನ್ನು ಸಾಮಾನ್ಯವಾಗಿ ನಿಲ್ಲಿಸಬಹುದು. ಯಾವುದೇ ಸೂಚನೆ ಇಲ್ಲದೆ ನಾವು ನಮ್ಮ ವೇದಿಕೆ ಮತ್ತು ಸೇವೆಗಳ ಕಾರ್ಯಗಳನ್ನು ತೆಗೆದುಹಾಕಬಹುದು ಅಥವಾ ಸೇರಿಸಬಹುದು. ಆದರೆ, ನಿಮ್ಮ ಸಮ್ಮತಿಯ ಅಗತ್ಯವಿರುವ ಬದಲಾವಣೆಯನ್ನು ನಾವು ಮಾಡಿದ್ದಲ್ಲಿ, ಅದನ್ನು ಕೇಳಿ ನಾವು ಖಚಿತಪಡಿಸಿಕೊಳ್ಳುತ್ತೇವೆ. ನಮ್ಮ ಇತ್ತೀಚಿನ ಬದಲಾವಣೆಗಳು ಮತ್ತು ಬೆಳವಣಿಗೆಗಳ ಕುರಿತು ನವೀಕರಿಸುವುದನ್ನು ಕಾಲಕಾಲಕ್ಕೆ ಈ ಪುಟಕ್ಕೆ ಭೇಟಿ ನೀಡಿ ದಯವಿಟ್ಟು ಖಚಿತಪಡಿಸಿಕೊಳ್ಳಿ.
ಕಾಲಕಾಲಕ್ಕೆ ನಾವು ಸೇರಿಸಿದಂತ ಅಥವಾ ಮಾರ್ಪಡಿಸಿದಂತ ಯಾವುದೇ ಬದಲಾವಣೆಗಳನ್ನು ಮತ್ತು ಸೇವೆಗಳನ್ನು ನೋಡಲು ಈ ಪುಟವನ್ನು ಭೇಟಿ ಮಾಡಿ.
ನಮ್ಮ ಸೇವೆಗಳನ್ನು ಯಾರು ಬಳಸಬಹುದು
ನಮ್ಮ ಪ್ಲ್ಯಾಟ್ಫಾರ್ಮ್ ನಿಮ್ಮ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ; ನಿಮ್ಮ ಮೆಚ್ಚಿನ ಪ್ರಾದೇಶಿಕ ಭಾಷೆಯಲ್ಲಿ ಚಿತ್ರಗಳು, ವೀಡಿಯೊಗಳು, ಸಂಗೀತ, ಸ್ಥಿತಿ ನವೀಕರಣಗಳು ಮತ್ತು ಹೆಚ್ಚಿನದನ್ನು ಹಂಚಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಮೆಚ್ಚಿನ ವಿಷಯವನ್ನು ನಾವು ಅರ್ಥಮಾಡಿಕೊಂಡು ಪೋಸ್ಟ್ಗಳು, ಚಿತ್ರಗಳು, ವೀಡಿಯೊಗಳು ನಿಮಗೆ ತೋರಿಸಲು ಮತ್ತು ನಿಮ್ಮ ಸುದ್ದಿ ಫೀಡ್ ಅನ್ನು ವೈಯಕ್ತೀಕರಿಸಿ ನಮ್ಮ ಪ್ಲಾಟ್ಫಾರ್ಮ್ನಲ್ಲಿ ಲಭ್ಯವಿರುವ ವಿಷಯವನ್ನು ಸೂಚಿಸುತ್ತೇವೆ ("ಸೇವೆ/ಸೇವೆಗಳು").
ನಮ್ಮೊಂದಿಗೆ ನೀವು ಬಂಧಿಸುವ ಒಪ್ಪಂದವನ್ನು ರಚಿಸುವ ಸಾಮರ್ಥ್ಯವನ್ನು ಹೊಂದಿದ್ದರೆ ಮಾತ್ರ ನಮ್ಮ ಸೇವೆಗಳನ್ನು ನೀವು ಬಳಸಬಹುದು ಮತ್ತು ನಮ್ಮ ಸೇವೆಗಳನ್ನು ಬಳಸಲು ಕಾನೂನುಬದ್ಧವಾಗಿ ಅನುಮತಿಸಲಾಗಿದೆ. ನೀವು ಕಂಪನಿಯ ಪರವಾಗಿ ಅಥವಾ ಯಾವುದೇ ಕಾನೂನು ವ್ಯಕ್ತಿಗಳ ಪರವಾಗಿ ಈ ನಿಯಮಗಳನ್ನು ಸ್ವೀಕರಿಸುತ್ತಿದ್ದರೆ, ಈ ನಿಯಮಗಳಿಗೆ ಅಂಟಿಕೊಳ್ಳುವ ಅಧಿಕಾರವನ್ನು ನೀವು ಹೊಂದಿದ್ದೀರಿ ಮತ್ತು ಪರಿಣಾಮಕಾರಿಯಾಗಿ "ನೀವು" ಮತ್ತು "ನಿಮ್ಮ" ಕಂಪನಿಯನ್ನು ಉಲ್ಲೇಖಿಸಬೇಕು ಎಂದು ನೀವು ಪ್ರತಿನಿಧಿಸುತ್ತೀರಿ ಮತ್ತು ಭರವಸೆ ನೀಡುತ್ತೀರಿ.
ಕಾನೂನಿನಡಿಯಲ್ಲಿ ನಮ್ಮ ಸೇವೆಗಳನ್ನು ಬಳಸಲು ನಿಮಗೆ ಅನುಮತಿ ಇದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.
ನಮ್ಮ ಸೇವೆಗಳನ್ನು ಹೇಗೆ ಬಳಸುವುದು
ನಾವು ಒಂದು ಅನನ್ಯ ವೇದಿಕೆಯನ್ನು ಅಭಿವೃದ್ಧಿಪಡಿಸಿದ್ದೇವೆ. ನಮ್ಮ ಸೇವೆಗಳು ಪ್ರತ್ಯೇಕವಾಗಿ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ. ನಾವು ವೈಯಕ್ತೀಕರಿಸಿದ ವಿಷಯವನ್ನು ನಿಮಗೆ ನೀಡಲು ಪ್ರಯತ್ನಿಸುತ್ತೇವೆ ಮತ್ತು ನೀವು ಆನಂದಿಸುವ ವಿಷಯವನ್ನು ತೋರಿಸುತ್ತೇವೆ. ನಮ್ಮ ಪ್ಲಾಟ್ಫಾರ್ಮ್ನಲ್ಲಿ ಲಭ್ಯವಿರುವ ವಿಷಯವನ್ನು ಡೌನ್ಲೋಡ್ ಮಾಡಲು ಮತ್ತು ಸಾಮಾಜಿಕ ಮಾಧ್ಯಮಗಳಾದ್ಯಂತ ನಿಮ್ಮ ಶೇರ್ ಚಾಟ್ ಅನುಭವವನ್ನು ಹಂಚಿಕೊಳ್ಳಲು ಸಹ ನಾವು ನಿಮಗೆ ಅವಕಾಶ ಮಾಡಿಕೊಡುತ್ತೇವೆ. ನಮ್ಮ ಸೇವೆಗಳನ್ನು ಬಳಸಲು, ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿ, SMS ಕಳುಹಿಸುವ ಮೂಲಕ ಮತ್ತು ಒಂದು ಬಾರಿ-ಪಾಸ್ವರ್ಡ್ (OTP) ಅನ್ನು ಬಳಸಿ ನಮ್ಮ ಪ್ಲ್ಯಾಟ್ಫಾರ್ಮ್ನಲ್ಲಿ ನೀವು ನೋಂದಾಯಿಸಬೇಕು. ಶೇರ್ ಚಾಟ್ ಮೊಬೈಲ್ ಅಪ್ಲಿಕೇಶನ್ ಅನ್ನು ನೀವು ನಮ್ಮೊಂದಿಗೆ ನೋಂದಾಯಿಸುವಾಗ, ನಿಮ್ಮ ಮೊಬೈಲ್ ಫೋನ್ ಬುಕ್, ನಿಮ್ಮ SMS ಇನ್ಬಾಕ್ಸ್, ನಿಮ್ಮ ಮೊಬೈಲ್ ಗ್ಯಾಲರಿ, ಮೊಬೈಲ್ ಸ್ಟೋರೇಜ್ ಮತ್ತು ಮೊಬೈಲ್ ಕ್ಯಾಮೆರಾವನ್ನು ಪ್ರವೇಶಿಸಲು ಸಹ ನೀವು ನಮಗೆ ಅವಕಾಶ ಮಾಡಿಕೊಡುತ್ತೀರಿ. ಆದರೆ, ನಿಮ್ಮ ಅನುಮತಿಯಿಲ್ಲದೆ ನಿಮ್ಮ ಮೊಬೈಲ್ ಸಾಧನ ಮತ್ತು ಕಂಪ್ಯೂಟರ್ನಲ್ಲಿ ಸಂಗ್ರಹವಾಗಿರುವ ಯಾವುದೇ ಮಾಹಿತಿಯನ್ನು ನಾವು ಓದಲಾಗುವುದಿಲ್ಲ
ನಿಮಗೆ ಸೇವೆಗಳನ್ನು ಒದಗಿಸಲು, ನಿಮ್ಮ ಮೊಬೈಲ್ ಸಾಧನದ ನಿಮ್ಮ ಕೆಲವು ವೈಶಿಷ್ಟ್ಯಗಳನ್ನು ನಾವು ಪ್ರವೇಶಿಸಬೇಕಾಗಿದೆ.
ಪ್ರೈವಸಿ ಪಾಲಿಸಿ
ನಿಮಗೆ ಯಾವುದೇ ಹೊಸ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸಲು ಮತ್ತು ಪರಿಚಯಿಸಲು, ನಿಮ್ಮ ಫೋನ್ ಸಂಖ್ಯೆ, ನಿಮ್ಮ ಲಿಂಗ ಮತ್ತು ನಿಮ್ಮ ಹೆಸರು ಮುಂತಾದ ಕೆಲವು ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ. ನಾವು ಇನ್ನೂ ಹೆಚ್ಚಿನ ಮಾಹಿತಿಯನ್ನು ನಿಮ್ಮಲ್ಲಿ ವಿನಂತಿಸಬಹುದು ಮತ್ತು ಸಂಗ್ರಹಿಸಬಹುದು. ಇಂತಹ ಮಾಹಿತಿಯನ್ನು ಅಮೆಜಾನ್ ವೆಬ್ ಸೇವೆಗಳಲ್ಲಿ ಅಥವಾ "AWS" ಕ್ಲೌಡ್ ಸರ್ವರ್ ಗಳಲ್ಲಿ ಮತ್ತು "ಗೂಗಲ್ ಕ್ಲೌಡ್ ಪ್ಲಾಟ್ಫಾರ್ಮ್" ಕ್ಲೌಡ್ ಸರ್ವರ್ ಗಳಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ, ಇದರಿಂದಾಗಿ AWS ಮತ್ತು ಗೂಗಲ್ ಕ್ಲೌಡ್ ನ ಪ್ರೈವಸಿ ಪಾಲಿಸಿಗಳು ಒಳಪಟ್ಟಿರುತ್ತದೆ. ಸಂಗ್ರಹಿಸಿದ ಮಾಹಿತಿಗಳನ್ನು ನಾವು ಹೇಗೆ ಸಂಗ್ರಹಿಸುತ್ತೇವೆ, ಬಳಸುತ್ತೇವೆ, ಹಂಚಿಕೊಳ್ಳುತ್ತೇವೆ ಮತ್ತು ಶೇಖರಿಸುತ್ತೇವೆ ಎಂದು ಶೇರ್ ಚಾಟ್ ಪ್ರೈವಸಿ ಪಾಲಿಸಿ ವಿವರಿಸುತ್ತದೆ. ಶೇರ್ ಚಾಟ್ ಪ್ರೈವಸಿ ಪಾಲಿಸಿಯು ನೀವು ನಮಗೆ ಒದಗಿಸುವ ಡೇಟಾವನ್ನು ನೀವು ಹೇಗೆ ನಿಯಂತ್ರಿಸಬಹುದು ಮತ್ತು ನಿಮ್ಮ ಹಕ್ಕುಗಳನ್ನು ಕಾನೂನಿನ ಅಡಿಯಲ್ಲಿ ತಿಳಿಸುತ್ತದೆ.
ಶೇರ್ ಚಾಟ್ ಪ್ರೈವಸಿ ಪಾಲಿಸಿಯಲ್ಲಿ ನಾವು ಈ ಮಾಹಿತಿಯನ್ನು ಹೇಗೆ ಸಂಗ್ರಹಿಸುತ್ತೇವೆ ಮತ್ತು ಬಳಸುತ್ತೇವೆ ಎಂದು ನಾವು ವಿವರಿಸಿದ್ದೇವೆ.
ಗೌಪ್ಯತೆ ನೀತಿಗೆ ಒಳಪಟ್ಟು ನಾವು ಪ್ಲಾಟ್‌ಫಾರ್ಮ್‌ನಲ್ಲಿ ಥರ್ಡ್-ಪಾರ್ಟಿಯ ಎಂಬೆಡಿಂಗ್‌ಗಳು ಮತ್ತು ಸೇವೆಗಳನ್ನು ಸಹ ಬಳಸಬಹುದು. ಅಂತಹ API ಸೇವೆಗಳು ಮತ್ತು ಎಂಬೆಡೆಡ್ ಬಳಕೆಯು ಅಂತಹ ಥರ್ಡ್-ಪಾರ್ಟಿಯ ಸೇವೆಗಳ ನೀತಿಗಳಿಂದ ಆವರಿಸಲ್ಪಟ್ಟಿದೆ. ಅಂತಹ ಎಂಬೆಡೆಡ್ ಅಥವಾ API ಸೇವೆಗಳನ್ನು ಬಳಸುವ ಮೂಲಕ, ಇಲ್ಲಿ ಒದಗಿಸಲಾದ ಮೂರನೇ ವ್ಯಕ್ತಿಯ ಸೇವಾ ನಿಯಮಗಳಿಗೆ ಬದ್ಧರಾಗಿರಲು ನೀವು ಸಮ್ಮತಿಸುತ್ತೀರಿ.
ನಿಮ್ಮ ಬದ್ಧತೆಗಳು
ವಿಶಾಲ ಸಮುದಾಯವೊಂದಕ್ಕೆ ಸುರಕ್ಷಿತ ಸೇವೆಯನ್ನು ಒದಗಿಸಲು ನಾವೆಲ್ಲರೂ ನಮ್ಮ ಭಾಗದ ಕೆಲಸವನ್ನು ಪೂರ್ಣಗೊಳಿಸಬೇಕಿರುತ್ತದೆ. ನಮ್ಮ ಸೇವೆಗಳನ್ನು ಒದಗಿಸುವ ನಮ್ಮ ಬದ್ದತೆಗೆ ಪ್ರತಿಯಾಗಿ, ಕೆಲವು ಬದ್ಧತೆಗಳನ್ನು ನೀವು ನಮಗೆ ಮಾಡಬೇಕಿರುತ್ತದೆ. ನಮಗೆ ನಿಮ್ಮ ಬದ್ಧತೆಗಳು:ಪ್ಲಾಟ್‌ಫಾರ್ಮ್‌ನಲ್ಲಿರುವ ಎಲ್ಲಾ ‘ಶೇರ್‌ಚಾಟ್ ಸ್ಟಾರ್ ರಚನೆಕಾರರು’, ಅಂದರೆ ನಮ್ಮ ಪಾಲುದಾರ ರಚನೆಕಾರರು ನೀಲಿ ಬಾರ್ಡರ್ ನೊಂದಿಗೆ ಗುರುತಿಸಬಹುದಾಗಿದೆ (ಅವರ ಪ್ರೊಫೈಲ್ ಚಿತ್ರದಲ್ಲಿ ಬಿಳಿ ಬಾರ್ಡರ್ ಬದಲಿಗೆ). ನಾವು ವಿಷಯ ಪರವಾನಗಿ ಅಥವಾ ಅಂತಹ ‘ಸ್ಟಾರ್ ಕ್ರಿಯೇಟರ್ಸ್’ ನೊಂದಿಗೆ ಮಾರ್ಕೆಟಿಂಗ್ ವ್ಯವಸ್ಥೆಗಳಿಗೆ ಪ್ರವೇಶಿಸಬಹುದು.
a. ಬೇರೆ ವ್ಯಕ್ತಿಯನ್ನು ಪ್ರತಿನಿಧಿಸುವ ಅಥವಾ ತಪ್ಪು ಮಾಹಿತಿಯನ್ನು ನೀಡದಿರುವುದು
ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿ ನಿಮ್ಮ ನಿಜವಾದ ಹೆಸರನ್ನು ನೀವು ಬಳಸಬೇಕಿಲ್ಲದಿದ್ದರೂ, ನಮ್ಮ ಸೇವೆಗಳನ್ನು ಬಳಸಿಕೊಳ್ಳಲು ನಿಮ್ಮ ಸರಿಯಾದ ಫೋನ್ ನಂಬರ್ ಹಾಗೂ ಲಿಂಗವನ್ನು ನೀವು ನಮೂದಿಸಬೇಕಿರುತ್ತದೆ. ನಮ್ಮ ಸೇವೆಗಳನ್ನು ಬಳಸಿಕೊಳ್ಳಲು ನಿಮ್ಮನ್ನು ನೀವು ಬೇರೆ ವ್ಯಕ್ತಿ ಅಥವಾ ಇನ್ನೊಬ್ಬ ವ್ಯಕ್ತಿಯ ಪ್ರತಿನಿಧಿಯ ರೂಪದಲ್ಲಿ ತಪ್ಪಾಗಿ ಪ್ರತಿನಿಧಿಸುವುದಿಲ್ಲ. ವ್ಯಂಗ್ಯ ಅಥವಾ ಹಾಸ್ಯದ ಉದ್ದೇಶಗಳಿಗಾಗಿ ವಿಡಂಬನಾತ್ಮಕ ಖಾತೆಯನ್ನು ನೀವು ಆಪರೇಟ್ ಮಾಡುತ್ತಿದ್ದ ಸಂದರ್ಭದಲ್ಲಿ, ನಿಮ್ಮ ಶೇರ್‌ಚಾಟ್ ಬಯೊನಲ್ಲಿ ನೀವು ಅದನ್ನು ನಮೂದಿಸಬೇಕು.
b. ಡಿವೈಸ್‌ನ ಭದ್ರತೆ
ನಮ್ಮ ಪ್ಲ್ಯಾಟ್‌ಫಾರ್ಮ್ ಸುಭದ್ರವಾಗಿರುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಕ್ರಮಗಳನ್ನು ನಾವು ಜಾರಿಗೊಳಿಸಿದ್ದೇವೆ. ಆದಾಗ್ಯೂ, ಹ್ಯಾಕಿಂಗ್ ಮತ್ತು ವೈರಸ್ ದಾಳಿಗಳಿಗೆ ನಮ್ಮ ಪ್ಲ್ಯಾಟ್‌ಫಾರ್ಮ್ ನಿರೋಧಕತೆಯನ್ನು ಹೊಂದಿರುತ್ತದೆ ಎಂಬ ಖಾತರಿ ಇರುವುದಿಲ್ಲ. ನಿಮ್ಮ ಮೊಬೈಲ್ ಡಿವೈಸ್ ಮತ್ತು ಕಂಪ್ಯೂಟರ್‌ಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅವುಗಳಲ್ಲಿ ಅವಶ್ಯಕ ಆ್ಯಂಟಿ-ಮಾಲ್‌ವೇರ್ ಹಾಗೂ ಆ್ಯಂಟಿ-ವೈರಸ್ ಸಾಫ್ಟ್‌ವೇರ್ ಅನ್ನು ನೀವು ಹೊಂದಿದ್ದೀರಿ ಎಂದು ನೀವು ಖಚಿತಪಡಿಸಿಕೊಳ್ಳುತ್ತೀರಿ. ನಿಮ್ಮ ಫೋನ್ ನಂಬರ್ ಅನ್ನು ಬಳಸಲು ಯಾವುದೇ ವ್ಯಕ್ತಿಯನ್ನು ನೀವು ಅನುಮತಿಸುವುದಿಲ್ಲ, ಹಾಗೂ ನಿಮ್ಮ ಫೋನ್ ನಂಬರಿಗೆ ಹಲವಾರು ಖಾತೆಗಳನ್ನು ಲಿಂಕ್ ಮಾಡಲು ಅನುಮತಿಸುವುದಿಲ್ಲ. ನಿಮ್ಮ ಫೋನ್ ನಂಬರಿಗೆ ಲಿಂಕ್ ಆಗಿರುವ ಯಾವುದೇ ಖಾತೆಯಿಂದ ಪೋಸ್ಟ್ ಮಾಡಲಾದ ಎಲ್ಲ ವಿಷಯಗಳಿಗೆ ನೀವು ಜವಾಬ್ದಾರರಾಗಿರುತ್ತೀರಿ.
ನಿಮ್ಮಿಂದ ನಮ್ಮ ಸೇವೆಗಳ ಬಳಸುವಿಕೆಯನ್ನು ಸುಭದ್ರಗೊಳಿಸಬೇಕಾದ ಪ್ರತಿಯೊಂದನ್ನೂ ನಾವು ಮಾಡುತ್ತಿದ್ದಾಗಲೂ, ನಮ್ಮ ಪ್ಲ್ಯಾಟ್‌ಫಾರ್ಮ್ ಮೇಲಿನ ಎಲ್ಲ ರೂಪದ ದಾಳಿಗಳನ್ನು ನಾವು ಮುಂಗಾಣಲಾಗುವುದಿಲ್ಲ ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ. ನಿಮ್ಮ ಮೊಬೈಲ್ ಡಿವೈಸ್ ಮತ್ತು ಕಂಪ್ಯೂಟರ್‌ಗಳು ತಪ್ಪಾಗಿ ಬಳಸಲ್ಪಡುವುದಿಲ್ಲ ಅಥವಾ ಯಾವುದೇ ರೀತಿಯಲ್ಲಿ ಹಸ್ತಕ್ಷೇಪಕ್ಕೊಳಗಾಗುವುದಿಲ್ಲ ಎಂಬುದನ್ನು ರೂಢಿಯ ಭಾಗವಾಗಿ ನೀವು ಖಚಿತಪಡಿಸಿಕೊಳ್ಳಬೇಕು.
c. ವಿಷಯ ತೆಗೆದುಹಾಕುವಿಕೆ ಮತ್ತು ಮುಕ್ತಾಯಗೊಳಿಸುವಿಕೆ
ನಮ್ಮ ಪ್ಲ್ಯಾಟ್‌ಫಾರ್ಮ್‌ನ ನಿಮ್ಮ ಬಳಕೆಯು ಶೇರ್‌ಚಾಟ್ ಕಂಟೆಂಟ್ ಅಂಡ್ ಕಮ್ಯುನಿಟಿ ಗೈಡ್‌ಲೈನ್ಸ್ ದಿಂದ ಆಳಲ್ಪಡುತ್ತದೆ. ನಿಮ್ಮ ವಿಷಯವು ಶೇರ್‌ಚಾಟ್ ಕಂಟೆಂಟ್ ಅಂಡ್ ಕಮ್ಯುನಿಟಿ ಗೈಡ್‌ಲೈನ್ಸ್‌ಗೆ ವಿರುದ್ಧವಾಗಿದೆ ಎಂದು ನಮ್ಮ ಯಾವುದೇ ಬಳಕೆದಾರರು ವರದಿ ಮಾಡಿದಲ್ಲಿ, ನಮ್ಮ ಪ್ಲ್ಯಾಟ್‌ಫಾರ್ಮ್‌ನಿಂದ ಅಂಥ ವಿಷಯವನ್ನು ನಾವು ತೆಗೆದುಹಾಕಬಹುದು. ಶೇರ್‌ಚಾಟ್ ಕಂಟೆಂಟ್ ಅಂಡ್ ಕಮ್ಯುನಿಟಿ ಗೈಡ್‌ಲೈನ್‌ಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಹಲವಾರು ವರದಿಗಳು ಮಾಡಲ್ಪಟ್ಟ ಸಂದರ್ಭದಲ್ಲಿ, ನಮ್ಮೊಂದಿಗೆ ನಿಮ್ಮ ಖಾತೆಯನ್ನು ಮುಕ್ತಾಯಗೊಳಿಸಲು ಹಾಗೂ ನಮ್ಮೊಂದಿಗೆ ನೋಂದಣಿ ಮಾಡಿಕೊಳ್ಳುವುದರಿಂದ ನಿಮ್ಮನ್ನು ನಿರ್ಬಂಧಿಸಲು ನಾವು ಒತ್ತಾಯಕ್ಕೊಳಗಾಗಬಹುದು. ಇಂಥ ಯಾವುದೇ ತೆಗೆದುಹಾಕುವಿಕೆಯ ವಿರುದ್ಧ ನೀವು ಮನವಿ ಮಾಡಬಯಸಿದಲ್ಲಿ, . ಈ ವಿಳಾಸಕ್ಕೆ ನೀವು ನಮಗೆ ಬರೆಯಬಹುದು.
ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿ ಶೇರ್ ಮಾಡಿಕೊಳ್ಳಲಾದ ಯಾವುದೇ ವಿಷಯವು ಶೇರ್‌ಚಾಟ್ ಕಂಟೆಂಟ್ ಅಂಡ್ ಕಮ್ಯುನಿಟಿ ಗೈಡ್‌ಲೈನ್ಸ್ ಅಡಿಯಲ್ಲಿ ನಿಷೇಧಿಸಲ್ಪಟ್ಟಿದ್ದಲ್ಲಿ, ಅಂಥ ವಿಷಯವನ್ನು ನಾವು ತೆಗೆದುಹಾಕಬಹುದು.
d. ಕಾನೂನುಬಾಹಿರ ಅಥವಾ ಕಾನೂನಿಗೆ ವಿರುದ್ಧವಾದ ಯಾವುದಕ್ಕೂ ಈ ಪ್ಲ್ಯಾಟ್‌ಫಾರ್ಮ್ ಅನ್ನು ಬಳಸಬಾರದು
ನಮ್ಮ ಪ್ಲ್ಯಾಟ್ಫಾರ್ಮ್ ಅನ್ನು ಹಲವಾರು ಭಾಷೆಗಳು ಹಾಗೂ ಸಂಸ್ಕೃತಿಗಳು, ಮತ್ತು ವೈವಿಧ್ಯಮಯ ವಿಷಯಗಳಿಗೆ ಸ್ಥಾನವನ್ನು ಕಲ್ಪಿಸಲು ವಿನ್ಯಾಸಗೊಳಿಸಲಾಗಿದೆ. ಈ ಕಾರಣಕ್ಕಾಗಿ, ವಿಷಯದ ಸ್ವರೂಪವನ್ನು ವರ್ಗೀಕರಿಸಲು ಹಲವಾರು ಟ್ಯಾಗ್‌ಗಳನ್ನು ನಾವು ಅಭಿವೃದ್ಧಿಪಡಿಸಿದ್ದೇವೆ. ಆದ್ದರಿಂದ, ನಿಮ್ಮಿಂದ ಶೇರ್ ಮಾಡಿಕೊಳ್ಳಲಾದ ವಿಷಯದ ಸ್ವರೂಪವನ್ನು ನೀವು ಸರಿಯಾಗಿ ಗುರುತಿಸಿ, ಅದನ್ನು ಸಮರ್ಪಕವಾಗಿ ಟ್ಯಾಗ್ ಮಾಡಬೇಕು. ಯಾವುದೇ ಹಿಂಸಾತ್ಮಕ ವಿಷಯವನ್ನೂ ಒಳಗೊಂಡಂತೆ ಎಲ್ಲ ವಯಸ್ಕ ವಿಷಯಗಳನ್ನು "ನಾನ್-ವೆಜ್" ಎಂಬುದಾಗಿ ಟ್ಯಾಗ್ ಮಾಡಬೇಕು.
ಆದಾಗ್ಯೂ, ಅಶ್ಲೀಲ, ಪೋರ್ನೋಗ್ರಾಫಿಕ್, ಅಪ್ರಾಪ್ತ ವಯಸ್ಕರಿಗೆ ಅಪಾಯಕಾರಿಯಾಗಿರುವ, ಪಕ್ಷಪಾತ ಮಾಡುವ, ದ್ವೇಷ ಭಾಷಣವನ್ನು ಪಸರಿಸುವ, ಯಾವುದೇ ವ್ಯಕ್ತಿಗಳ ವಿರುದ್ಧ ಯಾವುದೇ ರೀತಿಯ ಹಿಂಸೆ ಅಥವಾ ದ್ವೇಷವನ್ನು ಕೆರಳಿಸುವ, ಅಥವಾ ಸರ್ಕಾರಿ ದ್ರೋಹ ಸ್ವರೂಪದ, ಅಥವಾ ಭಾರತ ಗಣರಾಜ್ಯದ ಯಾವುದೇ ಕಾನೂನನ್ನು ಉಲ್ಲಂಘಿಸುವ, ಅಥವಾ ಭಾರತ ಗಣರಾಜ್ಯದ ಯಾವುದೇ ಕಾನೂನುಗಳಿಂದ ಶೇರ್ ಮಾಡುವುದನ್ನು ನಿರ್ಬಂಧಿಸಲಾದ ಯಾವುದೇ ವಿಷಯವನ್ನು ಶೇರ್ ಮಾಡಲು ನಮ್ಮ ಪ್ಲ್ಯಾಟ್ಫಾರ್ಮ್ ಅನ್ನು ಬಳಸತಕ್ಕದ್ದಲ್ಲ. ಇಂಥ ವಿಷಯವನ್ನು ತೆಗೆದುಹಾಕುವ ಹಕ್ಕನ್ನು ನಾವು ಕಾಯ್ದಿರಿಸುತ್ತೇವೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಶೇರ್‌ಚಾಟ್ ಕಂಟೆಂಟ್ ಅಂಡ್ ಕಮ್ಯುನಿಟಿ ಗೈಡ್‌ಲೈನ್ಸ್ ಅನ್ನು ಓದಿ.
ಈ ಮೇಲಿನದ್ದಕ್ಕೆ ಹೆಚ್ಚುವರಿಯಾಗಿ, ಯಾವುದೇ ಕಾನೂನುಬದ್ಧ ಬಾಧ್ಯತೆಯನ್ನು ಅಥವಾ ಯಾವುದೇ ಸರ್ಕಾರಿ ಕೋರಿಕೆಯನ್ನು ಅನುಸರಣೆ ಮಾಡುವುದಕ್ಕಾಗಿ; ಅಥವಾ ನಮ್ಮ ಸ್ವತ್ತು ಅಥವಾ ಸುರಕ್ಷತೆ, ನಮ್ಮ ಗ್ರಾಹಕರು, ಅಥವಾ ಸಾರ್ವಜನಿಕರ ಹಕ್ಕುಗಳನ್ನು ಸಂರಕ್ಷಿಸಲು ಅಥವಾ ಯಾವುದೇ ಅಪಾಯವನ್ನು ತಡೆಯಲು; ಅಥವಾ ಸಾರ್ವಜನಿಕ ಸುರಕ್ಷತೆ, ವಂಚನೆ, ಭದ್ರತೆ ಅಥವಾ ತಾಂತ್ರಿಕ ಸಮಸ್ಯೆಗಳನ್ನು ಪತ್ತೆ ಹಚ್ಚಲು, ತಡೆಯಲು ಅಥವಾ ಅನ್ಯಥಾ ಉದ್ದೇಶಿಸಲು ನಿಮ್ಮ ವೈಯಕ್ತಿಕ ದತ್ತಾಂಶ ಅಥವಾ ಮಾಹಿತಿಯನ್ನು ಹಂಚಿಕೊಳ್ಳುವುದು ಸಮಂಜಸವಾಗಿ ಅವಶ್ಯಕವಾಗಿದೆ ಎಂಬ ನಂಬಿಕೆ ವಿಶ್ವಾಸವನ್ನು ನಾವು ಹೊಂದಿದ್ದಲ್ಲಿ, ಸೂಕ್ತ ಕಾನೂನು ಜಾರಿ ಪ್ರಾಧಿಕಾರಗಳೊಂದಿಗೆ ನಿಮ್ಮ ಮಾಹಿತಿಯನ್ನು ನಾವು ಹಂಚಿಕೊಳ್ಳಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ಆದಾಗ್ಯೂ, ನಮ್ಮ ಪ್ಲ್ಯಾಟ್ಫಾರ್ಮ್ ಅನ್ನು ಬಳಸಿಕೊಳ್ಳುವ ಮೂಲಕ ನಿಮ್ಮಿಂದ ಅಥವಾ ಯಾವುದೇ ತೃತೀಯ ಪಕ್ಷ ಅಥವಾ ಬಳಕೆದಾರರಿಂದ ನಿಮಗೆ ಮಾಡಲಾದ ಯಾವುದೇ ಕ್ರಮಗಳಿಗೆ ನಮ್ಮನ್ನು ಜವಾಬ್ದಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ನೀವು ತಿಳಿದುಕೊಂಡಿರುತ್ತೀರಿ.
ಜನರು ಒಗ್ಗೂಡುವುದಕ್ಕಾಗಿ ಪ್ಲ್ಯಾಟ್‌ಫಾರ್ಮ್ ಒಂದನ್ನು ನಾವು ಅಭಿವೃದ್ಧಿಪಡಿಸಿದ್ದೇವೆ; ಕಾನೂನುಬಾಹಿರವಾಗಿರುವ ಅಥವಾ ಸಮಾಜ ಅಥವಾ ಸಮುದಾಯದ ಸದಸ್ಯರ ಯೋಗಕ್ಷೇಮಕ್ಕೆ ಯಾವುದೇ ಅಪಾಯವನ್ನುಂಟು ಮಾಡುವಂಥ ಯಾವುದೇ ವಿಷಯವನ್ನು ದಯವಿಟ್ಟು ಶೇರ್ ಮಾಡಬೇಡಿ.
e. ವಿಷಯದ ಹಕ್ಕುಗಳು ಮತ್ತು ಬಾಧ್ಯತೆಗಳು
ವ್ಯಕ್ತಪಡಿಸುವಿಕೆ ಸ್ವಾತಂತ್ರ್ಯವನ್ನು ನಾವು ಬಲವಾಗಿ ನಂಬುತ್ತೇವೆ, ಹಾಗೂ ಫೋಟೊಗ್ರಾಫ್‌ಗಳು, ಇಮೇಜ್‌ಗಳು, ವಿಡಿಯೋಗಳು, ಮ್ಯೂಜಿಕ್, ಸ್ಟೇಟಸ್ ಅಪ್ಡೇಟ್‌ಗಳು ಮತ್ತು ಇತರ ವಿಷಯವನ್ನು ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿ ಶೇರ್ ಮಾಡಿಕೊಳ್ಳಲು ನಿಮ್ಮನ್ನು ಅನುಮತಿಸುತ್ತೇವೆ. ನಿಮ್ಮಿಂದ ಶೇರ್ ಮಾಡಲಾದ ಯಾವುದೇ ವಿಷಯದ ಮೇಲೆ ಯಾವುದೇ ಮಾಲೀಕತ್ವವನ್ನು ನಾವು ಹೊಂದಿರುವುದಿಲ್ಲ ಹಾಗೂ ಆ ವಿಷಯದಲ್ಲಿನ ಹಕ್ಕುಗಳು ನಿಮ್ಮ ಬಳಿಯೇ ಉಳಿಯುತ್ತವೆ. ನಮ್ಮ ಅಥವಾ ಯಾವುದೇ ತೃತೀಯ ಪಕ್ಷದ ಬೌದ್ಧಿಕ ಸ್ವತ್ತು ಹಕ್ಕುಗಳನ್ನು ಉಲ್ಲಂಘನೆ ಮಾಡಲು ಅಥವಾ ಅತಿಕ್ರಮಿಸಲು ನಮ್ಮ ಪ್ಲ್ಯಾಟ್ಫಾರ್ಮ್ ಅನ್ನು ನೀವು ಬಳಸುವುದಿಲ್ಲ. ಇಂಥ ವಿಷಯವು ಶೇರ್‌ಚಾಟ್ ಕಂಟೆಂಟ್ ಮತ್ತು ಕಮ್ಯುನಿಟಿ ಗೈಡ್‌ಲೈನ್ಸ್‌ಗೆ ವಿರುದ್ಧವಾಗಿದ್ದು, ನಮ್ಮ ಪ್ಲ್ಯಾಟ್‌ಫಾರ್ಮ್‌ನಿಂದ ತೆಗೆದುಹಾಕಲ್ಪಡಬಹುದು. ಮುಂದುವರೆದು, ನಮ್ಮಿಂದ ಅಭಿವೃದ್ಧಿಪಡಿಸಲಾದ ಯಾವುದೇ ವಿಷಯವನ್ನು ನೀವು ಬಳಸಿದಲ್ಲಿ, ಇಂಥ ವಿಷಯದ ಮೇಲೆ ಬೌದ್ಧಿಕ ಸ್ವತ್ತು ಹಕ್ಕುಗಳನ್ನು ಹೊಂದಿರುವುದನ್ನು ನಾವು ಮುಂದುವರೆಸುತ್ತೇವೆ.
ನಮ್ಮ ಸೇವೆಗಳನ್ನು ಬಳಸಿಕೊಂಡು ವಿಷಯವನ್ನು ಹಂಚಿಕೊಳ್ಳುವ/ಪೋಸ್ಟ್ ಮಾಡುವ/ಅಪ್‌ಲೋಡ್ ಮಾಡುವ ಮೂಲಕ, ನೀವು ನಮಗೆ ವಿಶೇಷವಲ್ಲದ, ರಾಯಧನ-ಮುಕ್ತ, ವರ್ಗಾವಣೆ ಮಾಡಬಹುದಾದ, ಉಪ-ಪರವಾನಗಿ ನೀಡಬಹುದಾದ, ಹೋಸ್ಟ್ ಮಾಡಲು, ಬಳಸಲು, ವಿತರಿಸಲು, ಚಲಾಯಿಸಲು, ನಕಲಿಸಲು, ಸಾರ್ವಜನಿಕವಾಗಿ ನಿರ್ವಹಿಸಲು ಅಥವಾ ಪ್ರದರ್ಶಿಸಲು, ಭಾಷಾಂತರಿಸಲು, ಮತ್ತು ನಿಮ್ಮ ವಿಷಯದ ವ್ಯುತ್ಪನ್ನ ಕಾರ್ಯಗಳನ್ನು ರಚಿಸಿ (ನಿಮ್ಮ ಗೌಪ್ಯತೆ ಮತ್ತು ಅಪ್ಲಿಕೇಶನ್ ಸೆಟ್ಟಿಂಗ್‌ಗಳಿಗೆ ಅನುಗುಣವಾಗಿ). ನೀವು ಯಾವುದೇ ಹಂತದಲ್ಲಿ ನಿಮ್ಮ ವಿಷಯ ಮತ್ತು/ಅಥವಾ ಖಾತೆಯನ್ನು ಅಳಿಸಬಹುದು ಅಥವಾ ನಮ್ಮ ಡೇಟಾ ಧಾರಣ ನೀತಿಗಳ ಪ್ರಕಾರ ನಿಮ್ಮ ವಿಷಯವನ್ನು ಅಳಿಸಬಹುದು. ಆದಾಗ್ಯೂ, ನಿಮ್ಮ ವಿಷಯವನ್ನು ಇತರರೊಂದಿಗೆ ಹಂಚಿಕೊಂಡಿದ್ದರೆ ಪ್ಲಾಟ್‌ಫಾರ್ಮ್‌ನಲ್ಲಿ ಕಾಣಿಸಿಕೊಳ್ಳುವುದನ್ನು ಮುಂದುವರಿಸಬಹುದು. ಇದಲ್ಲದೆ, ನಿಮ್ಮ ಖಾತೆಯನ್ನು ಮರುಸ್ಥಾಪಿಸಲು ನೀವು ಆರಿಸಿದರೆ, ಖಾತೆ ಅಳಿಸುವಿಕೆಯನ್ನು ನೀವು ಪ್ರಾರಂಭಿಸಿದರೆ ಮಾತ್ರ ನಿಮ್ಮ ಖಾತೆಯನ್ನು ಮರುಸ್ಥಾಪಿಸಲು ನಾವು ನಿಮ್ಮ ವಿಷಯ ಮತ್ತು ಇತರ ಡೇಟಾವನ್ನು ಸೀಮಿತ ಅವಧಿಗೆ ಉಳಿಸಿಕೊಳ್ಳಬಹುದು. ನಾವು ಮಾಹಿತಿಯನ್ನು ಹೇಗೆ ಬಳಸುತ್ತೇವೆ ಮತ್ತು ನಿಮ್ಮ ವಿಷಯವನ್ನು ಹೇಗೆ ನಿಯಂತ್ರಿಸುವುದು ಅಥವಾ ಅಳಿಸುವುದು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ShareChat ಗೌಪ್ಯತೆ ನೀತಿಯನ್ನು ಓದಿ.
ನಮ್ಮ ಪ್ಲ್ಯಾಟ್ಫಾರ್ಮ್ನಲ್ಲಿ ನೀವು ಪೋಸ್ಟ್ ಮಾಡಿದ ವಿಷಯಕ್ಕೆ ನೀವು ಸಂಪೂರ್ಣವಾಗಿ ಜವಾಬ್ದಾರರಾಗಿ ಉಳಿಯುತ್ತೀರಿ. ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಥವಾ ಅದರ ಮೂಲಕ ಶೇರ್ ಮಾಡಲಾದ ಅಥವಾ ಪೋಸ್ಟ್ ಮಾಡಲಾದ ಯಾವುದೇ ವಿಷಯವನ್ನು, ಮತ್ತು ಇಂಥ ಶೇರ್ ಮಾಡುವಿಕೆ / ಪೋಸ್ಟ್ ಮಾಡುವಿಕೆಯ ಪರಿಣಾಮಗಳನ್ನು ನಾವು ಧೃಢೀಕರಿಸುವುದಿಲ್ಲ ಮತ್ತು ಜವಾಬ್ದಾರರಾಗಿರುವುದಿಲ್ಲ. ನಿಮ್ಮಿಂದ ಶೇರ್ ಮಾಡಿಕೊಳ್ಳಲಾದ ಯಾವುದೇ ವಿಷಯದ ಮೇಲೆ ನಮ್ಮ ಲೋಗೊ ಅಥವಾ ಯಾವುದೇ ಟ್ರೇಡ್‌ಮಾರ್ಕ್‌ನ ಉಪಸ್ಥಿತಿಯು ನಿಮ್ಮ ವಿಷಯವನ್ನು ನಾವು ಧೃಢೀಕರಿಸಿದ್ದೇವೆ ಅಥವಾ ಪ್ರಾಯೋಜಿಸಿದ್ದೇವೆ ಎಂದು ಅರ್ಥೈಸುವುದಿಲ್ಲ. ಮುಂದುವರೆದು, ನಮ್ಮ ಪ್ಲ್ಯಾಟ್‌ಫಾರ್ಮ್‌ನ ಇತರ ಬಳಕೆದಾರರೊಂದಿಗೆ ನೀವು ಮಾಡಿಕೊಳ್ಳಲಾದ ಯಾವುದೇ ವಹಿವಾಟುಗಳು ಅಥವಾ ಒಪ್ಪಂದಗಳ ಪರಿಣಾಮಗಳಿಗೆ ಬಾಧ್ಯಸ್ಥರಾಗಿರುವುದಿಲ್ಲ ಅಥವಾ ಜವಾಬ್ದಾರರಾಗಿರುವುದಿಲ್ಲ.
ನೀವು ಶೇರ್ ಮಾಡಿಕೊಳ್ಳುವ ವಿಷಯದ ಮಾಲೀಕತ್ವವನ್ನು ಹಾಗೂ ಅದಕ್ಕೆ ಜವಾಬ್ದಾರಿಗಳನ್ನು ನೀವು ಯಾವಾಗಲೂ ಹೊಂದಿರುತ್ತೀರಿ. ನಿಮ್ಮ ವಿಷಯದ ಮೇಲೆ ಬೌದ್ಧಿಕ ಸ್ವತ್ತು ಹಕ್ಕುಗಳನ್ನು ನಾವು ಹೊಂದಿದ್ದೇವೆ ಎಂಬುದಾಗಿ ನಾವು ಎಂದಿಗೂ ದಾವೆ ಮಾಡುವುದಿಲ್ಲ, ಆದರೆ ನಮ್ಮ ಪ್ಲ್ಯಾಟ್ಫಾರ್ಮ್ನಲ್ಲಿ ನೀವು ಶೇರ್ ಮಾಡಿ, ಪೋಸ್ಟ್ ಮಾಡುವುದನ್ನು ಬಳಸಿಕೊಳ್ಳಲು ಉಚಿತವಾದ, ಶಾಶ್ವತ ಪರವಾನಿಗೆಯನ್ನು ನಾವು ಹೊಂದಿರುತ್ತೇವೆ.
f. ಮಧ್ಯವರ್ತಿ ಸ್ಥಿತಿ ಹಾಗೂ ಬಾಧ್ಯತೆ ರಾಹಿತ್ಯತೆ
ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಮತ್ತು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು, 2021 ರ ಅಡಿಯಲ್ಲಿ ನಾವು ಮಧ್ಯವರ್ತಿಯಾಗಿದ್ದೇವೆ. ಈ ನಿಯಮಗಳನ್ನು ಮಾಹಿತಿ ತಂತ್ರಜ್ಞಾನದ ನಿಯಮ 3 (1) ರ ನಿಬಂಧನೆಗಳಿಗೆ ಅನುಗುಣವಾಗಿ ಪ್ರಕಟಿಸಲಾಗಿದೆ ( ನಮ್ಮ ಪ್ಲ್ಯಾಟ್ಫಾರ್ಮ್ ಅನ್ನು ಪ್ರವೇಶಿಸಲು ಮತ್ತು ಬಳಸಲು ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು, ನಿಯಮಗಳು ಮತ್ತು ನಿಯಮಗಳ ಪ್ರಕಟಣೆ, ಶೇರ್‌ಚಾಟ್ ಗೌಪ್ಯತೆ ನೀತಿ ಮತ್ತು ಶೇರ್‌ಚಾಟ್ ಬಳಕೆಯ ನಿಯಮಗಳು. ನೀವು ಮತ್ತು ಇತರ ಬಳಕೆದಾರರು ರಚಿಸಿದ ಅಥವಾ ಹಂಚಿಕೊಂಡ ವಿಷಯವನ್ನು ಅಪ್‌ಲೋಡ್ ಮಾಡಲು, ಹಂಚಿಕೊಳ್ಳಲು ಮತ್ತು ಪ್ರದರ್ಶಿಸಲು ಬಳಕೆದಾರರಿಗೆ ವೇದಿಕೆಯನ್ನು ಒದಗಿಸುವುದಕ್ಕೆ ನಮ್ಮ ಪಾತ್ರ ಸೀಮಿತವಾಗಿದೆ.
ಜನರು ಏನು ಮಾಡುತ್ತಾರೆ ಅಥವಾ ಹೇಳುತ್ತಾರೆ ಎಂಬುದನ್ನು ನಾವು ನಿಯಂತ್ರಿಸುವುದಿಲ್ಲ ಹಾಗಾಗಿ ಅವರ (ಅಥವಾ ನಿಮ್ಮ) ಕ್ರಿಯೆಗಳಿಗೆ (ಆನ್‌ಲೈನ್ ಆಗಿರಲಿ ಅಥವಾ ಆಫ್‌ಲೈನ್ ಆಗಿರಲಿ) ನಾವು ಜವಾಬ್ದಾರರಾಗಿರುವುದಿಲ್ಲ. ಇತರರಿಂದ ಒದಗಿಸಲಾಗುವ ಸೇವೆಗಳು ಮತ್ತು ವೈಶಿಷ್ಟ್ಯತೆಗಳಿಗೆ, ನೀವು ಅವುಗಳನ್ನು ನಮ್ಮ ಸೇವೆಗಳ ಮೂಲಕ ಪ್ರವೇಶಿಸಿದ್ದರೂ ಸಹ, ನಾವು ಜವಾಬ್ದಾರರಾಗಿರುವುದಿಲ್ಲ. ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿ ಉಂಟಾಗುವ ಯಾವುದಕ್ಕೇ ಆಗಲಿ ನಮ್ಮ ಜವಾಬ್ದಾರಿಯು ಕಟ್ಟುನಿಟ್ಟಾಗಿ ಭಾರತ ಗಣರಾಜ್ಯದ ಕಾನೂನುಗಳಿಂದ ಆಳಲ್ಪಡುತ್ತದೆ ಹಾಗೂ ಆ ಮಟ್ಟಿಗೇ ಸೀಮಿತವಾಗಿರುತ್ತದೆ. ಈ ಷರತ್ತುಗಳಿಂದ ಉದ್ಭವವಾಗುವ ಅಥವಾ ಅವುಗಳಿಗೆ ಸಂಬಂಧಿಸಿದ ಲಾಭಗಳು, ಆದಾಯಗಳು, ಮಾಹಿತಿ, ಅಥವಾ ದತ್ತಾಂಶದ ಯಾವುದೇ ನಷ್ಟಗಳು, ಅಥವಾ ತತ್ಪರಿಣಾಮಾತ್ಮಕ, ವಿಶೇಷ, ಪರೋಕ್ಷ, ಅನುಕರಣೀಯ, ದಂಡನಾತ್ಮಕ ಅಥವಾ ಪ್ರಾಸಂಗಿಕ ಹಾನಿಗಳಿಗೆ, ಅವುಗಳು ಸಾಧ್ಯವಿವೆ ಎಂಬುದು ನಮಗೆ ತಿಳಿದಿದ್ದರೂ ಸಹ, ನಾವು ಜವಾಬ್ದಾರರಾಗಿರುವುದಿಲ್ಲ ಎಂಬುದನ್ನು ನೀವು ಒಪ್ಪುತ್ತೀರಿ. ನಿಮ್ಮ ವಿಷಯ, ಮಾಹಿತಿ ಅಥವಾ ಖಾತೆಯನ್ನು ನಾವು ಅಳಿಸಿಹಾಕಿದಾಗಿನದನ್ನು ಇದು ಒಳಗೊಳ್ಳುತ್ತದೆ.
ಭಾರತೀಯ ಕಾನೂನಿನಡಿ ನಾವು ಒಬ್ಬ ಮಧ್ಯವರ್ತಿಯಾಗಿದ್ದೇವೆ. ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿ ಜನರು ಏನನ್ನು ಪೋಸ್ಟ್ ಮಾಡುತ್ತಾರೆ ಎಂಬುದನ್ನು ನಾವು ನಿಯಂತ್ರಿಸುವುದಿಲ್ಲ ಆದರೆ ಶೇರ್‌ಚಾಟ್ ಕಂಟೆಂಟ್ ಮತ್ತು ಕಮ್ಯುನಿಟಿ ಗೈಡ್‌ಲೈನ್ಸ್ ಅನ್ನು ಪ್ರತಿಯೊಬ್ಬರೂ ಅನುಸರಣೆ ಮಾಡುವುದನ್ನು ನಾವು ನಿರೀಕ್ಷಿಸುತ್ತೇವೆ.
g. ಶೇರ್‌ಚಾಟ್ ಅನ್ನು ಭಂಗಪಡಿಸಲು ಅಥವಾ ಅಪಾಯಕ್ಕೆ ತಳ್ಳಲು ನೀವು ಪ್ರಯತ್ನಿಸುವುದಿಲ್ಲ
ಒಂದು ಸಮುದಾಯ-ಪ್ರೇರಿತ ಪ್ಲ್ಯಾಟ್‌ಫಾರ್ಮ್ ಅನ್ನು ನಾವು ಅಭಿವೃದ್ಧಿಪಡಿಸಿದ್ದೇವೆ. ಹಾಗಾಗಿ, ನಮ್ಮ ಪ್ಲ್ಯಾಟ್‌ಫಾರ್ಮ್, ಸೇವೆಗಳು, ಮತ್ತು ನಮ್ಮ ಟೆಕ್ನಿಕಲ್ ಡೆಲಿವರಿ ಸಿಸ್ಟಂನಲ್ಲಿ ಹಸ್ತಕ್ಷೇಪ ಮಾಡದಿರಲು, ಅಥವಾ ಅದರ ಸಾರ್ವಜನಿಕವಲ್ಲದ ಪ್ರದೇಶಗಳನ್ನು ಬಳಸದಿರಲು ನೀವು ಒಪ್ಪುತ್ತೀರಿ. ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿ ಯಾವುದೇ ಟ್ರೋಜನ್‌ಗಳು, ವೈರಸ್‌ಗಳು, ಇತರ ಯಾವುದೇ ದುರುದ್ದೇಶಪೂರಿತ ಸಾಫ್ಟ್‌ವೇರ್, ಯಾವುದೇ ಬೋಟ್‌ಗಳನ್ನು ನೀವು ಪರಿಚಯಿಸುವುದಿಲ್ಲ ಅಥವಾ ಯಾವುದೇ ಬಳಕೆದಾರ ಮಾಹಿತಿಗಾಗಿ ನಮ್ಮ ಪ್ಲ್ಯಾಟ್ಫಾರ್ಮ್ ಅನ್ನು ಪರಚಾಡುವುದಿಲ್ಲ. ಹೆಚ್ಚುವರಿಯಾಗಿ, ನಮ್ಮಿಂದ ಅನುಷ್ಠಾನಗೊಳಿಸಲ್ಪಟ್ಟ ಯಾವುದೇ ವ್ಯವಸ್ಥೆ, ಭದ್ರತೆ ಅಥವಾ ದೃಢೀಕರಣ ಕ್ರಮಗಳನ್ನು ನೀವು ಪ್ರೋಬ್, ಸ್ಕ್ಯಾನ್ ಅಥವಾ ಟೆಸ್ಟ್ ಮಾಡುವುದಿಲ್ಲ. ನಮ್ಮ ತಾಂತ್ರಿಕ ವಿನ್ಯಾಸ ಹಾಗೂ ವಾಸ್ತುಶಿಲ್ಪದೊಂದಿಗೆ ನೀವು ಹಸ್ತಕ್ಷೇಪ ಮಾಡಿದಲ್ಲಿ ಅಥವಾ ಹಸ್ತಕ್ಷೇಪ ಮಾಡಲು ಯತ್ನಿಸಿದಲ್ಲಿ, ನಿಮ್ಮ ಯೂಜರ್ ಪ್ರೊಫೈಲ್ ಅನ್ನು ನಾವು ಮುಕ್ತಾಯಗೊಳಿಸಬಹುದು. ಇಂಥ ಕ್ರಿಯೆಗಳನ್ನು ಸೂಕ್ತ ಕಾನೂನು ಜಾರಿ ಪ್ರಾಧಿಕಾರಗಳಿಗೆ ನಾವು ಮುಂದುವರೆದು ವರದಿ ಮಾಡಬಹುದು ಹಾಗೂ ನಿಮ್ಮ ವಿರುದ್ಧ ಕಾನೂನಾತ್ಮಕ ಕ್ರಮಗಳನ್ನು ಆರಂಭಿಸಬಹುದು.
ನಮ್ಮ ಪ್ಲ್ಯಾಟ್ಫಾರ್ಮ್ ಅನ್ನು ನೀವು ಹ್ಯಾಕ್ ಮಾಡುವುದಿಲ್ಲ ಅಥವಾ ಯಾವುದೇ ರೀತಿಯ ದುರುದ್ದೇಶಪೂರಿತ ಸಾಫ್ಟ್‌ವೇರ್ ಅನ್ನು ಅದರೊಳಗೆ ಪರಿಚಯಿಸುವುದಿಲ್ಲ. ಇಂಥ ಕ್ರಿಯೆಗಳನ್ನು ನೀವು ಮಾಡಿದಲ್ಲಿ ನಮ್ಮ ಪ್ಲ್ಯಾಟ್‌ಫಾರ್ಮ್‌ನಿಂದ ನಿಮ್ಮನ್ನು ನಾವು ತೆಗೆದುಹಾಕಬಹುದು ಮತ್ತು ನಿಮ್ಮ ಕ್ರಿಯೆಗಳನ್ನು ಪೋಲೀಸರಿಗೂ ಸಹ ವರದಿ ಮಾಡಬಹುದು.
ಲೈವ್ಸ್
ಶೇರ್‌ಚಾಟ್ ಪ್ಲಾಟ್‌ಫಾರ್ಮ್‌ನ ಭಾಗವಾಗಿ ನಾವು ಲೈವ್ಸ್ ವೈಶಿಷ್ಟ್ಯವನ್ನು ಒದಗಿಸುತ್ತೇವೆ ಅದು ನಿಮ್ಮ ನೈಜ-ಸಮಯದ ವೀಡಿಯೊಗಳನ್ನು ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರ ಮಾಡಲು ಅನುವು ಮಾಡಿಕೊಡುತ್ತದೆ. ನೀವು ಪ್ರಸಾರ ಮಾಡಿದ ಲೈವ್ ವೀಡಿಯೊಗಳಲ್ಲಿ ಇತರ ಬಳಕೆದಾರರು ಕಾಮೆಂಟ್ ಮಾಡಬಹುದು, ಇದರಿಂದಾಗಿ ನೈಜ-ಸಮಯದ ಸಂವಹನಕ್ಕೆ ಅವಕಾಶ ನೀಡುತ್ತದೆ.
ಲೈವ್ಸ್ ವೈಶಿಷ್ಟ್ಯವನ್ನು ಬಳಸಿಕೊಂಡು ಅಪ್‌ಲೋಡ್ ಮಾಡಲಾದ ಎಲ್ಲಾ ವಿಷಯಗಳು ಶೇರ್‌ಚಾಟ್ ವಿಷಯ ಮತ್ತು ಸಮುದಾಯ ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತದೆ. ಈ ನಿಯಮಗಳು ಮತ್ತು ಶೇರ್‌ಚಾಟ್ ವಿಷಯ ಮತ್ತು ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಈ ವೈಶಿಷ್ಟ್ಯವನ್ನು ಬಳಸಿಕೊಂಡು ಅಪ್‌ಲೋಡ್ ಮಾಡಿದ ಯಾವುದೇ ವಿಷಯವನ್ನು ತಕ್ಷಣ ತೆಗೆದುಹಾಕುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ.
ನಾವು ಕಾಲಕಾಲಕ್ಕೆ, ಲೈವ್ಸ್ ವೈಶಿಷ್ಟ್ಯದ ಕಾರ್ಯವನ್ನು ಸೇರಿಸಬಹುದು, ತೆಗೆದುಹಾಕಬಹುದು ಅಥವಾ ಬದಲಾಯಿಸಬಹುದು. ನಾವು ಯಾವುದೇ ಸಮಯದಲ್ಲಿ ಶೇರ್‌ಚಾಟ್ ಪ್ಲಾಟ್‌ಫಾರ್ಮ್‌ನಿಂದ ಲೈವ್ಸ್ ವೈಶಿಷ್ಟ್ಯವನ್ನು ನಿಲ್ಲಿಸಬಹುದು. ಲೈವ್ಸ್ ವೈಶಿಷ್ಟ್ಯವು ದೋಷ-ಮುಕ್ತ ಅಥವಾ ಯಾವಾಗಲೂ ಲಭ್ಯವಿರುತ್ತದೆ ಎಂದು ನಾವು ಖಾತರಿಪಡಿಸುವುದಿಲ್ಲ, ಲೈವ್ಸ್ ವೈಶಿಷ್ಟ್ಯವು ಯಾವಾಗಲೂ ಅಡೆತಡೆಗಳಿಲ್ಲದೆ ಕಾರ್ಯನಿರ್ವಹಿಸುತ್ತದೆ ಅಥವಾ ಲೈವ್ಸ್ ವೈಶಿಷ್ಟ್ಯವನ್ನು ಬಳಸಿಕೊಂಡು ಇತರ ಬಳಕೆದಾರರು ಪೋಸ್ಟ್ ಮಾಡುವ ಯಾವುದೇ ವಿಷಯವು ನಿಖರವಾಗಿರುತ್ತದೆ.
ಇತರ ಬಳಕೆದಾರರೊಂದಿಗೆ ನೈಜ-ಸಮಯದ ಆಧಾರದ ಮೇಲೆ ಸಂವಹನ ನಡೆಸಲು ನಾವು ಲೈವ್ಸ್ ವೈಶಿಷ್ಟ್ಯವನ್ನು ಒದಗಿಸುತ್ತೇವೆ ಆದರೆ ಶೇರ್‌ಚಾಟ್ ವಿಷಯ ಮತ್ತು ಸಮುದಾಯ ಮಾರ್ಗಸೂಚಿಗಳ ಅಡಿಯಲ್ಲಿ ನಿಷೇಧಿಸಲಾದ ವಿಷಯವನ್ನು ಅಪ್‌ಲೋಡ್ ಮಾಡಲು ನೀವು ವೈಶಿಷ್ಟ್ಯವನ್ನು ದುರುಪಯೋಗಪಡಿಸಿಕೊಳ್ಳಬಾರದು. ಈ ವೈಶಿಷ್ಟ್ಯದ ನಿರಂತರ ಲಭ್ಯತೆಯನ್ನು ನಾವು ಖಾತರಿಪಡಿಸುವುದಿಲ್ಲ.
ಶೇರ್‌ಚಾಟ್ ಸ್ಟಾರ್ ಸೃಷ್ಟಿಕರ್ತ
ಪ್ಲಾಟ್‌ಫಾರ್ಮ್‌ನಲ್ಲಿರುವ ಎಲ್ಲಾ ‘ಶೇರ್‌ಚಾಟ್ ಸ್ಟಾರ್ ರಚನೆಕಾರರು’, ಅಂದರೆ ನಮ್ಮ ಪಾಲುದಾರ ರಚನೆಕಾರರು ನೀಲಿ ಬಾರ್ಡರ್ ನೊಂದಿಗೆ ಗುರುತಿಸಬಹುದಾಗಿದೆ (ಅವರ ಪ್ರೊಫೈಲ್ ಚಿತ್ರದಲ್ಲಿ ಬಿಳಿ ಬಾರ್ಡರ್ ಬದಲಿಗೆ). ನಾವು ವಿಷಯ ಪರವಾನಗಿ ಅಥವಾ ಅಂತಹ ‘ಸ್ಟಾರ್ ಕ್ರಿಯೇಟರ್ಸ್’ ನೊಂದಿಗೆ ಮಾರ್ಕೆಟಿಂಗ್ ವ್ಯವಸ್ಥೆಗಳಿಗೆ ಪ್ರವೇಶಿಸಬಹುದು.
ಅನುಸರಣೆ ಅವಶ್ಯಕತೆಗಳು
ಸಂಬಂಧಿತ ಸುದ್ದಿ ಮತ್ತು ಪ್ರಸಕ್ತ ವ್ಯವಹಾರಗಳ ಪ್ರಕಾಶಕರು ತಮ್ಮ ಶೇರ್‌ಚಾಟ್ ಬಳಕೆದಾರರ ಖಾತೆಗಳ ವಿವರಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಅನ್ವಯಿಸುವ ನಿಯಮಗಳ ಪ್ರಕಾರ ಒದಗಿಸಬೇಕಾಗುತ್ತದೆ.
ನೀವು ನಮಗೆ ನೀಡುವ ಅನುಮತಿಗಳು
ಈ ಷರತ್ತುಗಳನ್ನು ನೀವು ಅಂಗೀಕರಿಸಿ, ನಿಮಗೆ ನಾವು ಹೆಚ್ಚು ಉತ್ತಮ ಸೇವೆಯನ್ನು ಒದಗಿಸಲು ಅನುವಾಗುವಂತೆ ಕೆಲವು ಅನುಮತಿಗಳನ್ನು ನಮಗೆ ನೀಡುತ್ತೀರಿ. ನೀವು ನಮಗೆ ನೀಡಿರುವ ಅನುಮತಿಗಳು:
a. ನಿಮ್ಮ ಪ್ರೊಫೈಲ್ ಮಾಹಿತಿಯನ್ನು ತೃತೀಯ ಪಕ್ಷಗಳೊಂದಿಗೆ ಶೇರ್ ಮಾಡಿಕೊಳ್ಳುವ ಅನುಮತಿ
ನಮ್ಮ ಪ್ಲ್ಯಾಟ್‌ಫಾರ್ಮ್ ಉಚಿತವಾಗಿ ಪ್ರವೇಶಿಸಿ, ಬಳಸಬಹುದಾದ ಪ್ಲ್ಯಾಟ್‌ಫಾರ್ಮ್ ಆಗಿದ್ದಾಗಲೂ, ನಮ್ಮ ಸೇವೆಗಳನ್ನು ನಿಮಗೆ ಉಚಿತವಾಗಿ ಒದಗಿಸಲು ಸಾಧ್ಯವಾಗುವಂತೆ ಆದಾಯವನ್ನು ನಾವು ಹುಟ್ಟು ಹಾಕಬೇಕಿರುತ್ತದೆ. ಇದಕ್ಕೆ ಅನುಸಾರವಾಗಿ, ನಿಮ್ಮ ಯೂಜರ್‌ನೇಮ್ ಮತ್ತು ಲಿಂಗ, ಮತ್ತು ಯಾವುದೇ ಪ್ರಾಯೋಜಿತ ವಿಷಯ ಅಥವಾ ಜಾಹಿರಾತುಗಳನ್ನು ನಿಮಗೆ ತೋರಿಸಲು ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿನ ನಿಮ್ಮ ಬಳಕೆ ಹವ್ಯಾಸಗಳು ಹಾಗೂ ಮಾದರಿಗಳಿಗೆ ಸಂಬಂಧವಾಗಿ ನಾವು ಸಂಗ್ರಹಿಸಬಹುದಾದ ಯಾವುದೇ ದತ್ತಾಂಶವನ್ನು ನಾವು ಶೇರ್ ಮಾಡಿಕೊಳ್ಳಬಹುದು. ಆದಾಗ್ಯೂ, ನಿಮಗೆ ಜಾಹಿರಾತು ಮಾಡಲಾದ ಯಾವುದೇ ಉತ್ಪನ್ನಗಳನ್ನು ನೀವು ಖರೀದಿಸಿದಲ್ಲಿ ಯಾವುದೇ ಆದಾಯವನ್ನು ನಿಮಗೆ ಪಾವತಿಸಲು ನಾವು ಬಾಧ್ಯಸ್ಥರಾಗಿರುವುದಿಲ್ಲ. ಯಾವುದೇ ಉತ್ಪನ್ನಗಳನ್ನು ನಾವು ಧೃಢೀಕರಿಸುವುದಿಲ್ಲ ಅಥವಾ ಉತ್ಪನ್ನಗಳ ಅಧೀಕೃತತೆಯ ವಾಗ್ದಾನವನ್ನು ನಾವು ಮಾಡುವುದಿಲ್ಲ. ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿ ಬಳಕೆದಾರರಿಂದ ಉತ್ಪನ್ನಗಳ ಜಾಹಿರಾತು ನೀಡುವಿಕೆ ಮಾತ್ರವು, ಅದು ನಮ್ಮಿಂದ ಧೃಢೀಕರಣ ಮಾಡಲ್ಪಟ್ಟಿದೆ ಎಂಬುದಕ್ಕೆ ಸಮನಾಗುವುದಿಲ್ಲ.
ನಿಮ್ಮ ಜನಾಂಗ, ಜಾತಿ, ಅಥವಾ ಆರೋಗ್ಯ ಮಾಹಿತಿ, ಬಯೊಮೆಟ್ರಿಕ್ ಮುಂತಾದವುಗಳಂಥ ಯಾವುದೇ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ನಾವು ಶೇರ್ ಮಾಡಿಕೊಂಡಲ್ಲಿ, ಅದನ್ನು ಹಂಚಿಕೊಳ್ಳುವ ಮೊದಲು ಅದಕ್ಕಾಗಿ ನಿಮ್ಮ ಸಮ್ಮತಿಯನ್ನು ನಾವು ಕೇಳುತ್ತೇವೆ.
b. ಸ್ವಯಂಚಾಲಿತ ಡೌನ್‌ಲೋಡ್‌ಗಳು ಮತ್ತು ಅಪ್‌ಡೇಟ್‌ಗಳು
ನಮ್ಮ ಪ್ಲ್ಯಾಟ್‌ಫಾರ್ಮ್ ಮತ್ತು ಒದಗಿಸಲಾದ ಸೇವೆಗಳನ್ನು ನಾವು ನಿರಂತರವಾಗಿ ಅಪ್‌ಡೇಟ್ ಮಾಡುತ್ತಿದ್ದೇವೆ. ನಮ್ಮ ಪ್ಲ್ಯಾಟ್ಫಾರ್ಮ್ ಅನ್ನು ಬಳಸಲು, ನಿಮ್ಮ ಮೊಬೈಲ್ ಡಿವೈಸ್‌ನಲ್ಲಿ ಶೇರ್‌ಚಾಟ್ ಮೊಬೈಲ್ ಅಪ್ಲಿಕೇಶನ್ ಅನ್ನು ನೀವು ಡೌನ್‌ಲೋಡ್ ಮಾಡಿಕೊಂಡು, ಕಾಲಕಾಲಕ್ಕೆ ಅದನ್ನು ಅಪ್‌ಡೇಟ್ ಮಾಡಿಕೊಳ್ಳಬೇಕಾಗಬಹುದು.
ಅಪ್ಲಿಕೇಶನ್‌ಗಳು ಹಾಗೂ ಸಾಫ್ಟ್‌ವೇರ್‌ಗಳನ್ನು ನಿಮ್ಮ ಬಳಕೆಗಾಗಿ ನಿರಂತರವಾಗಿ ಅಪ್‌ಡೇಟ್ ಮಾಡಲಾಗುತ್ತದೆ ಹಾಗೂ ಇಂಥ ಅಪ್‌ಡೇಟ್ ಜನರೇಟ್ ಆದ ಪ್ರತಿ ಬಾರಿಯೂ ನಿಮ್ಮ ಮೊಬೈಲ್ ಡಿವೈಸ್‌ನಲ್ಲಿ ಶೇರ್‌ಚಾಟ್ ಮೊಬೈಲ್ ಅಪ್ಲಿಕೇಶನ್ನಿನ ಇತ್ತೀಚಿನ ಆವೃತ್ತಿಯನ್ನು ನೀವು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ.
c. ಕುಕೀಗಳನ್ನು ಬಳಸಲು ಅನುಮತಿ
ಸೇವೆಗಳು ಮತ್ತು ತೃತೀಯ ಪಕ್ಷ ವೆಬ್‌ಸೈಟ್‌ಗಳ ನಿಮ್ಮ ಬಳಕೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿ, ಶೇಖರಿಸಲು ಕುಕೀಗಳು, ಪಿಕ್ಸೆಲ್ ಟ್ಯಾಗ್‌ಗಳು, ವೆಬ್ ಬೀಕಾನ್‌ಗಳು, ಮೊಬೈಲ್ ಡಿವೈಸ್ ಐಡಿಗಳು, ಫ್ಲ್ಯಾಶ್ ಕುಕೀಗಳು ಮತ್ತು ಅದೇ ತೆರನಾದ ಫೈಲ್‌ಗಳು ಅಥವಾ ತಾಂತ್ರಿಕತೆಗಳನ್ನು ನಾವು ಬಳಸಬಹುದು. ಇಂಥ ತಂತ್ರಜ್ಞಾನಗಳಿಗೆ ಸಂಬಂಧಿಸಿದ ನಿಮ್ಮ ಆಯ್ಕೆಗಳಿಗೆ ಸಂಬಂಧಿಸಿದುದನ್ನೂ ಒಳಗೊಂಡಂತೆ, ಕುಕೀಗಳು ಮತ್ತು ಈ ವಿಭಾಗದಲ್ಲಿ ವಿವರಿಸಿದ ಇತರ ತಾಂತ್ರಿಕತೆಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಶೇರ್‌ಚಾಟ್ ಕುಕೀ ಪಾಲಿಸಿಯನ್ನು ನೋಡಿ.
ಎಲ್ಲ ವೆಬ್‌ಸೈಟ್‌ಗಳು ಕುಕೀಗಳನ್ನು ಸಂಗ್ರಹಿಸುತ್ತವೆ ಮತ್ತು ಬಳಕೆ ಮಾಹಿತಿಯನ್ನು ನಿಮ್ಮ ಬ್ರೌಜರ್‌ನಲ್ಲಿ ಶೇಖರಿಸಿಟ್ಟು ಲಾಗ್ ಇನ್ ಮಾಡಲು ಅನುವಾಗುವಂತೆ ಅವುಗಳನ್ನು ನಿಮ್ಮ ವೆಬ್ ಬ್ರೌಜರ್‌ನಲ್ಲಿ ಶೇಖರಿಸಿಡುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಶೇರ್‌ಚಾಟ್ ಕುಕೀ ಪಾಲಿಸಿಯನ್ನು ಓದಿ.
d. ದತ್ತಾಂಶ ಧಾರಣೆ
ನಮ್ಮ ಪ್ಲ್ಯಾಟ್‌ಫಾರ್ಮ್‌ನ ನಿಮ್ಮ ಬಳಕೆಗೆ ಸಂಬಂಧಿಸಿದಂತೆ ಕೆಲವು ಮಾಹಿತಿಯನ್ನು ಉಳಿಸಿಕೊಳ್ಳುವ ಹಕ್ಕನ್ನು ನಾವು ಹೊಂದಿರುತ್ತೇವೆ. ನಿಮ್ಮ ಮಾಹಿತಿಯ ಸಂಗ್ರಹಣೆ, ಶೇಖರಣೆ ಹಾಗೂ ಅದನ್ನು ನಾವು ಬಳಸುವುದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಶೇರ್‌ಚಾಟ್ ಪ್ರೈವಸಿ ಪಾಲಿಸಿಯನ್ನು ನೋಡಿ.
ನಿಮಗೆ ಸಂಬಂಧಿಸಿದ ಹಾಗೂ ನಿಮ್ಮಿಂದ ಒದಗಿಸಲಾದ ಮಾಹಿತಿಯನ್ನು ಶೇಖರಿಸಿ, ಉಳಿಸಿಕೊಳ್ಳುವ ಹಕ್ಕನ್ನು ನೀವು ನಮಗೆ ನೀಡುತ್ತೀರಿ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಪ್ರೈವಸಿ ಪಾಲಿಸಿಯನ್ನು ನೋಡಿ.
ನಮ್ಮ ಒಪ್ಪಂದ ಹಾಗೂ ನಾವು ಒಪ್ಪದಿದ್ದಲ್ಲಿ ಏನಾಗುತ್ತದೆ
a. ಈ ಷರತ್ತುಗಳಡಿಯ ಹಕ್ಕುಗಳನ್ನು ಯಾರು ಹೊಂದಿದ್ದಾರೆ
ಈ ಷರತ್ತುಗಳಡಿಯ ಹಕ್ಕುಗಳು ಮತ್ತು ಬಾಧ್ಯತೆಗಳನ್ನು ನಿಮಗೆ ಮಾತ್ರ ನೀಡಲಾಗಿರುತ್ತದೆ, ನಮ್ಮ ಸಮ್ಮತಿಯಿಲ್ಲದೇ ಅವುಗಳನ್ನು ಯಾವುದೇ ತೃತೀಯ ಪಕ್ಷಕ್ಕೆ ವಹಿಸತಕ್ಕದ್ದಲ್ಲ. ಆದಾಗ್ಯೂ, ಈ ಷರತ್ತುಗಳಡಿಯ ನಮ್ಮ ಹಕ್ಕುಗಳು ಮತ್ತು ಬಾಧ್ಯತೆಗಳನ್ನು ಇತರರಿಗೆ ವಹಿಸಲು ನಾವು ಅನುಮತಿಸಲ್ಪಟ್ಟಿರುತ್ತೇವೆ. ಉದಾಹರಣೆಗೆ, ಇನ್ನೊಂದು ಸಂಸ್ಥೆಯೊಂದಿಗೆ ನಾವು ವಿಲೀನವಾಗಿ, ಹೊಸ ಸಂಸ್ಥೆಯೊಂದನ್ನು ಸೃಷ್ಟಿಸಿದಾಗ ಇದು ಸಂಭವಿಸಬಹುದು.
b. ವ್ಯಾಜ್ಯಗಳನ್ನು ನಾವು ಹೇಗೆ ನಿಭಾಯಿಸುತ್ತೇವೆ
ಎಲ್ಲಾ ಸಂದರ್ಭಗಳಲ್ಲಿ, ವ್ಯಾಜ್ಯಗಳು ಭಾರತ ಗಣರಾಜ್ಯದ ಕಾನೂನುಗಳಿಗೆ ಒಳಪಟ್ಟಿರುತ್ತವೆ ಹಾಗೂ ಇಂಥ ಎಲ್ಲ ವ್ಯಾಜ್ಯಗಳ ಮೇಲೆ ಬೆಂಗಳೂರಿನ ನ್ಯಾಯಾಲಯಗಳು ವಿಶಿಷ್ಟವಾದ ನ್ಯಾಯವ್ಯಾಪ್ತಿಯನ್ನು ಹೊಂದಿರುತ್ತವೆ ಎಂದು ನೀವು ಒಪ್ಪುತ್ತೀರಿ.
ದೂರು ಪರಿಹಾರ ವ್ಯವಸ್ಥೆ
ನಮ್ಮ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಗಾಗಿ ಸಂಪೂರ್ಣ ರಕ್ಷಣೆಯನ್ನು ಒದಗಿಸಲು ನಾವು ಬದ್ಧತೆಯಿಂದ ಕೆಲಸ ಮಾಡುತ್ತೇವೆ. ಇದರ ಭಾಗವಾಗಿ ನಾವು ನಮ್ಮ ಬಳಕೆದಾರರನ್ನು ಸುರಕ್ಷಿತವಾಗಿರಿಸಲು ಸರ್ಕಾರಿ ಅಧಿಕಾರಿಗಳೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಯಾವುದೇ ಬಳಕೆದಾರರು ತಮ್ಮ ಶೇರ್‌ಚಾಟ್ ಅನುಭವದ ಬಗ್ಗೆ ಕಾಳಜಿ ಹೊಂದಿದ್ದರೆ ನೇರವಾಗಿ ಸಂಪರ್ಕಿಸಬಹುದಾದ ಗ್ರೀವನ್ಸ್ ಅಧಿಕಾರಿಯನ್ನು ಸಹ ನಾವು ನೇಮಿಸಿದ್ದೇವೆ. ಶೇರ್ ಚಾಟ್‌ಗೆ ಸಂಬಂಧಿಸಿದಂತೆ ನಿಮ್ಮ ಕಾಳಜಿಗಳು ಅಥವಾ ಯಾವುದೇ ದೂರುಗಳನ್ನು ಪರಿಹರಿಸಲು ಸಹಾಯ ಮಾಡಲು ನಾವು ಪ್ರಬಲ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಹೊಂದಿದ್ದೇವೆ.
ಕುಂದುಕೊರತೆ ಪರಿಹಾರಕ್ಕಾಗಿ ವಿವಿಧ ಕಾರ್ಯವಿಧಾನಗಳನ್ನು ಕೆಳಗೆ ನೀಡಲಾಗಿದೆ:
ನೀವು ಯೂಸರ್ ಪ್ರೊಫೈಲ್‌ಗಳನ್ನು ವರದಿ ಮಾಡಬಹುದು ಮತ್ತು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಕಂಟೆಂಟ್ ಕುರಿತು ದೂರುಗಳನ್ನು ನೀಡಬಹುದು. ದೂರನ್ನು ಸಲ್ಲಿಸಬೇಕಾದ ಪೋಸ್ಟ್/ಕಾಮೆಂಟ್/ಯೂಸರ್ ಪ್ರೊಫೈಲ್‌ನ ಮುಂದೆ ಲಭ್ಯವಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡುವ ಮೂಲಕ ದೂರು ಸಲ್ಲಿಸಬಹುದು. ನೀವು ಸರಿಯಾದ ಕಾರಣವನ್ನು ಆಯ್ಕೆ ಮಾಡಿದ ನಂತರ ವರದಿ ಆಯ್ಕೆಯನ್ನು ಕ್ಲಿಕ್ ಮಾಡಬಹುದು. ಪ್ರತಿ ದೂರಿನ ಸ್ಟೇಟಸ್ ಅನ್ನು ಪ್ರೊಫೈಲ್ ಸೆಟ್ಟಿಂಗ್‌ಗಳ ಟ್ಯಾಬ್ ಅಡಿಯಲ್ಲಿ ಲಭ್ಯವಿರುವ ವರದಿಗಳ ಪುಟದಲ್ಲಿ ಪರಿಶೀಲಿಸಬಹುದು. ಪ್ರೊಫೈಲ್ ಸೆಟ್ಟಿಂಗ್‌ಗಳ ಟ್ಯಾಬ್ ಬಳಿ ಲಭ್ಯವಿರುವ ಸಹಾಯ ಮತ್ತು ಬೆಂಬಲ ಆಯ್ಕೆಯೊಂದಿಗೆ ನೀವು ಸಮಸ್ಯೆಯನ್ನು ವರದಿ ಮಾಡಬಹುದು.
ನಿಮ್ಮ ವಿರುದ್ಧ ಅಥವಾ ನೀವು ಅಪ್‌ಲೋಡ್ ಮಾಡಿದ ಯಾವುದೇ ಕಂಟೆಂಟ್ ನ ವಿರುದ್ಧ ದೂರು ಇದ್ದರೆ, ಪ್ರೊಫೈಲ್ ಸೆಟ್ಟಿಂಗ್‌ಗಳ ಟ್ಯಾಬ್ ಅಡಿಯಲ್ಲಿ ಲಭ್ಯವಿರುವ ಉಲ್ಲಂಘನೆಗಳ ಪುಟದಲ್ಲಿ ವಿವರಗಳನ್ನು ನೀವು ನೋಡಬಹುದು. ನೀವು ಮೇಲ್ಮನವಿಯನ್ನು ನೋಂದಾಯಿಸಬಹುದು ಮತ್ತು ಉಲ್ಲಂಘನೆಗಳ ಪುಟದಲ್ಲಿ ನಿಮ್ಮ ನಿಮ್ಮ ಮನವಿಯನ್ನು ಸಮರ್ಥಿಸಲು ಕಾಮೆಂಟ್‌ಗಳನ್ನು ಸೇರಿಸಬಹುದು.
https://support.sharechat.com/ ಲಿಂಕ್ ಅನ್ನು ಕ್ಲಿಕ್ ಮಾಡಿ, ನೀವು ಚಾಟ್‌ಬಾಟ್ ಸಿಸ್ಟಮ್ ಮೂಲಕ ನಿಮ್ಮ ದೂರುಗಳನ್ನು ವರದಿ ಮಾಡಬಹುದು.
ನಿಮ್ಮ ಕಾಳಜಿ ಅಥವಾ ದೂರನ್ನು ನೀವು contact@sharechat.co ಮತ್ತು grievance@sharechat.co ಗೆ ಇಮೇಲ್ ಕಳುಹಿಸಬಹುದು.
ನೀವು ಆಟೋ-ಜನರೇಟೆಡ್ ಟಿಕೆಟ್ ಸಂಖ್ಯೆಯನ್ನು ಸ್ವೀಕರಿಸುತ್ತೀರಿ ಮತ್ತು ದೂರು ಅಥವಾ ಕಳವಳದ ಮೇಲೆ ಕ್ರಮಗಳನ್ನು ಪ್ಲಾಟ್‌ಫಾರ್ಮ್ ನೀತಿಗಳು ಮತ್ತು ಸರ್ಕಾರಿ ನಿಯಮಗಳಿಗೆ ಅನುಗುಣವಾಗಿ ತೆಗೆದುಕೊಳ್ಳಲಾಗುತ್ತದೆ. ತೆಗೆದುಕೊಂಡ ಕ್ರಮಗಳ ವಿವರಗಳನ್ನು
ತೆಗೆದುಕೊಂಡ ಕ್ರಮಗಳ ವಿವರಗಳನ್ನು https://help.sharechat.com/transparency-report ನಲ್ಲಿ ನಮ್ಮ ಮಾಸಿಕ ಪಾರದರ್ಶಕತೆ ವರದಿಯಲ್ಲಿ ಒದಗಿಸಲಾಗುವುದು.
ಕೆಳಗೆ ಪಟ್ಟಿ ಮಾಡಲಾದ ಯಾವುದೇ ನೀತಿಗಳು ಅಥವಾ ನೀವು ಹೊಂದಿರುವ ಯಾವುದೇ ಇತರ ಕಾಳಜಿಗಳಿಗೆ ಸಂಬಂಧಿಸಿದಂತೆ ನೀವು ಗ್ರೀವನ್ಸ್ ಅಧಿಕಾರಿಯನ್ನು ಸಹ ಸಂಪರ್ಕಿಸಬಹುದು:
A. ಶೇರ್‌ಚಾಟ್ ಸೇವಾ ನಿಯಮಗಳು
B. ಶೇರ್‌ಚಾಟ್ ಗೌಪ್ಯತೆ ನೀತಿ
C. ನಿಮ್ಮ ಅಕೌಂಟ್ ಕುರಿತು ಪ್ರಶ್ನೆಗಳು
ಗ್ರಾಹಕರ ಡೇಟಾ ಸುರಕ್ಷತೆ, ಗೌಪ್ಯತೆ ಮತ್ತು ಪ್ಲಾಟ್‌ಫಾರ್ಮ್ ಬಳಕೆಯ ಸಮಸ್ಯೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ನಾವು ಗ್ರೀವನ್ಸ್ ಅಧಿಕಾರಿಯನ್ನು ನೇಮಿಸಿದ್ದೇವೆ. ನೋಂದಣಿಯಾದ 15 (ಹದಿನೈದು) ದಿನಗಳಲ್ಲಿ ನಿಮ್ಮ ಸಮಸ್ಯೆಗಳನ್ನು ನಾವು ಪರಿಹರಿಸುತ್ತೇವೆ. ನೀವು ನಮ್ಮನ್ನು ಸಂಪರ್ಕಿಸಲು ಮತ್ತು ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ನಾವು ವ್ಯವಸ್ಥೆಯನ್ನು ಹೊಂದಿಸಿದ್ದೇವೆ.
ನೀವು ಈ ಕೆಳಗಿನ ಯಾವುದಾದರೂ ಗ್ರೀವನ್ಸ್ ಅಧಿಕಾರಿಯನ್ನು ಸಂಪರ್ಕಿಸಬಹುದು:
Ms. ಹರ್ಲೀನ್ ಸೇಥಿ
ವಿಳಾಸ: ಮೊಹಲ್ಲಾ ಟೆಕ್ ಪ್ರೈವೆಟ್ ಲಿಮಿಟೆಡ್,
ನಾರ್ತ್ ಟವರ್ ಸ್ಮಾರ್ಟ್‌ವರ್ಕ್ಸ್, ವೈಷ್ಣವಿ ಟೆಕ್ ಪಾರ್ಕ್,
ಸರ್ವೆ ನಂ. 16/1 & ನಂ. 17/2 ಅಂಬಲಿಪುರ ಗ್ರಾಮ, ವರ್ತೂರು ಹೋಬಳಿ,
ಬೆಂಗಳೂರು ನಗರ, ಕರ್ನಾಟಕ - 560103
ಕಚೇರಿ ಸಮಯ: 10:00 A.M. to 1:00 P.M.
ಇಮೇಲ್: grievance@sharechat.co
ಗಮನಿಸಿ- ತ್ವರಿತ ಪ್ರಕ್ರಿಯೆ ಮತ್ತು ಪರಿಹಾರಕ್ಕಾಗಿ ಎಲ್ಲಾ ಬಳಕೆದಾರ ಸಂಬಂಧಿತ ದೂರುಗಳನ್ನು ಮೇಲೆ ತಿಳಿಸಲಾದ ಇಮೇಲ್ ಐಡಿಗೆ ಕಳುಹಿಸಿ.
ನೋಡಲ್ ಸಂಪರ್ಕ ವ್ಯಕ್ತಿ - Ms. ಹರ್ಲೀನ್ ಸೇಥಿ
ಇಮೇಲ್: nodalofficer@sharechat.co
ಗಮನಿಸಿ - ಈ ಇಮೇಲ್ ಪೊಲೀಸ್ ಮತ್ತು ತನಿಖಾ ಬಳಕೆಗೆ ಮಾತ್ರ. ಬಳಕೆದಾರರ ಸಂಬಂಧಿತ ಸಮಸ್ಯೆಗಳಿಗೆ ಈ ಇಮೇಲ್ ಐಡಿ ಬಳಸಬೇಡಿ. ಎಲ್ಲಾ ಬಳಕೆದಾರ ಸಂಬಂಧಿತ ದೂರುಗಳಿಗಾಗಿ grievance@sharechat.co ನಲ್ಲಿ ನಮ್ಮನ್ನು ಸಂಪರ್ಕಿಸಿ.
ಹೊಣೆಗಾರಿಕೆಯ ಮಿತಿ
ಯಾವುದೇ ನಷ್ಟ ಅಥವಾ ಹಾನಿಗೆ ಸಂಬಂಧಿಸಿದಂತೆ ನಾವು ಯಾವುದೇ ಹೊಣೆಗಾರಿಕೆಯನ್ನು ವಹಿಸುವುದಿಲ್ಲ, ಯಾವುದೇ ಮಾಹಿತಿಯ ಯಾವುದೇ ಅಸಮರ್ಪಕತೆ ಅಥವಾ ಅಪೂರ್ಣತೆಯಿಂದ ಅಥವಾ ಪ್ಲ್ಯಾಟ್‌ಫಾರ್ಮ್‌ನ ಯಾವುದೇ ಬಳಕೆದಾರರ ಕ್ರಿಯೆಗಳಿಂದಾಗಿ ಯಾವುದೇ ಖಾತರಿ ಅಥವಾ ಖಾತರಿಯ ಉಲ್ಲಂಘನೆಯಿಂದಾಗಿ ನೇರವಾಗಿ ಅಥವಾ ಪರೋಕ್ಷವಾಗಿ ಉದ್ಭವಿಸುತ್ತದೆ.
ಪ್ಲಾಟ್‌ಫಾರ್ಮ್ ಮತ್ತು ಸೇವೆಗಳನ್ನು ಯಾವುದೇ ಪ್ರಾತಿನಿಧ್ಯ ಅಥವಾ ಖಾತರಿ ಇಲ್ಲದೆ "ಇರುವಂತೆ" ಮತ್ತು "ಲಭ್ಯವಿರುವ" ಆಧಾರದ ಮೇಲೆ ಒದಗಿಸಲಾಗುತ್ತದೆ, ಇಲ್ಲದಿದ್ದರೆ ಲಿಖಿತವಾಗಿ ನಿರ್ದಿಷ್ಟಪಡಿಸುವುದನ್ನು ಹೊರತುಪಡಿಸಿ ವ್ಯಕ್ತಪಡಿಸಿ ಅಥವಾ ಸೂಚಿಸಲಾಗುತ್ತದೆ. ಸೇವೆಗಳ ಅಥವಾ ಪ್ಲ್ಯಾಟ್‌ಫಾರ್ಮ್‌ನ ನಿರಂತರ, ಸಮಯೋಚಿತ, ಸುರಕ್ಷಿತ ಅಥವಾ ದೋಷ-ಮುಕ್ತ ನಿಬಂಧನೆ, ಯಾವುದೇ ಸಾಧನದಲ್ಲಿ ಮುಂದುವರಿದ ಹೊಂದಾಣಿಕೆ ಅಥವಾ ಯಾವುದೇ ದೋಷಗಳ ತಿದ್ದುಪಡಿ ಸೇರಿದಂತೆ ನಾವು ಅದರ ಗುಣಮಟ್ಟವನ್ನು ಖಾತರಿಪಡಿಸುವುದಿಲ್ಲ.
ಯಾವುದೇ ಸಂದರ್ಭದಲ್ಲಿ ನಾವು, ಅಥವಾ ನಮ್ಮ ಯಾವುದೇ ಅಂಗಸಂಸ್ಥೆಗಳು, ಉತ್ತರಾಧಿಕಾರಿಗಳು ಮತ್ತು ನಿಯೋಜಕರು ಮತ್ತು ಅವರ ಪ್ರತಿಯೊಂದು ಹೂಡಿಕೆದಾರರು, ನಿರ್ದೇಶಕರು, ಅಧಿಕಾರಿಗಳು, ಉದ್ಯೋಗಿಗಳು, ಏಜೆಂಟರು, ಸೇವಾ ಪೂರೈಕೆದಾರರು ಮತ್ತು ಪೂರೈಕೆದಾರರು ಯಾವುದೇ ವಿಶೇಷ, ಪ್ರಾಸಂಗಿಕ, ಶಿಕ್ಷಾರ್ಹ, ನೇರ, ಪರೋಕ್ಷ ಅಥವಾ ಇನ್ನೊಬ್ಬ ಬಳಕೆದಾರರಿಂದ ನಿಯಮಗಳ ಉಲ್ಲಂಘನೆಯ ಪರಿಣಾಮವಾಗಿ ಅಥವಾ ಯಾವುದೇ ಸೇವೆಗಳು ಅಥವಾ ಪ್ಲಾಟ್‌ಫಾರ್ಮ್‌ನ ಬಳಕೆಯಿಂದ ಅಥವಾ ಅವಲಂಬನೆಯಿಂದ ಉಂಟಾಗುವ ಪರಿಣಾಮಕಾರಿ ಹಾನಿ.
ಒಂದು ವೇಳೆ ಇಲ್ಲಿ ಒಳಗೊಂಡಿರುವ ಯಾವುದೇ ಹೊರಗಿಡುವಿಕೆಯು ಯಾವುದೇ ಕಾರಣಕ್ಕಾಗಿ ಅಮಾನ್ಯವಾಗಿದೆ ಮತ್ತು ನಾವು ಅಥವಾ ನಮ್ಮ ಯಾವುದೇ ಅಂಗಸಂಸ್ಥೆಗಳು, ಅಧಿಕಾರಿಗಳು, ನಿರ್ದೇಶಕರು ಅಥವಾ ಉದ್ಯೋಗಿಗಳು ನಷ್ಟ ಅಥವಾ ಹಾನಿಗೆ ಹೊಣೆಗಾರರಾಗಿದ್ದರೆ, ಅಂತಹ ಯಾವುದೇ ಹೊಣೆಗಾರಿಕೆ ಶುಲ್ಕವನ್ನು ಮೀರದಂತೆ ಸೀಮಿತವಾಗಿರುತ್ತದೆ ಅಥವಾ ಕ್ಲೈಮ್ ದಿನಾಂಕದ ಹಿಂದಿನ ತಿಂಗಳಲ್ಲಿ ಪ್ಲಾಟ್‌ಫಾರ್ಮ್ ಅಥವಾ ಸೇವೆಗಳ ಬಳಕೆಗಾಗಿ ನಮಗೆ ಪಾವತಿಸಿದ ಮೊತ್ತಗಳು.
ನಷ್ಟದಿಂದ ರಕ್ಷಣೆ ಒದಗಿಸುವಿಕೆ
ಈ ಕೆಳಗಿನವುಗಳಿಂದ ಉದ್ಭವಿಸುವ ಯಾವುದೇ ರೀತಿಯ ಯಾವುದೇ ದಾವೆ, ವಿಚಾರಣೆ, ನಷ್ಟ, ಹಾನಿ, ಬಾಧ್ಯತೆ, ಖರ್ಚು, ಬೇಡಿಕೆ ಅಥವಾ ವೆಚ್ಚಗಳಿಂದ ಮತ್ತು ಅವುಗಳಿಗೆದುರಾಗಿ ನಮ್ಮನ್ನು ಹಾಗೂ ನಮ್ಮ ಅಧೀನ ಸಂಸ್ಥೆಗಳು, ಸಹಯೋಗಿಗಳು ಮತ್ತು ಮಧ್ಯವರ್ತಿಗಳು ಮತ್ತು ಅವರ ಆಯಾ ಅಧಿಕಾರಿಗಳು, ನಿರ್ದೇಶಕರು, ಉದ್ಯೋಗಿಗಳು, ವಾರಸುದಾರರು ಮತ್ತು ನಿಯೋಜಿಸಲ್ಪಟ್ಟವರಿಗೆ/ರನ್ನು ನಷ್ಟ ಭರ್ತಿ ಮಾಡಲು, ರಕ್ಷಣೆ ಒದಗಿಸಲು ಹಾಗೂ ಅಪಾಯರಹಿತರನ್ನಾಗಿರಿಸಲು ನೀವು ಒಪ್ಪುತ್ತೀರಿ:
- ನಮ್ಮ ಪ್ಲ್ಯಾಟ್‌ಫಾರ್ಮ್ ಮತ್ತು ಸೇವೆಗಳಿಗೆ ನಿಮ್ಮ ಪ್ರವೇಶಾವಕಾಶ ಅಥವಾ ಅದರ ಬಳಕೆ;
- ಈ ಒಪ್ಪಂದದಡಿಯ ನಿಮ್ಮ ಬಾಧ್ಯತೆಗಳ ನಿಮ್ಮಿಂದ ಮಾಡಲಾದ ಯಾವುದೇ ಉಲ್ಲಂಘನೆ;
- ಬೌದ್ಧಿಕ ಸ್ವತ್ತು ಅಥವಾ ಯಾವುದೇ ಖಾಸಗಿತನ ಅಥವಾ ಬಳಕೆದಾರ ಸಂರಕ್ಷಣೆ ಹಕ್ಕಿನ ಅತಿಕ್ರಮಣವನ್ನೂ ಒಳಗೊಂಡಂತೆ, ಯಾವುದೇ ತೃತೀಯ ಪಕ್ಷಗಳ ಹಕ್ಕುಗಳನ್ನು ನೀವು ಉಲ್ಲಂಘಿಸುವಿಕೆ;
- ಕಾನೂನು ಅಥವಾ ಕರಾರುಬದ್ಧ ಬಾಧ್ಯತೆಯ ಉಲ್ಲಂಘನೆ ಹಾಗೂ ಇಂಥ ಉಲ್ಲಂಘನೆಯ ಅನುಸರಣೆಯಲ್ಲಿನ ಯಾವುದೇ ದಾವೆಗಳು, ಬೇಡಿಕೆಗಳು, ಸೂಚನೆಗಳು;
- ನಿಮ್ಮ ಕಡೆಗಣಿಸುವಿಕೆ ಅಥವಾ ಉದ್ದೇಶಪೂರ್ವಕ ದುರ್ನಡತೆ. ಈ ಬಾಧ್ಯತೆಯು ನಮ್ಮ ಷರತ್ತುಗಳ ಮುಕ್ತಾಯದ ನಂತರವೂ ಚಾಲ್ತಿಯಲ್ಲಿರುತ್ತದೆ.
ಅನಪೇಕ್ಷಿತ ಸಾಮಗ್ರಿ
ಅನಿಸಿಕೆಗಳು ಮತ್ತು ಇತರ ಸಲಹೆಗಳನ್ನು ನಾವು ಯಾವಾಗಲೂ ಪ್ರಶಂಸಿಸುತ್ತೇವೆ. ಅವುಗಳಿಗಾಗಿ ನಿಮಗೆ ಪರಿಹಾರ ನೀಡಬೇಕಾದ ಯಾವುದೇ ನಿರ್ಬಂಧಗಳು ಅಥವಾ ಬಾಧ್ಯತೆಗಳಿಲ್ಲದೇ ಅವುಗಳನ್ನು ನಾವು ಬಳಸಬಹುದು ಹಾಗೂ ಅವುಗಳನ್ನು ಗೌಪ್ಯವಾಗಿ ಇರಿಸಬೇಕು ಎಂಬ ಭಾಧ್ಯತೆಯಡಿಯಲ್ಲಿ ಇರುವುದಿಲ್ಲ.
ಸಾಮಾನ್ಯ
- ಈ ಷರತ್ತುಗಳ ಯಾವುದೇ ಸಂಗತಿಯು ಜಾರಿಗೊಳಿಸತಕ್ಕವಾಗಿಲ್ಲವಾದಲ್ಲಿ, ಉಳಿದವುಗಳು ಜಾರಿಯಲ್ಲಿರುತ್ತವೆ.
- ನಮ್ಮ ಷರತ್ತುಗಳಿಗೆ ಮಾಡಲಾದ ಯಾವುದೇ ತಿದ್ದುಪಡಿ ಅಥವಾ ಮನ್ನಿಸುವಿಕೆಯು ಬರವಣಿಗೆಯಲ್ಲಿದ್ದು, ನಮ್ಮಿಂದ ಸಹಿ ಮಾಡಲ್ಪಟ್ಟಿರಬೇಕು.
- ಯಾವುದೇ ಕಾನೂನುಬಾಹಿರ ಅಥವಾ ಅನುಮತಿಸಲಾಗದ ಕ್ರಿಯೆಗಳನ್ನು ಸೂಕ್ತ ಕಾನೂನು ಜಾರಿ ಪ್ರಾಧಿಕಾರಗಳಿಗೆ ವರದಿ ಮಾಡುವಿಕೆ ಅಥವಾ ನಿಮ್ಮ ಪ್ರೊಫೈಲ್ ಅನ್ನು ನಿರ್ಬಂಧಿಸುವಿಕೆ ಅಥವಾ ಅಮಾನತುಗೊಳಿಸುವಿಕೆಯನ್ನೂ ಒಳಗೊಂಡಂತೆ, ಈ ಷರತ್ತುಗಳ ಯಾವುದೇ ಸಂಗತಿಯನ್ನು ಜಾರಿಗೊಳಿಸಲು ನಾವು ವಿಫಲರಾದಲ್ಲಿ, ನಮ್ಮ ಹಕ್ಕುಗಳನ್ನು ಜಾರಿಗೊಳಿಸುವಲ್ಲಿನ ಇಂಥ ವೈಫಲ್ಯತೆಯು ನಮ್ಮಿಂದ ಮನ್ನಿಸುವಿಕೆ ಆಗಿರುವುದಿಲ್ಲ.
- ನಿಮಗೆ ಸ್ಪಷ್ಟವಾಗಿ ಒದಗಿಸದ ಎಲ್ಲ ಹಕ್ಕುಗಳನ್ನು ನಾವು ಕಾಯ್ದಿರಿಸುತ್ತೇವೆ.