ಶೇರ್‌ಚಾಟ್ ಚಾಟ್‌ರೂಮ್ ನೀತಿ
Last updated: 13th December 2023
ಈ ಚಾಟ್‌ರೂಮ್ ನೀತಿಯು ("ಚಾಟ್‌ರೂಮ್ ನೀತಿ")https://sharechat.com/ ನಲ್ಲಿನ ನಮ್ಮ ವೆಬ್‌ಸೈಟ್‌ನಲ್ಲಿ ಮತ್ತು/ಅಥವಾ ಶೇರ್‌ಚಾಟ್ ಮೊಬೈಲ್ ಅಪ್ಲಿಕೇಶನ್‌ನಲ್ಲಿರುವ (ಒಟ್ಟಾರೆಯಾಗಿ "ಪ್ಲಾಟ್‌ಫಾರಂ") ಮತ್ತು ಮೊಹಲ್ಲಾ ಟೆಕ್ ಪ್ರೈ. ಲಿ., ("Sharechat", "ಕಂಪನಿ", "ನಾವು", "ನಮ್ಮ" ಮತ್ತು "ತಮ್ಮ"), ಭಾರತದ ಕಾನೂನು ಅಡಿಯಲ್ಲಿ ಸ್ಥಾಪಿಸಿದ ಖಾಸಗಿ ಕಂಪನಿಯಾಗಿರುವ ನೋಂದಾಯಿತ ಕಚೇರಿಯನ್ನು ಮೊಹಲ್ಲಾ ಟೆಕ್ ಪ್ರೈವೆಟ್ ಲಿಮಿಟೆಡ್, ನಾರ್ತ್ ಟವರ್ ಸ್ಮಾರ್ಟ್‌ವರ್ಕ್ಸ್, ವೈಷ್ಣವಿ ಟೆಕ್ ಪಾರ್ಕ್, ಸರ್ವೆ ನಂ. 16/1 & ನಂ. 17/2 ಅಂಬಲಿಪುರ ಗ್ರಾಮ, ವರ್ತೂರು ಹೋಬಳಿ, ಬೆಂಗಳೂರು ನಗರ, ಕರ್ನಾಟಕ - 560103 ಹೊಂದಿರುವ ನಮ್ಮ ಚಾಟ್‌ರೂಮ್ ವೈಶಿಷ್ಟ್ಯವನ್ನು ("ವೈಶಿಷ್ಟ್ಯ") ನಿರ್ಧರಿಸುತ್ತದೆ. "ನೀವು" ಮತ್ತು "ನಿಮ್ಮ" ಎಂಬ ಪದಗಳು ಪ್ಲಾಟ್‌ಫಾರಂ ಬಳಕೆದಾರರನ್ನು ಉಲ್ಲೇಖಿಸುತ್ತದೆ.
ನಿಮ್ಮ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ನಮ್ಮ ಪ್ಲಾಟ್‌ಫಾರಂ ಸಹಾಯ ಮಾಡುತ್ತದೆ ಮತ್ತು ಚಿತ್ರಗಳು, ವೀಡಿಯೋಗಳು, ಸಂಗೀತ, ಸ್ಟೇಟಸ್ ಅಪ್‌ಡೇಟ್‌ಗಳು ಮತ್ತು ಹೆಚ್ಚಿನದನ್ನು ನಿಮ್ಮ ಆದ್ಯತೆಯ ಪ್ರಾಂತೀಯ ಭಾಷೆಯಲ್ಲಿ ಹಂಚಿಕೊಳ್ಳಲು ಅನುವು ಮಾಡುತ್ತದೆ. ನಿಮ್ಮ ಆದ್ಯತೆಯ ಕಂಟೆಂಟ್ ಅನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ ಮತ್ತು ನಿಮಗೆ ಪೋಸ್ಟ್‌ಗಳು, ಚಿತ್ರಗಳು, ವೀಡಿಯೋಗಳನ್ನು ತೋರಿಸಲು ಮತ್ತು ನಮ್ಮ ಪ್ಲಾಟ್‌ಫಾರಂನಲ್ಲಿ ("ಸೇವೆ/ಸೇವೆಗಳು") ಲಭ್ಯವಿರುವ ಕಂಟೆಂಟ್ ಸಲಹೆ ಮಾಡಲು ನಿಮ್ಮ ನ್ಯೂಸ್‌ಫೀಡ್ ಅನ್ನು ವೈಯಕ್ತಿಕಗೊಳಿಸುತ್ತೇವೆ.
ಸಾಮಾನ್ಯ ಶಿಷ್ಟಾಚಾರ
ಪ್ಲಾಟ್‌ಫಾರಂನಲ್ಲಿ ನೀವು ವೈಶಿಷ್ಟ್ಯವನ್ನು ಬಳಸಿದಾಗ, ಎಲ್ಲ ಸಮಯದಲ್ಲೂ ಈ ಮುಂದಿನ ನಿಯಮಗಳಿಗೆ ಬದ್ಧವಾಗಲು ನೀವು ಸಮ್ಮತಿಸುತ್ತೀರಿ ("ನಿಯಮಗಳು") ನೀವು ಇದನ್ನು ಮಾಡಬೇಕು:
- ಸೇವೆಯಲ್ಲಿ ನಿಜವಾದ ಹೆಸರು ಮತ್ತು ಗುರುತನ್ನು ಬಳಸಬೇಕು;
- ನಮ್ಮ ಬಳಕೆಯ ನೀತಿ ಮತ್ತು ಸಮುದಾಯದ ಮಾರ್ಗಸೂಚಿಗಳನ್ನು ಓದಿ, ಅದಕ್ಕೆ ಬದ್ಧವಾಗಬೇಕು. ಇದರರ್ಥ ನೀವು ಪರಸ್ಪರ:
- ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳ ಸಮೂಹದೊಂದಿಗೆ ನಿಂದನೆ, ಬೆದರಿಕೆ ಅಥವಾ ದೌರ್ಜನ್ಯದಲ್ಲಿ ತೊಡಗಿಸಿಕೊಳ್ಳಬಾರದು. ವಿನಯಪೂರ್ವಕ ಸಂವಾದಗಳಲ್ಲಿ ತೊಡಗಿಸಿಕೊಳ್ಳುವಂತೆ ನಾವು ವಿನಂತಿಸುತ್ತೇವೆ;
- ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳ ಸಮೂಹದ ವಿರುದ್ಧ ತಾರತಮ್ಯ, ದ್ವೇಷಯುತ ವರ್ತನೆಯಲ್ಲಿ ತೊಡಗಬಾರದು ಅಥವಾ ಹಿಂಸೆ ಅಥವಾ ಹಾನಿಯ ಬೆದರಿಕೆ ಒಡ್ಡಬಾರದು; -ಇತರ ವ್ಯಕ್ತಿಗಳ ಖಾಸಗಿ ಮಾಹಿತಿ, ಚಿತ್ರ ಮತ್ತು ಇತರ ಮಾಹಿತಿಯನ್ನು ಅವರ ಪೂರ್ವ ಅನುಮತಿ ಇಲ್ಲದೇ ಹಂಚಿಕೊಳ್ಳುವುದು, ಹಂಚಿಕೊಳ್ಳುವ ಬೆದರಿಕೆ ಒಡ್ಡುವುದು ಅಥವಾ ಹಂಚಿಕೊಳ್ಳುವುದನ್ನು ಪ್ರೋತ್ಸಾಹಿಸುವುದು ಮಾಡಬಾರದು;
- ಪ್ಲಾಟ್‌ಫಾರಂನಿಂದ ಪಡೆದ ಮಾಹಿತಿಯನ್ನು ಪೂರ್ವ ಅನುಮತಿ ಇಲ್ಲದೇ ಲಿಪ್ಯಂತರಣ ಮಾಡಬಾರದು, ರೆಕಾರ್ಡ್ ಮಾಡಬಾರದು ಅಥವಾ ಮರು ಉತ್ಪತ್ತಿ ಮಾಡಬಾರದು ಮತ್ತು/ಅಥವಾ ಮಾಹಿತಿಯನ್ನು ಹಂಚಿಕೊಳ್ಳಬಾರದು;
- ಯಾವುದೇ ಬೌದ್ಧಿಕ ಸ್ವತ್ತು ಅಥವಾ ಇತರ ಸ್ವತ್ತು ಹಕ್ಕುಗಳನ್ನು ಉಲ್ಲಂಘಿಸುವ ಯಾವುದೇ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡಬಾರದು ಅಥವಾ ಸಂವಾದಗಳಲ್ಲಿ ತೊಡಗಿಸಿಕೊಳ್ಳಬಾರದು;
- ಸುಳ್ಳು ಮಾಹಿತಿ ಅಥವಾ ಸ್ಪ್ಯಾಮ್ ಅನ್ನು ಹಂಚಬಾರದು ಅಥವಾ ಮಾಹಿತಿಯನ್ನು ಕೃತಕವಾಗಿ ವರ್ಧಿಸುವುದು ಅಥವಾ ಹತ್ತಿಕ್ಕುವುದನ್ನು ಮಾಡಬಾರದು;
- ಅಪ್ರಾಪ್ತರು ಸೇರಿದಂತೆ ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳ ಸಮೂಹಕ್ಕೆ ಹಾನಿ ಉಂಟು ಮಾಡುವ ಉದ್ದೇಶದ ಅಥವಾ ಹಾನಿ ಉಂಟು ಮಾಡಬಹುದಾದ ಮಾಹಿತಿಯನ್ನು ಹಂಚಿಕೊಳ್ಳಬಾರದು ಅಥವಾ ಪ್ರಚುರಪಡಿಸಬಾರದು (ಅಥವಾ ಕೃತಕ ಅಥವಾ ದುರ್ಬಳಕೆ ಮಾಡಿದ ಮಾಧ್ಯಮ); ಮತ್ತು
- ಬಳಕೆದಾರರು ಅಥವಾ ಸಾಮಾನ್ಯವಾಗಿ ಜನಸಾಮಾನ್ಯರಿಗೆ ಹಾನಿ ಉಂಟು ಮಾಡಬಹುದಾದ ಅಥವಾ ತಪ್ಪುದಾರಿಗೆಳೆಯಬಹುದಾದ ತಪ್ಪು ಮಾಹಿತಿಯನ್ನು ಹರಡಬಾರದು.
- ಅನ್ವಯಿಕ ಕಾನೂನುಗಳ ಪ್ರಕಾರ ಯಾವುದೇ ಅನಧಿಕೃತ ಅಥವಾ ಅಕ್ರಮ ಚಟುವಟಿಕೆಗಳನ್ನು ನಡೆಸುವ ಉದ್ದೇಶಕ್ಕೆ ಸೇವೆಯನ್ನು ಬಳಸಲು ಸಾಧ್ಯವಾಗದಿರಬಹುದು.
ಸುರಕ್ಷತೆ
ಪ್ಲಾಟ್‌ಫಾರಂನಲ್ಲಿ ಯಾರೊಂದಿಗೆ ನೀವು ಸಂವಹನ ನಡೆಸುತ್ತೀರಿ ಎಂಬುದನ್ನು ನೀವು ನಿರ್ಧರಿಸಬಹುದು:
- ಅನ್‌ಫಾಲೋ: ಯಾವುದೇ ಸಮಯದಲ್ಲಿ ಬಳಕೆದಾರರನ್ನು ಅನ್‌ಫಾಲೋ ಮಾಡಬಹುದು. ಅನ್‌ಫಾಲೋ ಮಾಡಲು ಬಳಕೆದಾರರ ಪ್ರೊಫೈಲ್‌ಗೆ ಹೋಗಿ ಮತ್ತು "ಫಾಲೋವಿಂಗ್" ಎಂದು ಹೇಳುವ ಬಟನ್ ಮೇಲೆ ಕ್ಲಿಕ್ ಮಾಡಿ ಆಯ್ಕೆ ರದ್ದು ಮಾಡಿ. ಅವರಿಗೆ ಸೂಚನೆ ನೀಡುವುದಿಲ್ಲ ಮತ್ತು ಅವರ ಚಟುವಟಿಕೆಯ ಬಗ್ಗೆ ನಿಮಗೆ ಇನ್ನಷ್ಟು ಸೂಚನೆಗಳನ್ನು ನೀಡುವುದಿಲ್ಲ.
- ಬ್ಲಾಕ್ ಮಾಡುವುದು: ಯಾವುದೇ ಸಮಯದಲ್ಲಿ ಬಳಕೆದಾರರನ್ನು ನೀವು ಬ್ಲಾಕ್ ಮಾಡಬಹುದು. ಬ್ಲಾಕ್ ಮಾಡಲಾದ ಬಳಕೆದಾರರು ನೀವು ರಚಿಸುವ ಅಥವಾ ನೀವು ಮಾಡರೇಟರ್ ಅಥವಾ ಅಡ್ಮಿನ್ ಆಗಿರುವ ಯಾವುದೇ ರೂಮ್‌ಗೆ ಸೇರಲಾಗದು.
ವರದಿ ಮಾಡುವುದು
ಬಳಕೆದಾರರು ಈ ಚಾಟ್‌ರೂಮ್ ನೀತಿ / ನಿಯಮಗಳ ಉಲ್ಲಂಘಿಸಿರುವುದನ್ನು ನೀವು ಗಮನಿಸಿದರೆ, ಅದನ್ನು contact@sharechat.coಗೆ ವರದಿ ಮಾಡಿ. ಚಾಟ್‌ರೂಮ್ ನೀತಿಯ ಉಲ್ಲಂಘನೆಯ ಬಗ್ಗೆ ಹಲವು ವರದಿಗಳು ಕಂಡುಬಂದರೆ, ನಮ್ಮೊಂದಿಗಿನ ನಿಮ್ಮ ಖಾತೆಯನ್ನು ನಾವು ವಜಾಗೊಳಿಸಬೇಕಾಗಬಹುದು ಮತ್ತು ನಮ್ಮೊಂದಿಗೆ ನೋಂದಣಿ ಮಾಡುವುದರಿಂದ ನಿಮ್ಮನ್ನು ತಡೆಹಿಡಿಯಬೇಕಾಗಬಹುದು. ಇಂತಹ ಯಾವುದೇ ತೆಗೆದುಹಾಕುವಿಕೆಗೆ ನೀವು ಮೇಲ್ಮನವಿ ಸಲ್ಲಿಸಲು ಬಯಸಿದರೆ,ನೀವು contact@sharechat.co. ಗೆ ಬರೆಯಬಹುದು.
ಬಳಕೆದಾರರಿಗೆ ಸೂಚನೆ:
ವರ್ಚುವಲ್ ಉಡುಗೊರೆ ವಹಿವಾಟುಗಳಿಗೆ ಅನುಕೂಲವಾಗುವಂತೆ ಫೋನ್ ಸಂಖ್ಯೆಯಂತಹ ನಿಮ್ಮ ವೈಯಕ್ತಿಕ ವಿವರಗಳನ್ನು ನಮ್ಮ ಪಾವತಿ ಗೇಟ್‌ವೇ ಪಾಲುದಾರರೊಂದಿಗೆ ನಾವು ಹಂಚಿಕೊಳ್ಳಬಹುದು.
ಪ್ಲಾಟ್‌ಫಾರಂನಲ್ಲಿನ ಇತರ ಬಳಕೆದಾರರೊಂದಿಗೆ ಸಂವಾದಕ್ಕೆ ನೀವು ಏಕಪಕ್ಷೀಯವಾಗಿ ಜವಾಬ್ದಾರರಾಗಿರುತ್ತೀರಿ ಮತ್ತು ಈ ಸಂವಾದಗಳಿಗೆ ನಾವು ಯಾವುದೇ ಬಾಧ್ಯತೆ ಅಥವಾ ಜವಾಬ್ದಾರಿಯನ್ನು ಹೊಂದಿರುವುದಿಲ್ಲ ಎಂದು ನೀವು ಸಮ್ಮತಿಸುತ್ತೀರಿ.
ಯಾವುದು ಉಲ್ಲಂಘನೆಯಾಗುತ್ತದೆ ಎಂಬುದನ್ನು ನಿರ್ಧರಿಸುವ ಸ್ವಂತ ವಿವೇಚನೆಯ ಹಕ್ಕನ್ನು ನಾವು ಕಾಯ್ದಿರಿಸುತ್ತೇವೆ.
ಯಾವುದೇ ಸಮಯದಲ್ಲಿ ಈ ಚಾಟ್‌ರೂಮ್ ನೀತಿಯ ಭಾಗಗಳನ್ನು ಬದಲಿಸಲು ನಮ್ಮ ಸ್ವಂತ ವಿವೇಚನೆಯಲ್ಲಿ ನಾವು ಹಕ್ಕು ಕಾಯ್ದಿರಿಸುತ್ತೇವೆ. ಇದನ್ನು ನಾವು ಮಾಡಿದಲ್ಲಿ, ಬದಲಾವಣೆಗಳನ್ನು ನಾವು ಈ ಪುಟದಲ್ಲಿ ಪ್ರಕಟಿಸುತ್ತೇವೆ ಮತ್ತು ಈ ನಿಯಮಗಳನ್ನು ಕೊನೆಯದಾಗಿ ಯಾವಾಗ ಅಪ್‌ಡೇಟ್ ಮಾಡಲಾಗಿದೆ ಎಂಬುದಾಗಿ ಈ ಪುಟದ ಮೇಲ್ಭಾಗದಲ್ಲಿ ಸೂಚಿಸುತ್ತೇವೆ.
ಚಾಟ್‌ರೂಮ್‌ಗಳಲ್ಲಿ ವರ್ಚುವಲ್ ಗಿಫ್ಟ್ ಬಾಕ್ಸ್ ಆಯ್ಕೆಯನ್ನು ಸಕ್ರಿಯಗೊಳಿಸಲು ನಾವು ಎಂದಿಗೂ ನಿಮಗೆ ಶುಲ್ಕ ವಿಧಿಸುವುದಿಲ್ಲ. ಇದನ್ನು ಮಾಡುವುದರಿಂದ ದೂರವಿರಿ ಅಥವಾ ಪ್ಲಾಟ್‌ಫಾರಂನಲ್ಲಿ ಇಂತಹ ಚಟುವಟಿಕೆ ಕಂಡುಬಂದರೆ, ದಯವಿಟ್ಟು contact@sharechat.co ಗೆ ವರದಿ ಮಾಡಿ.