ಶೇರ್‌ಚಾಟ್ ನಾಣ್ಯಗಳ ನೀತಿ
Last updated: 13th December 2023
ಈ ನಾಣ್ಯಗಳ ನೀತಿಯು ("ನಾಣ್ಯಗಳ ನೀತಿ") https://sharechat.com/ ನಲ್ಲಿನ ನಮ್ಮ ವೆಬ್‌ಸೈಟ್‌ನಲ್ಲಿ ಮತ್ತು/ಅಥವಾ ಶೇರ್‌ಚಾಟ್ ಮೊಬೈಲ್ ಅಪ್ಲಿಕೇಶನ್‌ನಲ್ಲಿರುವ (ಒಟ್ಟಾರೆಯಾಗಿ "ಪ್ಲಾಟ್‌ಫಾರಂ") ಮತ್ತು ಮೊಹಲ್ಲಾ ಟೆಕ್ ಪ್ರೈ. ಲಿ., ("ಶೇರ್‌ಚಾಟ್", "ಕಂಪನಿ", "ನಾವು", "ನಮ್ಮ" ಮತ್ತು "ತಮ್ಮ"), ಭಾರತದ ಕಾನೂನು ಅಡಿಯಲ್ಲಿ ಸ್ಥಾಪಿಸಿದ ಖಾಸಗಿ ಕಂಪನಿಯಾಗಿರುವ ನೋಂದಾಯಿತ ಕಚೇರಿಯನ್ನು ಮೊಹಲ್ಲಾ ಟೆಕ್ ಪ್ರೈವೆಟ್ ಲಿಮಿಟೆಡ್, ನಾರ್ತ್ ಟವರ್ ಸ್ಮಾರ್ಟ್‌ವರ್ಕ್ಸ್, ವೈಷ್ಣವಿ ಟೆಕ್ ಪಾರ್ಕ್, ಸರ್ವೆ ನಂ. 16/1 & ನಂ. 17/2 ಅಂಬಲಿಪುರ ಗ್ರಾಮ, ವರ್ತೂರು ಹೋಬಳಿ, ಬೆಂಗಳೂರು ನಗರ, ಕರ್ನಾಟಕ - 560103 ಹೊಂದಿರುವ ನಮ್ಮ ನಾಣ್ಯಗಳ ವೈಶಿಷ್ಟ್ಯ ("ನಾಣ್ಯಗಳ ವೈಶಿಷ್ಟ್ಯ") ನಿರ್ಧರಿಸುತ್ತದೆ. "ನೀವು" ಮತ್ತು "ನಿಮ್ಮ" ಎಂಬ ಪದಗಳು ಪ್ಲಾಟ್‌ಫಾರಂ ಬಳಕೆದಾರರನ್ನು ಉಲ್ಲೇಖಿಸುತ್ತದೆ.
ನಿಮ್ಮ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ನಮ್ಮ ಪ್ಲಾಟ್‌ಫಾರಂ ಸಹಾಯ ಮಾಡುತ್ತದೆ ಮತ್ತು ಚಿತ್ರಗಳು, ವೀಡಿಯೋಗಳು, ಸಂಗೀತ, ಸ್ಟೇಟಸ್ ಅಪ್‌ಡೇಟ್‌ಗಳು ಮತ್ತು ಹೆಚ್ಚಿನದನ್ನು ನಿಮ್ಮ ಆದ್ಯತೆಯ ಪ್ರಾಂತೀಯ ಭಾಷೆಯಲ್ಲಿ ಹಂಚಿಕೊಳ್ಳಲು ಅನುವು ಮಾಡುತ್ತದೆ. ನಿಮ್ಮ ಆದ್ಯತೆಯ ಕಂಟೆಂಟ್ ಅನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ ಮತ್ತು ನಿಮಗೆ ಪೋಸ್ಟ್‌ಗಳು, ಚಿತ್ರಗಳು, ವೀಡಿಯೋಗಳನ್ನು ತೋರಿಸಲು ಮತ್ತು ನಮ್ಮ ಪ್ಲಾಟ್‌ಫಾರಂನಲ್ಲಿ ("ಸೇವೆ/ಸೇವೆಗಳು") ಲಭ್ಯವಿರುವ ಕಂಟೆಂಟ್ ಸಲಹೆ ಮಾಡಲು ನಿಮ್ಮ ನ್ಯೂಸ್‌ಫೀಡ್ ಅನ್ನು ವೈಯಕ್ತಿಕಗೊಳಿಸುತ್ತೇವೆ.
ನಾಣ್ಯಗಳು ಹೇಗೆ ಕೆಲಸ ಮಾಡುತ್ತವೆ?
ನೀವು ಈಗ ನಮ್ಮ ಬಳಕೆದಾರರಿಗೆ ("ಉಡುಗೊರೆಗಳು") ವರ್ಚುವಲ್ ಗಿಫ್ಟ್‌ಗಳು/ಡಿಜಿಟಲ್ ಸಾಮಗ್ರಿಗಳನ್ನು (ಸ್ಟಿಕ್ಕರ್‌ಗಳು, ಜಿಐಎಫ್‌ಗಳು, ಬ್ಯಾನರ್‌ಗಳು ಇತ್ಯಾದಿಯಂತಹ) ಲೈಸೆನ್ಸ್ ನೀಡಬಹುದು. ನಮ್ಮ ಅಧಿಕೃತ ಪಾವತಿ ವಿಧಾನಗಳನ್ನು ಬಳಸಿ ಮತ್ತು ನಾವು ಲಭ್ಯವಾಗಿಸಿದ ಮತ್ತು ದೃಢೀಕರಿಸಿದ ಪಾವತಿ ಪೂರೈಕೆದಾರರ ಮೂಲಕ ನಾಣ್ಯಗಳನ್ನು ("ನಾಣ್ಯಗಳು/ನಾಣ್ಯ") ಸ್ವಾಧೀನಪಡಿಸಿಕೊಳ್ಳುವ ಮೂಲಕ ನೀವು ಇಂತಹ ಉಡುಗೊರೆಗಳನ್ನು ಕಳುಹಿಸಬಹುದು. ನಾಣ್ಯಗಳು/ಉಡುಗೊರೆಗಳನ್ನು ನಗದಿಗಾಗಿ ವಿನಿಮಯ ಮಾಡಲಾಗದು ಹಾಗೂ ಕಾನೂನು ಮಾನ್ಯತೆ ಹೊಂದಿರುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
ನಾಣ್ಯಗಳ ಖರೀದಿ
- ನಾಣ್ಯಗಳ ಬೆಲೆಯನ್ನು ಖರೀದಿ ಸ್ಥಳದಲ್ಲಿ ಪ್ರದರ್ಶಿಸಲಾಗುತ್ತದೆ. ನಾಣ್ಯಗಳಿಗೆ ಎಲ್ಲ ಶುಲ್ಕಗಳು ಮತ್ತು ಪಾವತಿಗಳನ್ನು, ನಾವು ನಿಗದಿಸಿದ ಸೂಕ್ತ ಪಾವತಿ ವಿಧಾನದ ಮೂಲಕ ಖರೀದಿ ಸಮಯದಲ್ಲಿ ನಿಗದಿಸಿದ ಕರೆನ್ಸಿಯಲ್ಲಿ ಮಾಡಬಹುದು.
- ನೀವು ಖರೀದಿಸಿದ ಯಾವುದೇ ನಾಣ್ಯಗಳ ಪಾವತಿಗೆ ನೀವು ಜವಾಬ್ದಾರರಾಗಿರುತ್ತೀರಿ. ನೀವು ನಿಮ್ಮ ಪಾವತಿ ಮಾಡಿದ ನಂತರ, ನಿಮ್ಮ ಬಳಕೆದಾರರ ಖಾತೆಗೆ ಖರೀದಿ ಮಾಡಿದ ನಾಣ್ಯಗಳ ಸಂಖ್ಯೆಯನ್ನು ಕ್ರೆಡಿಟ್ ಮಾಡಲಾಗುತ್ತದೆ.
ನಾಣ್ಯಗಳ ಬಳಕೆ
- ಸ್ಟೋರ್ ಐಟಂಗಳನ್ನು ಖರೀದಿಸಲು ನಾಣ್ಯಗಳನ್ನು ಬಳಸಬಹುದು ಮತ್ತು ಇದನ್ನು ಬಳಸಿ ಬಳಕೆದಾರರು ತಮ್ಮ ಪ್ರೊಫೈಲ್‌ಗಳನ್ನು ಗ್ರಾಹಕೀಯಗೊಳಿಸಬಹುದು. ಇತರ ಬಳಕೆದಾರರಿಗೆ ಉಡುಗೊರೆಗಳನ್ನು ಕಳುಹಿಸಲೂ ನಾಣ್ಯಗಳನ್ನು ಬಳಸಬಹುದು. ನಾಣ್ಯಗಳನ್ನು ನಗದಿಗೆ ವಿನಿಮಯ ಮಾಡಲಾಗದು ಅಥವಾ ಕಾನೂನು ಮಾನ್ಯತೆಯನ್ನು ಇದು ಹೊಂದಿರುವುದಿಲ್ಲ ಅಥವಾ ಯಾವುದೇ ರಾಜ್ಯ, ಪ್ರದೇಶ ಅಥವಾ ಯಾವುದೇ ರಾಜಕೀಯ ಸಂಸ್ಥೆಯ ಕರೆನ್ಸಿಯಾಗಿರುವುದಿಲ್ಲ ಅಥವಾ ಯಾವುದೇ ಇತರ ರೂಪದ ಸಾಲವಾಗಿರುವುದಿಲ್ಲ.
- ನಾಣ್ಯಗಳನ್ನು ನಮ್ಮ ಪ್ಲಾಟ್‌ಫಾರಂನಲ್ಲಿ ಮಾತ್ರ ಮತ್ತು ನಮ್ಮ ಸೇವೆಗಳ ಭಾಗವಾಗಿ ಮಾತ್ರ ಬಳಸಬಹುದು ಮತ್ತು ನಾವು ನಿಯೋಜಿಸಿರುವುದನ್ನು ಹೊರತುಪಡಿಸಿ ಇತರ ಪ್ರಚಾರಗಳು, ಕೂಪನ್‌ಗಳು, ರಿಯಾಯಿತಿಗಳು ಅಥವಾ ವಿಶೇಷ ಕೊಡುಗೆಗಳ ಜೊತೆಗೆ ಬಳಸಲಾಗದು.
- ಪ್ಲಾಟ್‌ಫಾರಂ ಅಥವಾ ಯಾವುದೇ ತೃತೀಯ ಪಕ್ಷದ ಯಾವುದೇ ಇತರ ಬಳಕೆದಾರರಿಗೆ ಯಾವುದೇ ನಾಣ್ಯಗಳನ್ನು ನಿಯೋಜಿಸಲಾಗದು ಅಥವಾ ವರ್ಗಾವಣೆ ಮಾಡಲಾಗದು. ನಮ್ಮಿಂದಲ್ಲದೇ ಯಾವುದೇ ನಾಣ್ಯಗಳನ್ನು ಮಾರಾಟ ಮಾಡುವುದು, ಹಂಚುವುದು, ನಿಯೋಜಿಸುವುದು ಅಥವಾ ವಿಲೇವಾರಿ ಮಾಡುವುದನ್ನು ಅಭಿವ್ಯಕ್ತಿಪೂರ್ವಕವಾಗಿ ನಿಷೇಧಿಸಲಾಗಿದೆ. ಈ ನಿರ್ಬಂಧದ ಯಾವುದೇ ಉಲ್ಲಂಘನೆಯು ಪ್ಲಾಟ್‌ಫಾರಂನಲ್ಲಿ ನಿಮ್ಮ ಖಾತೆಯ ವಜಾಗೊಳಿಸಲು, ನಿಮ್ಮ ಖಾತೆಯಲ್ಲಿನ ನಾಣ್ಯಗಳ ಮುಟ್ಟುಗೋಲು ಹಾಕಲು ಕಾರಣವಾಗಬಹುದು ಮತ್ತು/ಅಥವಾ ಹಾನಿ, ದಾವೆ ಮತ್ತು ವಹಿವಾಟು ವೆಚ್ಚಗಳಿಗೆ ನೀವು ಬಾಧ್ಯವಾಗಬಹುದು.
- ಸಂಚಿತ ನಾಣ್ಯಗಳು ಸ್ವತ್ತು ಆಗಿರುವುದಿಲ್ಲ ಮತ್ತು ಅದನ್ನು ವರ್ಗಾವಣೆ ಮಾಡಲಾಗದು: (ಎ) ಮರಣದ ನಂತರ; (ಬಿ) ದೇಶೀಯ ಸಂಬಂಧಗಳ ವಿಷಯದ ಭಾಗವಾಗಿ; ಅಥವಾ (ಸಿ) ಕಾನೂನು ಪ್ರಕಾರ ಇತರೆ.
- ನೀವು ಈ ನಾಣ್ಯಗಳ ನೀತಿಯನ್ನು ಉಲ್ಲಂಘಿಸಿದ್ದೀರಿ, ಯಾವುದೇ ಅನ್ವಯಿಕ ಕಾನೂನು ಅಥವಾ ನಿಯಮಾವಳಿ ಅಥವಾ ಕಾನೂನು, ಭದ್ರತೆಯನ್ನು ಉಲ್ಲಂಘಿಸಿದ್ದೀರಿ ಅಥವಾ ತಾಂತ್ರಿಕ ಕಾರಣಗಳಿಗೆ ಉಲ್ಲಂಘಿಸಿದ್ದೀರಿ ಎಂದು ನಾವು ನಂಬಲು ಮಾನ್ಯ ಕಾರಣವನ್ನು ಹೊಂದಿದ್ದಲ್ಲಿ ಅಂತಹ ನಾಣ್ಯಗಳನ್ನು ನಿರ್ವಹಿಸಲು, ನಿಯಂತ್ರಿಸಲು, ನಿಯಂತ್ರಣಕ್ಕೊಳಪಡಿಸಲು, ತಿದ್ದುಪಡಿ ಮಾಡಿ ಮತ್ತು/ಅಥವಾ ನಿರ್ಮೂಲನೆ ಮಾಡಲು ನಾವು ಹಕ್ಕು ಹೊಂದಿದ್ದೇವೆ ಮತ್ತು ಈ ಹಕ್ಕನ್ನು ನಾವು ಜಾರಿಗೊಳಿಸುವಲ್ಲಿ ನಿಮಗೆ ನಾವು ಯಾವುದೇ ಬಾಧ್ಯತೆಯನ್ನು ಹೊಂದಿಲ್ಲ ಎಂದು ನೀವು ಒಪ್ಪುತ್ತೀರಿ. ನಮ್ಮ ಸೇವೆಗಳಿಂದ ಸಂಪೂರ್ಣವಾಗಿ ನಾಣ್ಯಗಳನ್ನು ನಿರ್ಮೂಲನೆ ಮಾಡಲು ನಾವು ನಿರ್ಧರಿಸಿದರೆ, ನಿಮಗೆ ಸಕಾರಣ ನೋಟಿಸ್ ನೀಡುವ ಮೂಲಕ ನಾವು ಇದನ್ನು ಮಾಡುತ್ತೇವೆ.
- ಒಂದು ಯುನಿಟ್ ಕಾಯಿನ್ ಬಳಕೆದಾರರಿಂದ ಖರೀದಿಸಿದ/ರಶೀದಿಯ ದಿನಾಂಕದಿಂದ 365 ದಿನಗಳವರೆಗೆ ಮುಕ್ತಾಯವಾಗುತ್ತದೆ.
ಉಡುಗೊರೆಗಳು ಹೇಗೆ ಕೆಲಸ ಮಾಡುತ್ತವೆ?
ಪ್ಲಾಟ್‌ಫಾರಂನಲ್ಲಿ ನಿಮ್ಮ ಖಾತೆಯಲ್ಲಿ ಲಭ್ಯ ನಾಣ್ಯವನ್ನು ರಿಡೀಮ್ ಮಾಡುವ ಮೂಲಕ ಉಡುಗೊರೆಯನ್ನು ನೀವು ಸ್ವಾಧೀನಪಡಿಸಿಕೊಳ್ಳುತ್ತೀರಿ. ನೀವು ಇತರ ಬಳಕೆದಾರರಿಗೆ ಈ ಉಡುಗೊರೆಗಳನ್ನು ನೀವು ಕಳುಹಿಸಬಹುದು ಹಾಗೂ ಪ್ಲಾಟ್‌ಫಾರಂನಲ್ಲಿ ಇತರ ಬಳಕೆದಾರರಿಂದ ಉಡುಗೊರೆಗಳನ್ನು ಸ್ವೀಕರಿಸಬಹುದು. ನೀವು ಕಳುಹಿಸಿದ ಅಥವಾ ಸ್ವೀಕರಿಸಿದ ಉಡುಗೊರೆಗಳನ್ನು ನಗದಿಗೆ ವಿನಿಮಯ ಮಾಡಲಾಗದು ಅಥವಾ ಕಾನೂನು ಮಾನ್ಯತೆ ಹೊಂದಿರುವುದಿಲ್ಲ.
ಒಬ್ಬ ಬಳಕೆದಾರರು ಇನ್ನೊಂದು ಬಳಕೆದಾರರಿಗೆ ಉಡುಗೊರೆಯನ್ನು ಕಳುಹಿಸಿದರೆ, ಸ್ವೀಕರಿಸಿದ ಉಡುಗೊರೆಯ ಮೌಲ್ಯವನ್ನು ಡೈಮಂಡ್ಸ್ ("Diamonds") ರೂಪದಲ್ಲಿ ಸ್ವೀಕರಿಸಿದವರ ಖಾತೆಯಲ್ಲಿ ಉಡುಗೊರೆಯ ಮೌಲ್ಯವನ್ನು ತೋರಿಸಲಾಗುತ್ತದೆ. ಡೈಮಂಡ್ಸ್ ಅನ್ನು ನಾಣ್ಯಗಳನ್ನಾಗಿ ಅಥವಾ ನಾಣ್ಯಗಳನ್ನು ಡೈಮಂಡ್ಸ್ ಆಗಿ ಪರಿವರ್ತಿಸಲಾಗದು. ವಿವೇಚನೆಗೆ ಒಳಪಟ್ಟು ಇಂತಹ ಡೈಮಂಡ್ಸ್‌ನ ಮೌಲ್ಯವನ್ನು ಬದಲಿಸುವ ಹಕ್ಕನ್ನು ಶೇರ್‌ಚಾಟ್ ಹೊಂದಿದೆ.
ಉಡುಗೊರೆಗಳ ಖರೀದಿ
ಡಿಜಿಟಲ್ ಉತ್ಪನ್ನಗಳು ಮತ್ತು ಸೇವೆಗಳ ಕೆಲವು ವೈಶಿಷ್ಟ್ಯಗಳಿಗೆ ಸೀಮಿತ ಲೈಸೆನ್ಸ್ ಅನ್ನು ಉಡುಗೊರೆಗಳು ಒಳಗೊಂಡಿವೆ. ಪ್ರತಿ ನಾಣ್ಯ ಮತ್ತು ಉಡುಗೊರೆಯ ಮಧ್ಯದ ರೂಪಾಂತರ/ರಿಡೆಂಪ್ಷನ್ ದರವನ್ನು ನಮ್ಮ ಪ್ಲಾಟ್‌ಫಾರಂನಲ್ಲಿ ಪ್ರದರ್ಶಿಸಲಾಗುತ್ತದೆ.
ಪ್ರಕಟಿಸಿದ ಬೆಲೆಯು ನಿಮ್ಮ ನ್ಯಾಯವ್ಯಾಪ್ತಿಯ ಅನ್ವಯಿಕ ಕಾನೂನು ಅಡಿಯಲ್ಲಿ ಅಗತ್ಯದ ತೆರಿಗೆಗಳನ್ನೂ ಒಳಗೊಂಡಿರುತ್ತದೆ.
ಯಾವುದೇ ಸಾಮಾನ್ಯ ಅಥವಾ ನಿರ್ದಿಷ್ಟ ಪ್ರಕರಣದಲ್ಲಿ ನಮ್ಮ ಸ್ವಂತ ವಿವೇಚನೆಗೆ ಸೂಕ್ತವಾದಂತೆ ಇಂತಹ ವಿನಿಮಯ ದರವನ್ನು ನಿರ್ವಹಿಸಲು, ನಿಯಂತ್ರಿಸಲು, ನಿಯಂತ್ರಣಕ್ಕೊಳಪಡಿಸಲು, ತಿದ್ದುಪಡಿ ಮಾಡಲು ಮತ್ತು/ಅಥವಾ ನಿರ್ಮೂಲನೆ ಮಾಡಲು ಸಂಪೂರ್ಣ ಹಕ್ಕನ್ನು ನಾವು ಹೊಂದಿರುತ್ತೇವೆ ಮತ್ತು ಇಂತಹ ಹಕ್ಕನ್ನು ಜಾರಿಗೊಳಿಸುವಲ್ಲಿ ನಾವು ಯಾವುದೇ ಬಾಧ್ಯತೆಯನ್ನು ಹೊಂದಿರುವುದಿಲ್ಲ ಎಂದು ನಾವು ಸಮ್ಮತಿಸುತ್ತೇವೆ.
ಈ ನಾಣ್ಯ ನೀತಿಯಲ್ಲಿ ನಿಗದಿಸಿರುವುದನ್ನು ಹೊರತುಪಡಿಸಿ, ನಾಣ್ಯಗಳನ್ನು ಉಡುಗೊರೆಗಳನ್ನಾಗಿ ಮಾಡಿದ ಎಲ್ಲ ರೂಪಾಂತರಗಳು/ರಿಡೆಂಪ್ಷನ್‌ಗಳು ಅಂತಿಮವಾಗಿರುತ್ತವೆ. ನಾವು ಯಾವುದೇ ರೀತಿಯಲ್ಲಿ ರಿಫಂಡ್ ಅನ್ನು ಒದಗಿಸುವುದಿಲ್ಲ.
ಉಡುಗೊರೆಗಳನ್ನು ನಾಣ್ಯಗಳು ಅಥವಾ ನಗದು ಆಗಿ ಪರಿವರ್ತಿಸಲಾಗುವುದಿಲ್ಲ ಅಥವಾ ವಿನಿಮಯ ಮಾಡಲಾಗುವುದಿಲ್ಲ ಅಥವಾ ಯಾವುದೇ ಕಾರಣಕ್ಕೆ ನಾವು ರಿಫಂಡ್ ಮಾಡುವುದಿಲ್ಲ ಅಥವಾ ಮರುಬಟವಾಡೆ ಮಾಡುವುದಿಲ್ಲ.
ಯಾವುದೇ ಬಳಕೆದಾರರು ವಿನಿಮಯ ಮಾಡಿದ ಅಥವಾ ಸ್ವೀಕರಿಸಿದ ಉಡುಗೊರೆಗಳು ಸ್ವತ್ತು ಎಂದು ಪರಿಗಣಿಸಲ್ಪಡುವುದಿಲ್ಲ ಮತ್ತು ಅವುಗಳನ್ನು ವರ್ಗಾವಣೆ ಮಾಡಲಾಗದು: (ಎ) ಮರಣದ ನಂತರ; (ಬಿ) ದೇಶೀಯ ಸಂಬಂಧಗಳ ವಿಷಯದ ಭಾಗವಾಗಿ; ಅಥವಾ (ಸಿ) ಕಾನೂನು ಪ್ರಕಾರ ಇತರೆ. ಬಳಕೆದಾರರು ವಿನಿಮಯ ಮಾಡಿದ ಅಥವಾ ಸ್ವೀಕರಿಸಿದ ಉಡುಗೊರೆಯು ಹಾಳಾಗಿದೆ ಅಥವಾ ಹಾನಿಗೀಡಾಗಿದೆ ಎಂದು ನಮ್ಮ ಸ್ವಂತ ವಿವೇಚನೆಯಲ್ಲಿ ಗುರುತಿಸಿದರೆ, ಈ ಹಿಂದೆ ವಿನಿಮಯ ಮಾಡಿದ ಉಡುಗೊರೆಗಳ ಪ್ರತಿಯನ್ನು ನಾವು ಬದಲಿಸಬಹುದು. ಹಾಳಾದ ಅಥವಾ ಹಾನಿಗೀಡಾದ ಉಡುಗೊರೆಯನ್ನು ಪುನಃ ವಿತರಿಸಲು ನಾವು ಹೆಚ್ಚುವರಿ ಶುಲ್ಕವನ್ನು ವಿಧಿಸುವುದಿಲ್ಲ. ನೀವು ಹಾಳಾದ ಅಥವಾ ಹಾನಿಗೀಡಾದ ಉಡುಗೊರೆಯನ್ನು ಸ್ವೀಕರಿಸಿದರೆ, contact@sharechat.co ನಲ್ಲಿ ನಮ್ಮನ್ನು ಸಂಪರ್ಕಿಸಿ.
ನಾಣ್ಯಗಳ ವೈಶಿಷ್ಟ್ಯವನ್ನು ನೀವು ದುರ್ಬಳಕೆ ಮಾಡುತ್ತಿದ್ದರೆ ಅಥವಾ ಈ ನಾಣ್ಯಗಳ ನೀತಿಯನ್ನು ನೀವು ಉಲ್ಲಂಘಿಸಿದ್ದರೆ ನಿಮ್ಮನ್ನು ವಜಾಗೊಳಿಸುವ ಅಥವಾ ನಿಮ್ಮ ವಿರುದ್ಧ ಯಾವುದೇ ಇತರ ಸೂಕ್ತ ಕ್ರಮ ಕೈಗೊಳ್ಳುವ ಹಕ್ಕನ್ನು ನಾವು ಕಾಯ್ದಿರಿಸುತ್ತೇವೆ.
ಪ್ಲಾಟ್‌ಫಾರಂ ಅಥವಾ ಇತರೆಯಲ್ಲಿ ಯಾವುದೇ ಬಳಕೆದಾರರಿಂದ ಯಾವುದೇ ಸರಕುಗಳು ಅಥವಾ ಸೇವೆಗಳನ್ನು ಸ್ವೀಕರಿಸಿದ್ದಕ್ಕೆ ಯಾವುದೇ ಉಡುಗೊರೆ ಅಥವಾ ನಾಣ್ಯವನ್ನು ಬಳಸಲು ನಿಮ್ಮನ್ನು ಅನುಮತಿಸಿಲ್ಲ.
ಪ್ರಭಾವಿಗಳಿಗೆ ಅಥವಾ ಇತರ ಬಳಕೆದಾರರು ಜನರೇಟ್ ಮಾಡಿದ ಕಂಟೆಂಟ್‌ಗೆ ಉಡುಗೊರೆಗಳನ್ನು ನೀವು ಹೇಗೆ ಬಳಸಬಹುದು
- Iಬಳಕೆದಾರರು ಅಥವಾ ಪ್ರಭಾವಿಯು ಜನರೇಟ್ ಮಾಡಿದ ಕಂಟೆಂಟ್‌ಗೆ ("ಕ್ರಿಯೇಟರ್") ಸಂಬಂಧಿಸಿದಂತೆ, ರೇಟ್ ಮಾಡಲು ಅಥವಾ ಕ್ರಿಯೇಟರ್ ಅಪ್‌ಲೋಡ್ ಮಾಡಿದ ಕ್ರಿಯೇಟರ್ ಕಂಟೆಂಟ್‌ನ ಐಟಂಗೆ ನಿಮ್ಮ ಮೆಚ್ಚುಗೆಯನ್ನು ತೋರಿಸಲು ನೀವು ಉಡುಗೊರೆಗಳನ್ನು ಬಳಸಬಹುದು. ಈ ಸೌಲಭ್ಯವು ಸೇವೆಗಳಲ್ಲಿ ಲಭ್ಯವಿದೆ ಮತ್ತು "ಕಳುಹಿಸಿ" ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ಕ್ರಿಯೇಟರ್‌ಗಳಿಗೆ ಉಡುಗೊರೆಗಳನ್ನು ನೀವು ಕೊಡುಗೆ ನೀಡಬಹುದು. -ಕ್ರಿಯೇಟರ್‌ಗೆ ಕಳುಹಿಸಲು ಉಡುಗೊರೆಯನ್ನು ನೀವು ಆಯ್ಕೆ ಮಾಡಿದಾಗ ಮತ್ತು "ಕಳುಹಿಸಿ" ಬಟನ್ ಕ್ಲಿಕ್ ಮಾಡಿದಾಗ, ಕ್ರಿಯೇಟರ್ ಖಾತೆಗೆ ಈ ಉಡುಗೊರೆಯನ್ನು ಕಳುಹಿಸಲಾಗುತ್ತದೆ.
- ಕ್ರಿಯೇಟರ್‌ಗೆ ನೀವು ಉಡುಗೊರೆಯನ್ನು ನೀಡಿದಾಗ, ಇದು ಸಾರ್ವಜನಿಕವಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಹೀಗಾಗಿ, ಪ್ಲಾಟ್‌ಫಾರಂನ ಇತರ ಬಳಕೆದಾರರು (ಉಡುಗೊರೆಯನ್ನು ಪಡೆದವರೂ ಸೇರಿದಂತೆ) ನಿಮ್ಮ ಹೆಸರನ್ನು ಮತ್ತು ಉಡುಗೊರೆಯ ವಿವರಗಳನ್ನು ನೋಡಬಹುದು.
ವರದಿ ಮಾಡುವುದು
ಬಳಕೆದಾರರು ಈ ಚಾಟ್‌ರೂಮ್ ಉಲ್ಲಂಘಿಸಿರುವುದನ್ನು ನೀವು ಗಮನಿಸಿದರೆ, ಅದನ್ನು contact@sharechat.co ಗೆ ವರದಿ ಮಾಡಿ.
ನಾಣ್ಯಗಳ ನೀತಿಯ ಉಲ್ಲಂಘನೆಯ ಬಗ್ಗೆ ಹಲವು ವರದಿಗಳು ಕಂಡುಬಂದರೆ, ನಮ್ಮೊಂದಿಗಿನ ನಿಮ್ಮ ಖಾತೆಯನ್ನು ನಾವು ವಜಾಗೊಳಿಸಬೇಕಾಗಬಹುದು ಮತ್ತು ನಮ್ಮೊಂದಿಗೆ ನೋಂದಣಿ ಮಾಡುವುದರಿಂದ ನಿಮ್ಮನ್ನು ತಡೆಹಿಡಿಯಬೇಕಾಗಬಹುದು. ಯಾವುದೇ ತೆಗೆದುಹಾಕುವಿಕೆಗೆ ನೀವು ಮೇಲ್ಮನವಿ ಸಲ್ಲಿಸಲು ಬಯಸಿದರೆ, ನೀವು contact@sharechat.co ಗೆ ಬರೆಯಬಹುದು.
ಬಳಸದ ಅಥವಾ ರಿಡೀಮ್ ಮಾಡದ ನಾಣ್ಯಗಳು ಅಥವಾ ಉಡುಗೊರೆಗಳಿಗೆ ರಿಫಂಡ್ ಇರುವುದಿಲ್ಲ. ಹೀಗಾಗಿ ನಿಮ್ಮ ಖಾತೆಯನ್ನು ವಜಾಗೊಳಿಸುವುದಕ್ಕೂ ಮುನ್ನ ಅವುಗಳನ್ನು ಬಳಸುವಂತೆ ನಾವು ನಿಮಗೆ ಶಿಫಾರಸು ಮಾಡುತ್ತೇವೆ.
ಬಳಕೆದಾರರಿಗೆ ಸೂಚನೆ
- ನಿಮ್ಮ ನಾಣ್ಯಗಳ ಖರೀದಿಗೆ ನಿಮಗೆ ತೆರಿಗೆ ಇನ್‌ವಾಯ್ಸ್ ಅಗತ್ಯವಿದ್ದರೆ, ದಯವಿಟ್ಟು ನಿಮ್ಮ ಆರ್ಡರ್ ಐಡಿಯನ್ನು ಉಲ್ಲೇಖಿಸಿ ar@sharechat.co ಗೆ ಬರೆಯಿರಿ ಮತ್ತು ನಮ್ಮ ತಂಡವು ಇದನ್ನು ಶೀಘ್ರದಲ್ಲಿಯೇ ನೀಡುತ್ತದೆ.
- ನಾಣ್ಯಗಳು/ಉಡುಗೊರೆಗಳನ್ನು ಬಳಕೆದಾರರು ಖರೀದಿಸಬೇಕಾಗಿರುವ ಪ್ರತ್ಯೇಕ ಸಾಮಗ್ರಿಗಳು ಎಂದು ಪರಿಗಣಿಸಲಾಗುವುದಿಲ್ಲ. ಆದರೆ, ಪ್ಲಾಟ್‌ಫಾರಂ ವಿತರಿಸಿದ ಐಟಂಗಳಿಗೆ ಲೈಸೆನ್ಸ್ ಸಹಿತ ಪ್ರವೇಶಾವಕಾಶ ಎಂದು ಪರಿಗಣಿಸಲಾಗುತ್ತದೆ.
- ಒಮ್ಮೆ ನೀವು ನಮ್ಮ ಪ್ಲಾಟ್‌ಫಾರ್ಮ್‌ನಿಂದ ನಿಮ್ಮ ಖಾತೆಯನ್ನು ಅಳಿಸಿದ ನಂತರ ನಿಮ್ಮ ಖಾತೆಗೆ ಸಂಬಂಧಿಸಿದ ನಾಣ್ಯಗಳು ಮತ್ತು ಉಡುಗೊರೆಗಳು ನಾಶವಾಗುತ್ತವೆ.
- ಇಂಟರ್ನೆಟ್‌ನಲ್ಲಿ ಟ್ರೇಡಿಂಗ್ ಮಾಡಲು ನಾಣ್ಯಗಳನ್ನು ಬಳಸಲಾಗದು.
- ಪ್ಲಾಟ್‌ಫಾರಂನಲ್ಲಿ ನೀವು ಖರೀದಿಸಿದ ನಾಣ್ಯಗಳು/ಉಡುಗೊರೆಗಳಿಗೆ ನೀವು ಜವಾಬ್ದಾರರಾಗಿರುತ್ತೀರಿ ಮತ್ತು ಅಂತಹ ನಾಣ್ಯಗಳು/ ಉಡುಗೊರೆಗಳಿಗೆ ಸಂಬಂಧಿಸಿದಂತೆ ನಾವು ಯಾವುದೇ ಬಾಧ್ಯತೆ ಅಥವಾ ಜವಾಬ್ದಾರಿಯನ್ನು ಹೊಂದಿರುವುದಿಲ್ಲ ಎಂದು ನೀವು ಸಮ್ಮತಿಸುತ್ತೀರಿ.
- ಯಾವುದು ಉಲ್ಲಂಘನೆಯಾಗುತ್ತದೆ ಎಂಬುದನ್ನು ನಿರ್ಧರಿಸುವ ಸ್ವಂತ ವಿವೇಚನೆಯ ಹಕ್ಕನ್ನು ನಾವು ಕಾಯ್ದಿರಿಸುತ್ತೇವೆ.
- ಯಾವುದೇ ಸಮಯದಲ್ಲಿ ಈ ನಾಣ್ಯಗಳ ನೀತಿಯ ಭಾಗಗಳನ್ನು ಬದಲಿಸಲು ನಮ್ಮ ಸ್ವಂತ ವಿವೇಚನೆಯಲ್ಲಿ ನಾವು ಹಕ್ಕು ಕಾಯ್ದಿರಿಸುತ್ತೇವೆ. ಇದನ್ನು ನಾವು ಮಾಡಿದಲ್ಲಿ, ಬದಲಾವಣೆಗಳನ್ನು ನಾವು ಈ ಪುಟದಲ್ಲಿ ಪ್ರಕಟಿಸುತ್ತೇವೆ ಮತ್ತು ಈ ನಿಯಮಗಳನ್ನು ಕೊನೆಯದಾಗಿ ಯಾವಾಗ ಅಪ್‌ಡೇಟ್ ಮಾಡಲಾಗಿದೆ ಎಂಬುದಾಗಿ ಈ ಪುಟದ ಮೇಲ್ಭಾಗದಲ್ಲಿ ಸೂಚಿಸುತ್ತೇವೆ.