Skip to main content

ಶೇರ್‌ಚಾಟ್ ಪ್ರೈವಸಿ ಪಾಲಿಸಿ

Last updated: 13th December 2023

ನಿಮ್ಮ ಖಾಸಗಿತನವು ಬಹಳ ಪ್ರಮುಖವಾಗಿರುತ್ತದೆ ಎಂದು ನಾವು (ಮೊಹಲ್ಲಾ ಟೆಕ್ ಪ್ರೈ. ಲಿ. ಅಥವಾ "ಶೇರ್‌ಚಾಟ್") ಗುರುತಿಸುತ್ತೇವೆ ಹಾಗೂ ಅದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ನಮ್ಮ ವೆಬ್‌ಸೈಟ್ https://sharechat.com/ ("ವೆಬ್‌ಸೈಟ್") ಮತ್ತು/ಅಥವಾ ‘ಶೇರ್‌ಚಾಟ್’ ("ಆ್ಯಪ್") ಎಂದು ಕರೆಯಲ್ಪಡುವ ಮೊಬೈಲ್ ಅಪ್ಲಿಕೇಶನ್ ಅನ್ನು ನೀವು ಬಳಸಿದಾಗ ನಿಮ್ಮ ದತ್ತಾಂಶವನ್ನು ನಾವು ಹೇಗೆ ಸಂಗ್ರಹಿಸುತ್ತೇವೆ, ಬಳಸುತ್ತೇವೆ ಹಾಗೂ ಬಹಿರಂಗಪಡಿಸುತ್ತೇವೆ ಎಂಬುದನ್ನು ಈ ಪ್ರೈವಸಿ ಪಾಲಿಸಿಯು ("ಪ್ರೈವಸಿ ಪಾಲಿಸಿ") ನಿರ್ದಿಷ್ಟಪಡಿಸುತ್ತದೆ. ಈ ವೆಬ್‌ಸೈಟ್ ಮತ್ತು ಆ್ಯಪ್‌ಗಳನ್ನು ಒಟ್ಟಾರೆಯಾಗಿ "ಪ್ಲ್ಯಾಟ್‌ಫಾರ್ಮ್‌" ಎಂದು ಉಲ್ಲೇಖಿಸಲಾಗುತ್ತದೆ. "ನಾವು", "ನಮ್ಮ" ಅಥವಾ "ನಮಗೆ" ಅಥವಾ "ಕಂಪನಿ" ಈ ಪದಗಳಿಗೆ ಮಾಡಲಾದ ಉಲ್ಲೇಖಗಳು ಈ ಪ್ಲ್ಯಾಟ್‌ಫಾರ್ಮ್‌ ಮತ್ತು/ಅಥವಾ ಮೊಹಲ್ಲಾ ಟೆಕ್ ಪ್ರೈ. ಲಿ. ಎಂದು ಅರ್ಥೈಸುತ್ತವೆ. "ನೀವು", "ನಿಮ್ಮ" ಅಥವಾ "ಬಳಕೆದಾರರು" ಈ ಪದಗಳಿಗೆ ಮಾಡಲಾದ ಉಲ್ಲೇಖಗಳು ನಮ್ಮ ಪ್ಲ್ಯಾಟ್‌ಫಾರ್ಮ್‌ ಅನ್ನು ಬಳಸುವ ಅಸ್ತಿತ್ವಗಳು ಎಂದು ಅರ್ಥೈಸುತ್ತವೆ. ಈ ಪ್ರೈವಸಿ ಪಾಲಿಸಿಯಲ್ಲಿ ವಿವರಿಸಿದಂತಿರುವುದನ್ನು ಹೊರತುಪಡಿಸಿ ನಿಮ್ಮ ಮಾಹಿತಿಯನ್ನು ನಾವು ಬಳಸುವುದಿಲ್ಲ ಅಥವಾ ಯಾರೊಂದಿಗೂ ಶೇರ್ ಮಾಡಿಕೊಳ್ಳುವುದಿಲ್ಲ.

ಈ ಪ್ರೈವಸಿ ಪಾಲಿಸಿಯು ಶೇರ್‌ಚಾಟ್‌ನ ಬಳಕೆಯ ಷರತ್ತುಗಳು ("ಷರತ್ತುಗಳು") ಮತ್ತು ನಮ್ಮ ಶೇರ್‌ಚಾಟ್ ಕುಕೀ ಪಾಲಿಸಿ ಭಾಗವಾಗಿರುತ್ತದೆ ಹಾಗೂ ಅವುಗಳ ಜೊತೆಯಲ್ಲಿಯೇ ಓದಿಕೊಳ್ಳಬೇಕು. ಈ ಪ್ಲ್ಯಾಟ್‌ಫಾರ್ಮ್‌ ಅನ್ನು ಬಳಸುವ ಮೂಲಕ, ಈ ಪ್ರೈವಸಿ ಪಾಲಿಸಿಯ ಷರತ್ತುಗಳು ಮತ್ತು ನಿಬಂಧನೆಗಳಿಗೆ ನೀವು ಒಪ್ಪುತ್ತೀರಿ. ಈ ಪ್ರೈವಸಿ ಪಾಲಿಸಿಯಲ್ಲಿ ವಿವರಿಸಿದ ರೀತಿಯಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯ ನಮ್ಮ ಬಳಕೆ ಹಾಗೂ ಬಹಿರಂಗಪಡಿಸುವಿಕೆಗೂ (ಈ ಕೆಳಗೆ ವ್ಯಾಖ್ಯಾನಿಸಿದಂತೆ) ಸಹ ನೀವು ಸಮ್ಮತಿಸುತ್ತೀರಿ. ಈ ಪ್ರೈವಸಿ ಪಾಲಿಸಿಯಲ್ಲಿ ಬಳಸಲಾಗಿರುವ, ಆದರೆ ಇದರಲ್ಲಿ ವ್ಯಾಖ್ಯಾನಿಸದ ದಪ್ಪನೇ ಅಕ್ಷರಗಳು, ‘ಷರತ್ತುಗಳು’ ಇದರಲ್ಲಿ ಇಂಥ ಪದಗಳಿಗೆ ನೀಡಲಾದ ಅರ್ಥವನ್ನು ಹೊಂದಿರುತ್ತವೆ. ಈ ಪ್ರೈವಸಿ ಪಾಲಿಸಿಯ ಷರತ್ತುಗಳು ಮತ್ತು ನಿಬಂಧನೆಗಳಿಗೆ ನೀವು ಒಪ್ಪದಿದ್ದಲ್ಲಿ, ಈ ಪ್ಲ್ಯಾಟ್‌ಫಾರ್ಮ್‌ ಅನ್ನು ದಯವಿಟ್ಟು ಬಳಸಬೇಡಿ.

ನಾವು ಸಂಗ್ರಹಿಸುವ ಮಾಹಿತಿ ಮತ್ತು ಅದನ್ನು ನಾವು ಹೇಗೆ ಬಳಸುತ್ತೇವೆ

ನಿಮ್ಮಿಂದ ನಾವು ಸಂಗ್ರಹಿಸುವ ಮಾಹಿತಿಯನ್ನು ಮತ್ತು ಅದನ್ನು ನಾವು ಹೇಗೆ ಬಳಸುತ್ತೇವೆ ಎಂಬುದನ್ನು ಈ ಕೆಳಗಿನ ಕೋಷ್ಟಕವು ಪಟ್ಟಿ ಮಾಡುತ್ತದೆ:

ನಾವು ಸಂಗ್ರಹಿಸುವ ಮಾಹಿತಿಅದನ್ನು ನಾವು ಹೇಗೆ ಬಳಸುತ್ತೇವೆ
ಲಾಗ್-ಇನ್ ಮಾಹಿತಿ. ಯೂಜರ್‌ಐಡಿ, ಮೊಬೈಲ್ ಫೋನ್ ನಂಬರ್, ಪಾಸ್‌ವರ್ಡ್, ಲಿಂಗ, ಮತ್ತು ಐಪಿ ವಿಳಾಸ. ನಮ್ಮ ಪ್ಲ್ಯಾಟ್‌ಫಾರ್ಮ್‌ಗೆ ಹಾಗೂ ನಮ್ಮ ಪ್ಲ್ಯಾಟ್‌ಫಾರ್ಮ್‌ನ ಕೆಲವು ವೈಶಿಷ್ಟ್ಯತೆಗಳಿಗೆ ಪ್ರವೇಶಾವಕಾಶವನ್ನು ಹೊಂದಲು ನೀವು ಸೂಕ್ತ ವಯಸ್ಸಿನವರಾಗಿದ್ದೀರಿ ಎಂದು ನಮಗೆ ತಿಳಿಸುವ ಸೂಚನಾತ್ಮಕ ವಯೋ ಶ್ರೇಣಿಯನ್ನು ನಾವು ಸಂಗ್ರಹಿಸಬಹುದು (ಒಟ್ಟಾರೆಯಾಗಿ, "ಲಾಗ್-ಇನ್ ಮಾಹಿತಿ").

ಹೆಚ್ಚುವರಿ ಪ್ರೊಫೈಲ್ ಮಾಹಿತಿ. ಲಾಗ್-ಇನ್ ಮಾಹಿತಿಯ ಜೊತೆಯಲ್ಲಿಯೇ, ನಿಮ್ಮ ಯೂಜರ್ ಪ್ರೊಫೈಲ್‌ನಲ್ಲಿ ನಿಮ್ಮಿಂದ ಒದಗಿಸಲಾದ ನಿಮ್ಮ ಫೋಟೊ ಹಾಗೂ ಬಯೋಗ್ರಫಿಯನ್ನೂ ಸಹ ನಾವು ಸಂಗ್ರಹಿಸುತ್ತೇವೆ.

ನೀವು ಶೇರ್ ಮಾಡಿಕೊಳ್ಳುವ ವಿಷಯ. ಪ್ಲ್ಯಾಟ್‌ಫಾರ್ಮ್‌ ಮೂಲಕ ಇತರ ಬಳಕೆದಾರರಿಗೆ ಲಭ್ಯವಾಗುವಂತೆ ನೀವು ಮಾಡುವ ಎಲ್ಲ ಮಾಹಿತಿಯನ್ನು ಇದು ಒಳಗೊಳ್ಳುತ್ತದೆ, ಅದು ಈ ಮುಂದಿನಂಥವುಗಳನ್ನು ಒಳಗೊಳ್ಳುತ್ತದೆ:

- ಯಾವುದೇ ಕೋಟ್‌ಗಳು, ಇಮೇಜ್‌ಗಳು, ರಾಜಕೀಯ ಅಭಿಪ್ರಾಯಗಳು, ಧಾರ್ಮಿಕ ದೃಷ್ಟಿಕೋನಗಳು, ಮುಂತಾದವುಗಳಿಗಷ್ಟೇ ಸೀಮಿತವಿಲ್ಲದಂತೆ ಅವುಗಳನ್ನೂ ಒಳಗೊಂಡ, ಪ್ಲ್ಯಾಟ್‌ಫಾರ್ಮ್‌ನಲ್ಲಿ ನಿಮ್ಮಿಂದ ಸ್ವಯಂಪ್ರೇರಿತವಾಗಿ ಶೇರ್ ಮಾಡಿಕೊಳ್ಳಲ್ಪಟ್ಟ ನಿಮ್ಮ ಬಗೆಗಿನ ಮಾಹಿತಿ ಅಥವಾ ನಿಮಗೆ ಸಂಬಂಧಿಸಿದ ಮಾಹಿತಿ.
- ಪ್ಲ್ಯಾಟ್‌ಫಾರ್ಮ್‌ನಲ್ಲಿ ನೀವು ಮಾಡುವ ಯಾವುದೇ ಪೋಸ್ಟ್‌ಗಳು (ನಿಮ್ಮ ಪಬ್ಲಿಕ್ ಪ್ರೊಫೈಲ್ ಅನ್ನೂ ಒಳಗೊಂಡು, ಪ್ಲ್ಯಾಟ್‌ಫಾರ್ಮ್‌ನ ‘ಗುಲಾಕ್’ ಫೀಚರ್‌ನಲ್ಲಿ’ ನೀವು ಸೃಷ್ಟಿಸುವ ಪಟ್ಟಿಗಳು, ಮತ್ತು ಫೋಟೊಗಳು, ವಿಡಿಯೋಗಳು ಮತ್ತು ನಿಮ್ಮ ಡಿವೈಸಿನ ಕ್ಯಾಮರಾ ಮತ್ತು/ಅಥವಾ ಮೈಕ್ರೊಫೋನ್ ಸೆನ್ಸರ್ ಮೂಲಕ ಗ್ರಹಿಸಲಾದ ಧ್ವನಿ ಮುದ್ರಿಕೆಗಳು ಮತ್ತು ಫೋಟೊಗಳನ್ನೂ ಒಳಗೊಂಡು), ನೀವು ರಿ-ಪೋಸ್ಟ್ ಮಾಡಿದ ಇತರರಿಂದ ಮಾಡಲಾದ ಯಾವುದೇ ಪೋಸ್ಟಿಂಗ್‌ಗಳು ಮತ್ತು ಇಂಥ ಪೋಸ್ಟಿಂಗ್‌ಗಳಿಗೆ ಸಂಬಂಧಿಸಿದ ಲೊಕೇಶನ್ ಡೇಟಾ ಹಾಗೂ ಲಾಗ್ ಡೇಟಾ.

ಪ್ಲ್ಯಾಟ್‌ಫಾರ್ಮ್‌ನಲ್ಲಿನ ಇತರ ಬಳಕೆದಾರರು ನಿಮ್ಮ ಬಗ್ಗೆ ಶೇರ್ ಮಾಡಿಕೊಂಡ ಹಾಗೂ ಅವರು ನಿಮಗೆ ಮಾಡಿದ ಯಾವುದೇ ಸಂವಹನದ ನಿಮ್ಮ ಬಗೆಗಿನ ಮಾಹಿತಿಯನ್ನೂ ಸಹ ಇದು ಒಳಗೊಳ್ಳುತ್ತದೆ.

ಇತರ ಮೂಲಗಳಿಂದ ನಾವು ಸ್ವೀಕರಿಸುವ ಮಾಹಿತಿ. ತೃತೀಯ ಪಕ್ಷಗಳೊಂದಿಗೂ (ಉದಾಹರಣೆಗಾಗಿ, ವ್ಯವಹಾರದ ಪಾಲುದಾರರು, ಉಪ-ಗುತ್ತಿಗೆದಾರರು, ತಾಂತ್ರಿಕ, ವಿಶ್ಲೇಷಣಾ ಸೇವೆ ಪೂರೈಕೆದಾರರುಗಳನ್ನೂ ಒಳಗೊಂಡಂತೆ) ಸಹ ನಾವು ನಿಕಟವಾಗಿ ಕೆಲಸ ಮಾಡುತ್ತಿರಬಹುದು ಹಾಗೂ ಇಂಥ ಮೂಲಗಳಿಂದ ನಿಮ್ಮ ಬಗ್ಗೆ ಮಾಹಿತಿಯನ್ನು ಸ್ವೀಕರಿಸಬಹುದು. ಇಂಥ ಮಾಹಿತಿಯನ್ನು ಆಂತರಿಕವಾಗಿ ಹಾಗೂ ಈ ಪ್ಲ್ಯಾಟ್‌ಫಾರ್ಮ್‌ನಲ್ಲಿ ಸಂಗ್ರಹಿಸಿದ ಮಾಹಿತಿಯೊಂದಿಗಿನ ಸಂಯೋಜನೆಯಲ್ಲಿ ಶೇರ್ ಮಾಡಿಕೊಳ್ಳಬಹುದು.

ಲಾಗ್ ಡೇಟಾ. ಲಾಗ್ ಡೇಟಾ ಎಂಬುದು ನಮ್ಮ ಪ್ಲ್ಯಾಟ್‌ಫಾರ್ಮ್‌ ಅನ್ನು ನೀವು ಬಳಸಿದಾಗ, ಕುಕೀಗಳು, ವೆಬ್ ಬಿಕಾನ್‌ಗಳು, ಲಾಗ್ ಫೈಲ್‌ಗಳು, ಸ್ಕ್ರಿಪ್ಟ್‌ಗಳನ್ನು ಬಳಸುವ ಮೂಲಕವಾಗಲಿ ಈ ಮುಂದಿನವುಗಳನ್ನು ಒಳಗೊಂಡಂತೆ ಆದರೆ ಅವುಗಳಿಗಷ್ಟೇ ಸೀಮಿತವಾಗದಂತೆ ನಾವು ಸ್ವಯಂಚಾಲಿತವಾಗಿ ಸಂಗ್ರಹಿಸುವ ಮಾಹಿತಿಯಾಗಿದೆ:

- ನಿಮ್ಮ ಮೊಬೈಲ್ ಕ್ಯಾರಿಯರ್-ಸಂಬಂಧಿತ ಮಾಹಿತಿಯಂಥ ತಾಂತ್ರಿಕ ಮಾಹಿತಿ, ನಿಮ್ಮ ವೆಬ್ ಬ್ರೌಜರ್‌ ಅಥವಾ ಪ್ಲ್ಯಾಟ್‌ಫಾರ್ಮ್‌ ಅನ್ನು ಆ್ಯಕ್ಸೆಸ್ ಮಾಡಲು ನೀವು ಬಳಸುವ ಇತರ ಪ್ರೋಗ್ರಾಮ್‌ಗಳಿಂದ ಲಭ್ಯವಾಗುವಂತೆ ಮಾಡಲಾದ ಕಾನ್ಫಿಗರೇಶನ್ ಮಾಹಿತಿ, ನಿಮ್ಮ ಐಪಿ ವಿಳಾಸ ಹಾಗೂ ನಿಮ್ಮ ಡಿವೈಸ್ ವರ್ಷನ್ ಹಾಗೂ ಐಡೆಂಟಿಫಿಕೇಶನ್ ನಂಬರ್;
- ಈ ಪ್ಲ್ಯಾಟ್‌ಫಾರ್ಮ್‌ ಅನ್ನು ಬಳಸುವಾಗ ನೀವು ಏನನ್ನು ಹುಡುಕಿದಿರಿ ಹಾಗೂ ನೋಡಿದಿರಿ ಎಂಬ ಬಗ್ಗೆ ಮಾಹಿತಿ, ಉದಾಹರಣೆಗೆ, ಈ ಪ್ಲ್ಯಾಟ್‌ಫಾರ್ಮ್‌ ಅನ್ನು ಬಳಸುವಾಗ ಬಳಸಲಾದ ವೆಬ್ ಸರ್ಚ್ ಪದಗಳು, ಭೇಟಿ ಮಾಡಿದ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳು, ಬಳಸಿದ ಮಿನಿ ಅಪ್ಲಿಕೇಶನ್‌ಗಳು, ಮತ್ತು ಇತರ ಮಾಹಿತಿ ಹಾಗೂ ಆ್ಯಕ್ಸೆಸ್ ಮಾಡಿದ ಅಥವಾ ಕೋರಿದ ವಿಷಯಗಳ ವಿವರಗಳಂಥವು;
- ಪ್ಲ್ಯಾಟ್‌ಫಾರ್ಮ್‌ನಲ್ಲಿನ ಸಂವಹನಗಳ ಬಗ್ಗೆ ಸಾಮಾನ್ಯ ಮಾಹಿತಿ, ನೀವು ಸಂವಹನ ಮಾಡಿದ ಬಳಕೆದಾರರ ಗುರುತು ಮತ್ತು ನಿಮ್ಮ ಸಂವಹನಗಳ ಸಮಯ, ಮಾಹಿತಿ ಮತ್ತು ಅವಧಿಗಳಂಥವು; ಮತ್ತು
- ಮೇಟಾಡೇಟಾ, ಅಂದರೆ ಈ ಪ್ಲ್ಯಾಟ್‌ಫಾರ್ಮ್‌ ಮೂಲಕ ನೀವು ಲಭ್ಯವಾಗುವಂತೆ ಮಾಡಿದ ಸಾಮಗ್ರಿಗಳಿಗೆ ಸಂಬಂಧಿಸಿದ ಮಾಹಿತಿ, ಶೇರ್‌ ಮಾಡಿದ ಫೋಟೊಗ್ರಾಫ್ ಅಥವಾ ವಿಡಿಯೋವನ್ನು ತೆಗೆದುಕೊಳ್ಳಲಾದ ಅಥವಾ ಪೋಸ್ಟ್ ಮಾಡಿದ ದಿನಾಂಕ, ಸಮಯ ಅಥವಾ ಸ್ಥಳಗಳಂಥವು.

ಕುಕೀಗಳು. ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿನ ಇತರ ಬಳಕೆದಾರರಿಂದ ನಿಮ್ಮನ್ನು ಪ್ರತ್ಯೇಕಿಸಲು ನಮ್ಮ ಪ್ಲ್ಯಾಟ್‌ಫಾರ್ಮ್‌ ಕುಕೀಗಳನ್ನು ಬಳಸುತ್ತದೆ. ನಮ್ಮ ಪ್ಲ್ಯಾಟ್‌ಫಾರ್ಮ್‌ ಅನ್ನು ನೀವು ಬ್ರೌಜ್ ಮಾಡಿದಾಗ ಉತ್ತಮ ಬಳಕೆದಾರ ಅನುಭವವನ್ನು ಒದಗಿಸಲು ನಮಗೆ ಇದು ನೆರವಾಗುತ್ತದೆ ಹಾಗೂ ಈ ಪ್ಲ್ಯಾಟ್‌ಫಾರ್ಮ್‌ ಅನ್ನು ಸುಧಾರಿಸಲೂ ಸಹ ನಮ್ಮನ್ನು ಅನುಮತಿಸುತ್ತದೆ. ನಿಮ್ಮ ಡಿವೈಸ್‌ನಲ್ಲಿರುವ ಕುಕೀಗಳಿಂದ ಕುಕೀ ಡೇಟಾವನ್ನು ನಾವು ಸಂಗ್ರಹಿಸುತ್ತೇವೆ. ನಾವು ಬಳಸುವ ಕುಕೀಗಳು ಹಾಗೂ ಅವುಗಳನ್ನು ನಾವು ಬಳಸುವ ಉದ್ದೇಶಗಳ ಮೇಲಿನ ವಿವರವಾದ ಮಾಹಿತಿಗಾಗಿ, ನಮ್ಮ ಕುಕೀ ಪಾಲಿಸಿಯನ್ನು ನೋಡಿ.

ಸಮೀಕ್ಷೆಗಳು. ಸಮೀಕ್ಷೆಯೊಂದರಲ್ಲಿ ಭಾಗವಹಿಸಲು ನೀವು ಆಯ್ಕೆ ಮಾಡಿದಲ್ಲಿ, ಕೆಲವು ವೈಯಕ್ತಿಕ ಮಾಹಿತಿಯನ್ನು ಅಂದರೆ, ನಿಮ್ಮನ್ನು ಗುರುತಿಸಲು ಬಳಸಬಹುದಾದ ಯಾವುದೇ ಮಾಹಿತಿಯನ್ನು ("ವೈಯಕ್ತಿಕ ಮಾಹಿತಿ") ಒದಗಿಸುವಂತೆ ನಾವು ನಿಮ್ಮನ್ನು ಕೋರಬಹುದು. ಈ ಸಮೀಕ್ಷೆಗಳನ್ನು ನಿರ್ವಹಿಸಲು ತೃತೀಯ-ಪಕ್ಷ ಸೇವಾ ಪೂರೈಕೆದಾರರನ್ನು ನಾವು ಬಳಸಬಹುದು ಹಾಗೂ ಸಮೀಕ್ಷೆಯನ್ನು ಪೂರ್ಣಗೊಳಿಸುವದಕ್ಕೂ ಮೊದಲು ನಿಮಗೆ ಇದನ್ನು ಸೂಚಿತಗೊಳಿಸಲಾಗುತ್ತದೆ.
- ಪ್ಲ್ಯಾಟ್‌ಫಾರ್ಮ್‌ನಲ್ಲಿ ಬಳಕೆದಾರ ಖಾತೆಯೊಂದಕ್ಕೆ ಲಾಗ್‌-ಇನ್ ಆಗುವುದನ್ನು ಸೆಟ್ ಮಾಡಲು ಮತ್ತು ಸುಗಮಗೊಳಿಸಲು;
- ಈ ಪ್ರೈವಸಿ ಪಾಲಿಸಿಯನ್ನೂ ಒಳಗೊಂಡು, ನಮ್ಮ ಪ್ಲ್ಯಾಟ್‌ಫಾರ್ಮ್‌ಗೆ ಮಾಡಲಾಗುವ ಬದಲಾವಣೆಗಳನ್ನು ಸೂಚಿತಗೊಳಿಸಲು;ಬಳಕೆದಾರ ಬೆಂಬಲ ನೀಡಿಕೆಯನ್ನೂ ಒಳಗೊಂಡು, ಸಂವಹನವನ್ನು ಸುಗಮಗೊಳಿಸಲು;
- ನಮ್ಮ ಷರತ್ತುಗಳು, ನಿಬಂಧನೆಗಳು ಹಾಗೂ ಪಾಲಿಸಿಗಳು ಮತ್ತು ನಮ್ಮ ಯಾವುದೇ ಹಕ್ಕುಗಳು, ಅಥವಾ ನಮ್ಮ ಸಹಯೋಗಿ ಸಂಸ್ಥೆಗಳು ಅಥವಾ ನಮ್ಮ ಪ್ಲ್ಯಾಟ್‌ಫಾರ್ಮ್‌ನ ಇತರ ಬಳಕೆದಾರರ ಹಕ್ಕುಗಳನ್ನು ಜಾರಿಗೊಳಿಸಲು;
- ಹೊಸ ಸೇವೆಗಳನ್ನು ಅಭಿವೃದ್ಧಿಪಡಿಸಲು ಹಾಗೂ ಚಾಲ್ತಿಯಲ್ಲಿರುವ ಸೇವೆಗಳು ಮತ್ತು ಪ್ಲ್ಯಾಟ್‌ಫಾರ್ಮ್‌ ಅನ್ನು ಸುಧಾರಿಸಲು ಹಾಗೂ ಬಳಕೆದಾರರ ಅನಿಸಿಕೆ ಹಾಗೂ ಕೋರಿಕೆಗಳನ್ನು ಒಗ್ಗೂಡಿಸಿಕೊಳ್ಳಲು;
- ಭಾಷೆ ಮತ್ತು ಸ್ಥಳ ಆಧರಿತ ವ್ಯಕ್ತಿಗತಗೊಳಿಸುವಿಕೆಯನ್ನು ಒದಗಿಸಲು;
- ಪ್ಲ್ಯಾಟ್‌ಫಾರ್ಮ್‌‌ನ ಆಡಳಿತ ನಡೆಸಲು ಹಾಗೂ ಸಮಸ್ಯೆ ಕಂಡುಹಿಡಿಯುವಿಕೆ, ದತ್ತಾಂಶ ವಿಶ್ಲೇಷಣೆ, ಪರಿಕ್ಷಿಸುವಿಕೆ, ಸಂಶೋಧನೆ, ಭದ್ರತೆ, ವಂಚನೆ ಪತ್ತೆ, ಖಾತೆ ನಿರ್ವಹಣೆ ಮತ್ತು ಸಮೀಕ್ಷೆ ಉದ್ದೇಶಗಳನ್ನೂ ಒಳಗೊಂಡ ಆಂತರಿಕ ಉದ್ದೇಶಗಳಿಗಾಗಿ;
- ನಮ್ಮ ಪ್ಲ್ಯಾಟ್‌ಫಾರ್ಮ್‌ ಅನ್ನು ನೀವು ಹೇಗೆ ಬಳಸುತ್ತೀರಿ ಮತ್ತು ಪ್ರವೇಶಿಸುತ್ತೀರಿ ಎಂಬುದನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳಲು ಮತ್ತು ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿ ಬಳಕೆದಾರರ ಅನುಭವವನ್ನು ಸುಧಾರಿಸಲು;
- ನಿಮ್ಮ "ಮೇರಾ ಮೊಹಲ್ಲಾ" ಮತ್ತು "ಲೋಕಪ್ರಿಯಾ " ಫೀಡ್‌ಗಳನ್ನು ಕಸ್ಟಮೈಜ್ಮಾಡಲು;
- ಈ ಪ್ಲ್ಯಾಟ್‌ಫಾರ್ಮ್‌ ಅನ್ನು ನಮ್ಮ ಬಳಕೆದಾರರು ಹೇಗೆ ಬಳಸುತ್ತಿದ್ದಾರೆ ಎಂಬುದನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳಲು ಪ್ರದೇಶ, ಫೋನ್ ಮಾದರಿ, ಆಪರೇಟಿಂಗ್ ಸಿಸ್ಟಂ ಪ್ಲ್ಯಾಟ್‌ಫಾರ್ಮ್‌, ಸಿಸ್ಟಂ ಲಾಂಗ್ವೇಜ್, ಮತ್ತು ಪ್ಲ್ಯಾಟ್‌ಫಾರ್ಮ್‌ ಆವೃತ್ತಿಗಳಂಥ ವಿಷಯಗಳ ಮೇಲೆ ಬಳಕೆದಾರರ ಜನಸಂಖ್ಯಾತ್ಮಕ ವಿಶ್ಲೇಷಣೆಯನ್ನು ನಡೆಸುವುದಕ್ಕಾಗಿ ವೈಯಕ್ತಿಕ ಮಾಹಿತಿಯನ್ನೂ ಒಳಗೊಂಡು ನಿಮ್ಮ ಮಾಹಿತಿಗೆ ಸುಳ್ಳು ಹೆಸರು ನೀಡಿ, ಒಗ್ಗೂಡಿಸಲು;
- ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿ ತೃತೀಯ-ಪಕ್ಷದ ಸೇವೆಗಳಿಗೆ ಬಳಕೆದಾರರು ಪ್ರವೇಶಾವಕಾಶವನ್ನು ಪಡೆದಾಗ ಯಾವ ವಿಷಯ ಮತ್ತು ಸೇವೆಗಳು ಬಳಸಲ್ಪಟ್ಟಿವೆ ಎಂಬ ಬಗ್ಗೆ ವೆಬ್ ಮತ್ತು ಅಕೌಂಟ್ ಟ್ರಾಫಿಕ್ ಅಂಕಿಅಂಶಗಳನ್ನು ಸಂಗ್ರಹಿಸುವುದಕ್ಕಾಗಿ ವೈಯಕ್ತಿಕ ಮಾಹಿತಿಯನ್ನೂ ಒಳಗೊಂಡು ನಿಮ್ಮ ಮಾಹಿತಿಗೆ ಸುಳ್ಳು ಹೆಸರು ನೀಡಿ, ಒಗ್ಗೂಡಿಸಲು;
- ಜಾಹೀರಾತು ನೀಡಿಕೆ ಹಾಗೂ ಇತರ ಮಾರ್ಕೆಟಿಂಗ್ ಮತ್ತು ಪ್ರೊಮೋಶನಲ್ ಚಟುವಟಿಕೆಗಳ ಪರಿಣಾಮಕತೆಯನ್ನು ಮೌಲ್ಯಮಾಪನ ಮಾಡಲು ಹಾಗೂ ಸುಧಾರಿಸಲು.
ಯೂಜರ್ ಸರ್ಚ್ ಡೇಟಾ. ಈ ಪ್ಲ್ಯಾಟ್‌ಫಾರ್ಮ್‌ನಲ್ಲಿ ನೀವು ಮಾಡುವ ಯಾವುದೇ ಹುಡುಕಾಟಗಳು.ನಿಮ್ಮ ಹಿಂದಿನ ಹುಡುಕಾಟಗಳಿಗೆ ಕ್ಷಿಪ್ರ ಪ್ರವೇಶಾವಕಾಶವನ್ನು ಒದಗಿಸಲು. ವ್ಯಕ್ತಿಗತಗೊಳಿಸುವಿಕೆ ಮತ್ತು ಉದ್ದೇಶಿತ ಜಾಹೀರಾತುಗಳನ್ನು ನಿಮಗೆ ತೋರಿಸುವಿಕೆಗಾಗಿ ಅನಾಲಿಟಿಕ್ಸ್ ಅನ್ನು ಬಳಸಲು.
ಖಾತೆಯ ಹೆಚ್ಚುವರಿ ಭದ್ರತೆ. ನಾವು ನಿಮ್ಮ ಫೋನ್ ನಂಬರ್ ಆನ್ನು ಸಂಗ್ರಹಿಸುತ್ತೇವೆ ಹಾಗೂ ಒನ್-ಟೈಮ್-ಪಾಸ್‌ವರ್ಡ್ ("ಒಟಿಪಿ") ಅನ್ನು ನಿಮಗೆ ಕಳುಹಿಸುವ ಮೂಲಕ ನಿಮ್ಮ ಫೋನ್‌ನಲ್ಲಿನ ಎಸ್ಎಂಎಸ್‌ಗಳಿಗೆ ಪ್ರವೇಶಾವಕಾಶವನ್ನು ಕೋರುತ್ತೇವೆ, ನಮ್ಮ ಪ್ಲ್ಯಾಟ್‌ಫಾರ್ಮ್‌‌ನಲ್ಲಿ ನೋಂದಣಿ ಮಾಡಿಕೊಳ್ಳುವಾಗ ನಿಮ್ಮ ಗುರುತನ್ನು ಧೃಢಪಡಿಸಲು ಒಟಿಪಿಯನ್ನು ನಮೂದಿಸುವ ಮೂಲಕ ನೀವು ಅದನ್ನು ಧೃಢೀಕರಿಸುತ್ತೀರಿ.ನಿಮ್ಮ ಗುರುತನ್ನು ಪರಿಶೀಲಿಸಲು ಹಾಗೂ ನಿಮ್ಮ ಖಾತೆಯ ಭದ್ರತೆಯನ್ನು ನಿರ್ವಹಿಸುವುದಕ್ಕಾಗಿ.
ಚಾಟ್ ಡೇಟಾ. ಈ ಪ್ಲ್ಯಾಟ್‌ಫಾರ್ಮ್‌‌ನಲ್ಲಿನ ಯಾವುದೇ ಚಾಟ್ ಫೀಚರ್ ಅನ್ನು ನೀವು ಬಳಸಿದಾಗ, ನಿಮ್ಮ ಹಾಗೂ ಮತ್ತೊಬ್ಬ ಬಳಕೆದಾರರ ನಡುವಿನ ಯಾವುದೇ ಸಂವಹನಗಳ ವಿಷಯವನ್ನು ನಾವು ಸಂಗ್ರಹಿಸುತ್ತೇವೆ. ಇದನ್ನು ನಿಮ್ಮ ಡಿವೈಸ್‌ನಲ್ಲಿ ಹಾಗೂ ಸಂವಹನವನ್ನು ನೀವು ಕಳುಹಿಸಿದ ಬಳಕೆದಾರರ ಡಿವೈಸ್‌ಗಳಲ್ಲಿ ಸ್ಟೋರ್ ಮಾಡಲಾಗುತ್ತದೆ. ಆದಾಗ್ಯೂ, ನಿಮ್ಮ ಚಾಟ್ ಡೇಟಾವನ್ನು ನಾವು ಅವಲೋಕನ ಮಾಡುವುದಿಲ್ಲ, ನಿಮ್ಮ ಚಾಟ್ ಡೇಟಾ ಮೇಲೆ ಆಧರಿತವಾಗಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಅಥವಾ ಅದನ್ನು ಯಾವುದೇ ತೃತೀಯ ಪಕ್ಷಕ್ಕೆ ಬಹಿರಂಗಪಡಿಸುವುದಿಲ್ಲ.ಮತ್ತೊಬ್ಬ ಬಳಕೆದಾರರಿಗೆ ಸಂವಹನದ ಪೂರೈಕೆಯನ್ನು ಸುಗಮಗೊಳಿಸಲು.
ಕಾಂಟ್ಯಾಕ್ಟ್ ಲಿಸ್ಟ್. ನಿಮ್ಮ ಮೊಬೈಲ್ ಡಿವೈಸ್‌ನಲ್ಲಿನ ಕಾಂಟ್ಯಾಕ್ಟ್ ಲಿಸ್ಟಿಗೆ ಪ್ರವೇಶಾವಕಾಶವನ್ನು ನಾವು ಹೊಂದಿರುತ್ತೇವೆ. ಕಾಂಟ್ಯಾಕ್ಟ್ ಲಿಸ್ಟಿಗೆ ಪ್ರವೇಶಾವಕಾಶವನ್ನು ಹೊಂದುವ ಮೊದಲು ಯಾವಾಗಲೂ ನಿಮ್ಮ ಸಮ್ಮತಿಯನ್ನು ನಾವು ಕೋರುತ್ತೇವೆ ಹಾಗೂ ನಿಮ್ಮ ಕಾಂಟ್ಯಾಕ್ಟ್ ಲಿಸ್ಟಿಗೆ ಪ್ರವೇಶಾವಕಾಶವನ್ನು ನಿರಾಕರಿಸುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ.ಪ್ಲ್ಯಾಟ್‌ಫಾರ್ಮ್‌ನ "ಜುಡಿಯೆ (ಒಗ್ಗೂಡಿ)" ಹಾಗೂ "ತಾ ದೇ (ಆಹ್ವಾನಿಸಿ)" ಫೀಚರ್‌ಗಳ ಮೂಲಕ ಪ್ಲ್ಯಾಟ್‌ಫಾರ್ಮ್‌‌ನ ಇತರ ಬಳಕೆದಾರರೊಂದಿಗೆ ನಿಮ್ಮನ್ನು ಸಂಪರ್ಕಿಸಲು.
ಸ್ಥಳದ ಮಾಹಿತಿ. "ಸ್ಥಳದ ಮಾಹಿತಿ" ಯು ಸ್ಥಳದ ಮಾಹಿತಿಯನ್ನು ಒಳಗೊಳ್ಳುವ ನಿಮ್ಮ ಜಿಪಿಎಸ್, ಐಪಿ ವಿಳಾಸ, ಮತ್ತು/ಅಥವಾ ಪಬ್ಲಿಕ್ ಪೋಸ್ಟ್‌ಗಳಿಂದ ಪಡೆದುಕೊಳ್ಳಲಾದ ಮಾಹಿತಿಯಾಗಿರುತ್ತದೆ. ನಮಗೆ ಮತ್ತು ಈ ಪ್ಲ್ಯಾಟ್‌ಫಾರ್ಮ್‌ನ ಇತರ ಬಳಕೆದಾರರಿಗೆ ಕೆಲವು ಸ್ಥಳ ಮಾಹಿತಿಯನ್ನು ನೀವು ಬಹಿರಂಗಪಡಿಸುತ್ತೀರಿ:

- ‘ಶೇಕ್ ನ್ ಚಾಟ್’ ಫೀಚರ್ ಮತ್ತು/ಅಥವಾ ಕಾಲಕಾಲಕ್ಕೆ ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿ ನಾವು ಪರಿಚಯಿಸಬಹುದಾದ ಇತರ ಯಾವುದೇ ಫೀಚರ್ ಅಥವಾ ಮಿನಿ ಅಪ್ಲಿಕೇಶನ್‌ಗಳಂಥ ಪ್ಲ್ಯಾಟ್‌ಫಾರ್ಮ್‌‌ನಲ್ಲಿನ ಕೆಲವು ಲೊಕೇಶನ್-ಆಧರಿತ ಫೀಚರ್‌ಗಳನ್ನು ನೀವು ಬಳಸಿದಾಗ, ಮತ್ತು ಪ್ಲ್ಯಾಟ್‌ಫಾರ್ಮ್‌ನ ಇತರ ಬಳಕೆದಾರರೊಂದಿಗೆ ನಿಮ್ಮ ಲೊಕೇಶನ್ ಅನ್ನು ನೀವು ಶೇರ್ ಮಾಡಿಕೊಂಡಾಗ; ಮತ್ತು
- ನಿಮ್ಮ ಖಾತೆಗೆ ಬಹುಸಂಖ್ಯೆಯ ಅಥವಾ ವಂಚನಾತ್ಮಕ ಲಾಗಿನ್‌ಗಳನ್ನು ತಡೆಯುವುದಕ್ಕಾಗಿ ಈ ಪ್ಲ್ಯಾಟ್‌ಫಾರ್ಮ್‌ ಅನ್ನು ನೀವು ಆ್ಯಕ್ಸೆಸ್ ಮಾಡಿದಾಗ, ನಿಮ್ಮ ಐಪಿ ವಿಳಾಸ, ಡಿವೈಸ್, ಅಥವಾ ಇಂಟರ್‌ನೆಟ್ ಸರ್ವೀಸ್‌ನಿಂದ ಸ್ಥಳದ ಮಾಹಿತಿಯನ್ನು ನಾವು ಪಡೆದುಕೊಳ್ಳುವಂತೆ.
ಭದ್ರತೆ, ವಂಚನೆ ಪತ್ತೆ ಮತ್ತು ಖಾತೆ ನಿರ್ವಹಣೆಗಾಗಿ (ನಿಮ್ಮ ಖಾತೆಯಲ್ಲಿ ಬಹುಸಂಖ್ಯೆಯ ಲಾಗ್-ಇನ್‌ಗಳು ಅಥವಾ ಸಂಶಯಾತ್ಮಕ ಲಾಗ್-ಇನ್‌ಗಳು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಲು ಮಾಡುವಂಥವು);

ಬಳಸಲು ನೀವು ಆಯ್ಕೆ ಮಾಡಿಕೊಂಡಿರುವ ಲೊಕೇಶನ್-ಆಧರಿತ ಸೇವೆಗಳನ್ನು ನಿಮಗೆ ಒದಗಿಸಲು:

- ‘ಶೇಕ್ ನ್ ಚಾಟ್’ ಗಳಂಥವು (ಸೀಮಿತ ಸಮಯಾವಧಿಗಾಗಿ ನಿಮ್ಮ ಸಾಮಾನ್ಯ ಲೊಕೇಶನ್ ಅನ್ನು ಬಹಿರಂಗಪಡಿಸುವುದಕ್ಕಾಗಿ ಬಳಸಲು ನೀವು ಆಯ್ಕೆ ಮಾಡಬಹುದಾದ ಇವುಗಳು ಲೊಕೇಶನ್-ಆಧರಿತ ಸೇವೆಗಳಾಗಿವೆ);
- ಈ ಪ್ಲ್ಯಾಟ್‌ಫಾರ್ಮ್‌ನಲ್ಲಿ ಕಾಲಕಾಲಕ್ಕೆ ಲಭ್ಯವಾಗುವಂತೆ ಮಾಡಬಹುದಾದ ಮಿನಿ ಅಪ್ಲಿಕೇಶನ್‌ಗಳು, ಅವುಗಳು ಒದಗಿಸುವ ಸೇವೆಗಳ ಮೇಲೆ ಆಧರಿತವಾಗಿ ಇವುಗಳಿಗೆ ಇಂಥ ಮಾಹಿತಿಯು ಅಗತ್ಯವಾಗಬಹುದು (ನಿಮ್ಮ ಲೊಕೇಶನ್ ಅನ್ನು ಯಾವುದೇ ಮಿನಿ ಅಪ್ಲಿಕೇಶನ್ನಿಗೆ ಬಹಿರಂಗಪಡಿಸುವುದನ್ನು ನೀವು ಆಯ್ಕೆ ಮಾಡಿಕೊಂಡಲ್ಲಿ);
- ‘ನ್ಯೂಸ್ ಕಾರ್ನರ್’ (ಈ ಫೀಚರ್ ಅನ್ನು ನೀವು ಆ್ಯಕ್ಸೆಸ್ ಮಾಡಿದಲ್ಲಿ, ಸ್ಥಳೀಯವಾಗಿ ಸಂಬಂಧಿಸುವ ಸಮಾಚಾರ ವಿಷಯವನ್ನು ನಿಮಗೆ ಸಮರ್ಪಕವಾಗಿಸಲು ನಿಮ್ಮ ಲೊಕೇಶನ್ ಅನ್ನು ನಾವು ಬಳಸಬಹುದು);
- ಭಾಷೆ ಮತ್ತು ಸ್ಥಳದ ಕಸ್ಟಮೈಜೇಶನ್‌ಗಳನ್ನು ಒದಗಿಸಲು.
ಗ್ರಾಹಕ ಬೆಂಬಲಿಸುವಿಕೆ ಮಾಹಿತಿ. ನಮ್ಮ ಪ್ಲ್ಯಾಟ್‌ಫಾರ್ಮ್‌ ಅನ್ನು ಬಳಸಲು ಕಾಲಕಾಲಕ್ಕೆ ನಿಮಗೆ ಅಗತ್ಯವಾಗುವ ಯಾವುದೇ ನೆರವು ಅಥವಾ ಬೆಂಬಲದ ಬಗ್ಗೆ ನಮ್ಮ ಗ್ರಾಹಕ ಬೆಂಬಲಿಸುವಿಕೆ ತಂಡಕ್ಕೆ ನೀವು ಒದಗಿಸುವ ಯಾವುದೇ ಮಾಹಿತಿ.ನಿಮ್ಮ ಬೆಂಬಲಿಸುವಿಕೆ ಸಮಸ್ಯೆಯನ್ನು ತನಿಖೆ ಮಾಡಲು.
ಡಿವೈಸ್ ಡೇಟಾ. "ಡಿವೈಸ್ ಡೇಟಾ" ಎಂದರೆ ಸೀಮಿತವಿಲ್ಲದೇ, ಈ ಮುಂದಿನವುಗಳನ್ನು ಒಳಗೊಳ್ಳುತ್ತದೆ:

§ ಡಿವೈಸ್‌ನ ಗುಣಲಕ್ಷಣಗಳು: ಆಪರೇಟಿಂಗ್ ಸಿಸ್ಟಂ, ಹಾರ್ಡ್‌ವೇರ್ ಮತ್ತು ಸಾಫ್ಟ್‌‌ವೇರ್ ವರ್ಷನ್‌ಗಳು, ಬ್ಯಾಟರಿ ಲೆವೆಲ್, ಸಿಗ್ನಲ್ ಸ್ಟ್ರೆಂಗ್ತ್, ಲಭ್ಯವಿರುವ ಸ್ಟೋರೇಜ್ ಸ್ಪೇಸ್, ಬ್ರೌಜರ್ ಟೈಪ್, ಆ್ಯಪ್ ಮತ್ತು ಫೈಲ್ ನೇಮ್‌ಗಳು ಮತ್ತು ಟೈಪ್‌ಗಳು, ಮತ್ತು ಪ್ಲಗ್ಇನ್‌ಗಳಂಥ ಮಾಹಿತಿ.

§ ಡಿವೈಸ್ ಆಪರೇಶನ್‌ಗಳು: ಡಿವೈಸ್‌ನಲ್ಲಿ ಮಾಡಲಾದ ಆಪರೇಶನ್‌ಗಳು ಮತ್ತು ಬಿಹೇವಿಯರ್‌ಗಳ ಬಗ್ಗೆ ಮಾಹಿತಿ, ವಿಂಡೋವನ್ನು ಮುನ್ನೆಲೆಗೆ ತರಲಾಗಿದೆಯೇ ಅಥವಾ ಹಿನ್ನೆಲೆಗೆ ತರಲಾಗಿದೆಯೆ ಇಂಥವುಗಳು.

§ ಐಡೆಂಟಿಫೈಯರ್‌ಗಳು: ಯೂನೀಕ್ ಐಡೆಂಟಿಫೈಯರ್‌ಗಳು, ಡಿವೈಸ್ ಐಡಿಗಳು, ಮತ್ತು ಗೇಮ್‌ಗಳು, ಆ್ಯಪ್‌ಗಳು ಅಥವಾ ನೀವು ಬಳಸುವ ಖಾತೆಗಳಿಂದ ಬರುವಂಥ ಇತರ ಐಡೆಂಟಿಫೈಯರ್‌ಗಳು.

§ ಡಿವೈಸ್ ಸಿಗ್ನಲ್‌ಗಳು: ನಿಮ್ಮ ಬ್ಲ್ಯೂಟೂತ್ ಸಿಗ್ನಲ್‌ಗಳನ್ನು ಮತ್ತು ಹತ್ತಿರದ ವೈ-ಫೈ ಆ್ಯಕ್ಸೆಸ್ ಪಾಯಿಂಟ್‌ಗಳು, ಬೀಕಾನ್‌ಗಳು ಮತ್ತು ಸೆಲ್ ಟವರ್‌ಗಳ ಬಗ್ಗೆ ಮಾಹಿತಿಯನ್ನು ನಾವು ಸಂಗ್ರಹಿಸಬಹುದು.

§ ಡಿವೈಸ್ ಸೆಟಿಂಗ್‌ಗಳಿಂದ ಡೇಟಾ: ನೀವು ಆನ್ ಮಾಡುವ ಡಿವೈಸ್ ಸೆಟಿಂಗ್‌ಗಳ ಮೂಲಕ ನೀವು ನಮ್ಮನ್ನು ಅನುಮತಿಸುವ ಮಾಹಿತಿ, ನಿಮ್ಮ ಜಿಪಿಎಸ್ ಲೊಕೇಶನ್, ಕ್ಯಾಮರಾ ಅಥವಾ ಫೋಟೊಗಳಿಗೆ ಆ್ಯಕ್ಸೆಸ್‌ಗಳಂಥವು.

§ ನೆಟ್‌ವರ್ಕ್ ಮತ್ತು ಕನೆಕ್ಷನ್‌ಗಳು: ನಿಮ್ಮ ಮೊಬೈಲ್ ಆಪರೇಟರ್‌ ಹೆಸರು ಅಥವಾ ಐಎಸ್‌ಪಿ, ಭಾಷೆ, ಸಮಯ ವಲಯ, ಮೊಬೈಲ್ ಫೋನ್ ನಂಬರ್, ಐಪಿ ವಿಳಾಸ ಮತ್ತು ಕನೆಕ್ಷನ್‌ ಸ್ಪೀಡ್‌ಗಳಂಥ ಮಾಹಿತಿ.

§ ಅಪ್ಲಿಕೇಶನ್: ನಿಮ್ಮ ಮೊಬೈಲ್ ಡಿವೈಸ್‌ನಲ್ಲಿ ಸ್ಟೋರ್ ಮಾಡಲಾದ ಯಾವುದೇ ಮೊಬೈಲ್ ಅಪ್ಲಿಕೇಶನ್‌ಗಳು.

§ ಮಾಧ್ಯಮಗಳು (ಮೀಡಿಯಾ): ಇಮೇಜ್‌ಗಳು, ವಿಡಿಯೋಗಳು ಮತ್ತು ಆಡಿಯೋ ಫೈಲ್‌ಗಳಿಗೆ ಸೀಮಿತವಾಗದೇ ಅವುಗಳನ್ನೂ ಒಳಗೊಂಡು ನಿಮ್ಮ ಮೊಬೈಲ್ ಡಿವೈಸ್‌ನಲ್ಲಿನ ಮೀಡಿಯಾ ಗ್ಯಾಲರಿಯನ್ನು ಮತ್ತು ನಿಮ್ಮ ಫೋನ್‌ನಲ್ಲಿನ ಸ್ಟೋರೇಜ್ ಸ್ಪೇಸ್ ಅನ್ನು ನಾವು ಆ್ಯಕ್ಸೆಸ್ ಮಾಡುತ್ತೇವೆ. ಆದಾಗ್ಯೂ, ನಿಮ್ಮ ಇಮೇಜ್‌ಗಳನ್ನು ಆ್ಯಕ್ಸೆಸ್ ಮಾಡುವುದಕ್ಕೂ ಮೊದಲು ನಿಮ್ಮ ಸಮ್ಮತಿಯನ್ನು ನಾವು ಯಾವಾಗಲೂ ಪಡೆದುಕೊಳ್ಳುತ್ತೇವೆ ಹಾಗೂ ಇಂಥ ಆ್ಯಕ್ಸೆಸ್ ಅನ್ನು ನಿರಾಕರಿಸುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ.
- ಈ ಪ್ಲ್ಯಾಟ್‌ಫಾರ್ಮ್‌ ಬಳಸಿಕೊಂಡು ಆಡಿಯೋಗಳು, ವಿಡಿಯೋಗಳು, ಮತ್ತು ಇಮೇಜ್‌ಗಳಂಥ ಯಾವುದೇ ಮಾಧ್ಯಮಗಳನ್ನು ಶೇರ್ ಮಾಡಿಕೊಳ್ಳಲು ಸುಗಮಗೊಳಿಸಲು;
- ನಿಮ್ಮ ಮೊಬೈಲ್ ಡಿವೈಸಿಗೆ ಹೊಂದುವಂತೆ ನಮ್ಮ ಪ್ಲ್ಯಾಟ್‌ಫಾರ್ಮ್‌ ಅನ್ನು ಕಸ್ಟಮೈಜ್ ಮಾಡಲು;
- ವ್ಹಾಟ್ಸ್ಆ್ಯಪ್ ಮತ್ತು/ಅಥವಾ ಫೇಸ್‌ಬುಕ್ ಮೂಲಕ ಶೇರ್ ಮಾಡಿಕೊಳ್ಳುವ ಉದ್ದೇಶಗಳಿಗಾಗಿ ಈ ಪ್ಲ್ಯಾಟ್‌ಫಾರ್ಮ್‌‌ನಿಂದ ಯಾವುದೇ ವಿಷಯವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗುವಂತೆ ನಿಮ್ಮ ಡಿವೈಸ್‌ನಲ್ಲಿ ಸಾಕಷ್ಟು ಸ್ಟೋರೇಜ್ ಸ್ಪೇಸ್ ಇದೆಯೇ ಎಂಬುದನ್ನು ತಿಳಿದುಕೊಳ್ಳಲು;
- ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿ ನಿಮ್ಮ ಬಳಕೆದಾರ ಅನುಭವವನ್ನು ಸೂಕ್ತಗೊಳಿಸಲು;
- ನಿಮ್ಮ ಮೊಬೈಲ್ ಡಿವೈಸ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲಾದ ಅಪ್ಲಿಕೇಶನ್‌ಗಳ ಮೂಲಕ ಈ ಪ್ಲ್ಯಾಟ್‌ಫಾರ್ಮ್‌ನಲ್ಲಿ ಯಾವುದೇ ವಿಷಯವನ್ನು ಶೇರ್ ಮಾಡಿಕೊಳ್ಳುವುದನ್ನು ಸುಗಮಗೊಳಿಸಲು;
- ನಮ್ಮ ಷರತ್ತುಗಳು, ನಿಬಂಧನೆಗಳು ಮತ್ತು ಪಾಲಿಸಿಗಳನ್ನು ಜಾರಿಗೊಳಿಸಲು ಅನುವಾಗುವಂತೆ ನಿಮ್ಮ ಗುರುತನ್ನು ಪರಿಶೀಲಿಸಲು;
- ನಮ್ಮ ಪ್ಲ್ಯಾಟ್‌ಫಾರ್ಮ್‌ ಅನ್ನು ಸುಧಾರಿಸಲು.
ಸ್ಪರ್ಧಾತ್ಮಕ ಮಾಹಿತಿ. ಕಾಲಕಾಲಕ್ಕೆ ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿ ಆಫರ್ ಮಾಡಬಹುದಾದ ಯಾವುದೇ ಸ್ಪರ್ಧೆಗೆ ಪ್ರವೇಶವೊಂದನ್ನು ಸಲ್ಲಿಸುವಲ್ಲಿ ನಮಗೆ ನೀವು ಒದಗಿಸುವ ಯಾವುದೇ ಮಾಹಿತಿ.- ಸ್ಪರ್ಧೆಯಲ್ಲಿ ನಿಮ್ಮ ಭಾಗವಹಿಸುವಿಕೆಯನ್ನು ಸುಗಮಗೊಳಿಸಲು;
- ಅನ್ವಯವಾಗುತ್ತಿದ್ದಲ್ಲಿ, ಪುರಸ್ಕಾರಗಳನ್ನು ನೀಡಲು.

ನಿಮ್ಮ ಮಾಹಿತಿಯ ಬಹಿರಂಗಪಡಿಸುವಿಕೆ

ನಿಮ್ಮ ಮಾಹಿತಿಯನ್ನು ನಾವು ಈ ಕೆಳಗಿನ ರೀತಿಯಲ್ಲಿ ಬಹಿರಂಗಪಡಿಸುತ್ತೇವೆ:

ಇತತರರಿಗೆ ಕಾಣಿಸುವ ವಿಷಯ

ಸಾರ್ವಜನಿಕ ವಿಷಯ ಅಂದರೆ, ನಿಮ್ಮ ಯೂಜರ್ ಪ್ರೊಫೈಲ್‌ನಲ್ಲಿ ಅಥವಾ ಇನ್ನೊಬ್ಬರ ಯೂಜರ್ ಪ್ರೊಫೈಲ್‌ನಲ್ಲಿ ನೀವು ಪೋಸ್ಟ್ ಮಾಡುವ ಯಾವುದೇ ವಿಷಯ, ಸರ್ಚ್ ಇಂಜಿನ್‌ಗಳನ್ನೂ ಒಳಗೊಂಡು, ಒಂದು ಪೋಸ್ಟ್ ಕಮೆಂಟ್, ಪ್ರತಿಯೊಬ್ಬರಿಗೂ ಆ್ಯಕ್ಸೆಸ್ಸಿಬಲ್ ಇರುತ್ತದೆ, ಇಂಥವುಗಳು. ನಿಮ್ಮ ಪ್ರೊಫೈಲ್ ಪುಟದ ಮಾಹಿತಿಯು ಪ್ರತಿಯೊಬ್ಬರಿಗೂ ಆ್ಯಕ್ಸೆಸ್ಸಿಬಲ್ ಇರುತ್ತದೆ, ಅದನ್ನೂ ಒಳಗೊಂಡಂತೆ ಪ್ಲ್ಯಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡುವುದಕ್ಕಾಗಿ ನೀವು ಸ್ವಯಂಪ್ರೇರಿತರಾಗಿ ಬಹಿರಂಗಪಡಿಸುವ ಯಾವುದೇ ಮಾಹಿತಿ. ಪ್ಲ್ಯಾಟ್‌ಫಾರ್ಮ್‌ನಲ್ಲಿ ಸಾರ್ವಜನಿಕಗೊಳಿಸಬೇಕು ಎಂದು ನೀವು ಆಯ್ಕೆ ಮಾಡಿಕೊಂಡ ವಿಷಯವನ್ನು ನೀವು ಸಲ್ಲಿಸಿದಾಗ, ಪೋಸ್ಟ್ ಮಾಡಿದಾಗ ಅಥವಾ ಶೇರ್ ಮಾಡಿದಾಗ,ಅದು ಇತರರಿಂದ ರಿ-ಶೇರ್ ಮಾಡಿಕೊಳ್ಳಲ್ಪಡಬಹುದು. ಅದನ್ನು ಶೇರ್ ಮಾಡಿಕೊಳ್ಳಲು ನೀವು ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದನ್ನು ನೀವು ಪರಿಗಣಿಸಬೇಕು, ಏಕೆಂದರೆ ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿ ನಿಮ್ಮ ಚಟುವಟಿಕೆಯನ್ನು ನೋಡಬಲ್ಲ ಜನರು ನೀವು ಅದನ್ನು ಶೇರ್ ಮಾಡಿಕೊಂಡ ಪ್ರೇಕ್ಷರನ್ನು ಬಿಟ್ಟು ಹೊರಗಿನ ಜನರನ್ನೂ ಒಳಗೊಂಡಂತೆ ಅದನ್ನು ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿನ ಮತ್ತು ಹೊರಗಿನ ಜನರೊಂದಿಗೆ ಅದನ್ನು ಶೇರ್ ಮಾಡಿಕೊಳ್ಳಲು ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ, ನಮ್ಮ ಪ್ಲ್ಯಾಟ್‌ಫಾರ್ಮ್‌ ಅಥವಾ ಖಾತೆಗಳ ನಿರ್ದಿಷ್ಟ ಬಳಕೆದಾರರಿಗೆ ಪೋಸ್ಟ್ ಒಂದನ್ನು ನೀವು ಶೇರ್ ಮಾಡಿಕೊಂಡಾಗ ಅಥವಾ ಸಂದೇಶವೊಂದನ್ನು ಕಳುಹಿಸಿದಾಗ, ಆ ವಿಷಯವನ್ನು ಅವರು ಡೌನ್‌ಲೋಡ್ ಅಥವಾ ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿನ ಮತ್ತು ಹೊರಗಿನ ಇತರ ಬಳಕೆದಾರರೊಂದಿಗೆ ರಿ-ಶೇರ್ ಮಾಡಿಕೊಳ್ಳಬಹುದು. ಅಲ್ಲದೇ, ಇನ್ನೊಬ್ಬರ ಪೋಸ್ಟ್ ಬಗ್ಗೆ ನೀವು ಕಮೆಂಟ್ ಮಾಡಿದಾಗ ಅಥವಾ ಅವರ ವಿಷಯವನ್ನು ಲೈಕ್ ಮಾಡಿದಾಗ, ಆ ಇನ್ನೊಬ್ಬ ವ್ಯಕ್ತಿಯ ವಿಷಯವನ್ನು ನೋಡಬಲ್ಲ ಯಾರಿಗೇ ಆಗಲಿ ನಿಮ್ಮ ಕಮೆಂಟ್ ಅಥವಾ ಲೈಕ್ ಕಾಣಿಸುತ್ತದೆ.ನೀವು ಅನುಮೋದಿಸಿದ ಅನುಯಾಯಿಗಳು ಮಾತ್ರ ನಿಮ್ಮ ಪೋಸ್ಟ್‌ಗಳನ್ನು ನೋಡಬಹುದು ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಪ್ರೊಫೈಲ್ ಅನ್ನು ಖಾಸಗಿಯನ್ನಾಗಿ ಮಾಡುವ ಆಯ್ಕೆಯನ್ನು ಸಹ ನೀವು ಹೊಂದಿದ್ದೀರಿ ಎಂಬುದನ್ನು ದಯವಿಟ್ಟು ಗಮನಿಸಿ. ಪ್ಲಾಟ್‌ಫಾರ್ಮ್‌ನಲ್ಲಿನ ಖಾಸಗಿ ಶೇರ್‌ಚಾಟ್ ವೈಶಿಷ್ಟ್ಯಕ್ಕೆ ಸಂಬಂಧಿಸಿದಂತೆ ವಿವರವಾದ ಮಾಹಿತಿಗಾಗಿ ದಯವಿಟ್ಟು https://help.sharechat.com/faq/private-profile ನಲ್ಲಿ ಲಭ್ಯವಿರುವ FAQ ವಿಭಾಗವನ್ನು ನೋಡಿ.

ಬಳಕೆದಾರರು ನಮ್ಮ ಪ್ಲ್ಯಾಟ್‌ಫಾರ್ಮ್‌ ಅನ್ನು ನಿಮ್ಮ ಬಗ್ಗೆ ವಿಷಯವನ್ನು ಸೃಷ್ಟಿಸಲು ಹಾಗೂ ತಮ್ಮ ಆಯ್ಕೆಯ ಪ್ರೇಕ್ಷಕರೊಂದಿಗೆ ಅದನ್ನು ಶೇರ್ ಮಾಡಿಕೊಳ್ಳಲೂ ಸಹ ಬಳಸಬಹುದು, ಉದಾಹರಣೆಗೆ ನಿಮ್ಮ ಫೋಟೊವೊಂದನ್ನು ಪೋಸ್ಟ್ ಮಾಡುವುದು, ಅಥವಾ ತಮ್ಮ ಯಾವುದೇ ಪೋಸ್ಟ್‌ಗಳಲ್ಲಿ ನಿಮ್ಮನ್ನು ಟ್ಯಾಗ್ ಮಾಡುವುದು. ಎಲ್ಲ ಸಾರ್ವಜನಿಕ ವಿಷಯವನ್ನು ಯಾವುದೇ ಸಾಮಾಜಿಕ ಮಾಧ್ಯಮ ಅಥವಾ ಇತರ ಯಾವುದೇ ಆನ್‌ಲೈನ್ ಅಥವಾ ಆಫ್‌ಲೈನ್ ಪ್ಲ್ಯಾಟ್‌ಫಾರ್ಮ್‌ನಲ್ಲಿ ಶೇರ್ ಮಾಡುವ ಹಕ್ಕನ್ನು ನಾವು ಕಾಯ್ದಿರಿಸುತ್ತೇವೆ. ಈ ಷರತ್ತುಗಳಲ್ಲಿ ಸ್ಪಷ್ಟವಾಗಿ ಒದಗಿಸದೇ ಇದ್ದಲ್ಲಿ, ಅನಾಮಧೇಯ ಆಧಾರದ ಮೇಲೆ ಹೊರತುಪಡಿಸಿ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ತೃತೀಯ ಪಕ್ಷಗಳಿಗೆ ನಾವು ಎಂದಿಗೂ ಬಾಡಿಗೆಗೆ ಒದಗಿಸುವುದಿಲ್ಲ ಅಥವಾ ಮಾರಾಟ ಮಾಡುವುದಿಲ್ಲ.

ನಮ್ಮ ಸಂಸ್ಥೆಗಳ ಸಮೂಹದೊಂದಿಗೆ ಶೇರ್ ಮಾಡಿಕೊಳ್ಳುವಿಕೆ

ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಮ್ಮ ಸಮೂಹದ ಯಾವುದೇ ಸದಸ್ಯರೊಂದಿಗೆ ನಾವು ಶೇರ್ ಮಾಡಿಕೊಳ್ಳಬಹುದು. "ಸಮೂಹ" ಎಂಬ ಪದವು ನಮ್ಮಿಂದ ನಿಯಂತ್ರಿಸಲ್ಪಡುವ ಅಸ್ತಿತ್ವ ಅಥವಾ ನಮ್ಮ ನಿಯಂತ್ರಣದಲ್ಲಿರುವ ಯಾವುದೇ ಅಸ್ತಿತ್ವ, ಅಥವಾ ಪರೋಕ್ಷವಾಗಿ ಅಥವಾ ಅಪರೋಕ್ಷವಾಗಿ ನಮ್ಮ ಸಾಮಾನ್ಯ ನಿಯಂತ್ರಣದಡಿಯಲ್ಲಿರುವ ಯಾವುದೇ ಅಸ್ತಿತ್ವ ಎಂದು ಅರ್ಥೈಸುತ್ತದೆ.

ಇತರರೊಂದಿಗೆ ನೀವು ಏನನ್ನು ಶೇರ್ ಮಾಡಿಕೊಳ್ಳುತ್ತೀರಿ

ನಮ್ಮ ಪ್ಲ್ಯಾಟ್‌ಫಾರ್ಮ್‌ ಅನ್ನು ಬಳಸಿಕೊಂಡು ವಿಷಯವನ್ನು ನೀವು ಶೇರ್ ಮಾಡಿಕೊಂಡಾಗ, ನೀವು ಶೇರ್ ಮಾಡಿದುದಕ್ಕೆ ಪ್ರೇಕ್ಷಕರನ್ನು ನೀವು ಆಯ್ಕೆ ಮಾಡುತ್ತೀರಿ. ಉದಾಹರಣೆಗಾಗಿ, ನಮ್ಮ ಪ್ಲ್ಯಾಟ್‌ಫಾರ್ಮ್‌ನಿಂದ ಯಾವುದೇ ವಿಷಯವನ್ನು ನೀವು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದಾಗ, ಆ ಪೋಸ್ಟಿಗೆ ನಿಮ್ಮ ಸ್ನೇಹಿತರು, ಸ್ನೇಹಿತರ ಗುಂಪು ಅಥವಾ ನಿಮ್ಮ ಎಲ್ಲ ಸ್ನೇಹಿತರು, ಹೀಗೆ ಪ್ರೇಕ್ಷಕರನ್ನು ನೀವು ಆಯ್ಕೆ ಮಾಡುತ್ತೀರಿ. ಅದೇ ರೀತಿಯಾಗಿ, ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿನ ವಿಷಯವನ್ನು ಶೇರ್ ಮಾಡಿಕೊಳ್ಳಲು ನಿಮ್ಮ ಮೊಬೈಲ್ ಡಿವೈಸ್‌ನಲ್ಲಿನ ವ್ಹಾಟ್ಸ್ಆ್ಯಪ್ ಅಥವಾ ಇತರ ಯಾವುದೇ ಅಪ್ಲಿಕೇಶನ್ ಅನ್ನು ನೀವು ಬಳಸಿದಾಗ, ಆ ವಿಷಯವನ್ನು ನೀವು ಯಾರೊಂದಿಗೆ ಶೇರ್ ಮಾಡಿಕೊಳ್ಳುತ್ತೀರಿ ಎಂಬುದನ್ನು ನೀವು ಆಯ್ಕೆ ಮಾಡುತ್ತೀರಿ. ಇಂಥ ವ್ಯಕ್ತಿಗಳು (ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ವ್ಯಾಟ್ಸ್ಆ್ಯಪ್ ಅಥವಾ ಫೇಸ್‌ಬುಕ್‌ಗಳಂಥ ಶೇರಿಂಗ್ ಆಪ್ಷನ್‌ಗಳ ಮೂಲಕ ವಿಷಯವನ್ನು ಶೇರ್ ಮಾಡಿಕೊಳ್ಳಲು ನೀವು ಆಯ್ಕೆ ಮಾಡಿಕೊಂಡವರು), ಅವರೊಂದಿಗೆ ನೀವು ಶೇರ್ ಮಾಡಿಕೊಂಡ ಮಾಹಿತಿಯನ್ನು ಬಳಸುವುದನ್ನು ನಾವು ನಿಯಂತ್ರಿಸುವುದಿಲ್ಲ ಹಾಗೂ ಬಳಸುವ ರೀತಿಗೆ ನಾವು ಬಾಧ್ಯಸ್ಥರಾಗಿರುವುದಿಲ್ಲ.

ತೃತೀಯ ಪಕ್ಷಗಳೊಂದಿಗೆ ಶೇರ್ ಮಾಡಿಕೊಳ್ಳುವಿಕೆ

ಈ ಮುಂದಿನವರನ್ನು ಒಳಗೊಂಡಂತೆ ಆಯ್ದ ತೃತೀಯ ಪಕ್ಷಗಳೊಂದಿಗೆ ನಿಮ್ಮ ಮಾಹಿತಿಯನ್ನು (ವೈಯಕ್ತಿಕ ಮಾಹಿತಿಯನ್ನೂ ಒಳಗೊಂಡಂತೆ) ನಾವು ಶೇರ್ ಮಾಡಿಕೊಳ್ಳಬಹುದು:

  • ವ್ಯವಹಾರದ ಪಾಲುದಾರರು, ಪೂರೈಕೆದಾರರು ಮತ್ತು ಉಪ-ಗುತ್ತಿಗೆದಾರರು ("ಸಹಯೋಗಿಗಳು"). ಸೇವೆಯನ್ನು ಮತ್ತು ನಿಮ್ಮೊಂದಿಗೆ ನಾವು ಮಾಡಿಕೊಂಡ ಯಾವುದೇ ಕರಾರನ್ನು ನಡೆಸುವುದಕ್ಕಾಗಿ ಸಹಯೋಗಿಗಳ ತಮ್ಮದೇ ಆದ ಸೇವೆಗಳನ್ನು ಒದಗಿಸಲು, ತಿಳಿದುಕೊಳ್ಳಲು ಮತ್ತು ಸುಧಾರಿಸಲು ನೆರವಾಗಲು ಈ ಮಾಹಿತಿಯನ್ನು ಸಹಯೋಗಿಗಳು ಬಳಸಬಹುದು.
  • ನಿಮಗೆ ಮತ್ತು ಇತರರಿಗೆ ಸಂಬಂಧಿತ ಜಾಹೀರಾತುಗಳನ್ನು ಆಯ್ಕೆ ಮಾಡಿ ಸೇವೆ ನೀಡಲು ದತ್ತಾಂಶದ ಅವಶ್ಯಕತೆ ಇರುವ ಜಾಹೀರಾತುದಾರರು ಮತ್ತು ಜಾಹೀರಾತು ನೆಟ್‌ವರ್ಕ್‌ಗಳು. ಗುರುತಿಸಬಹುದಾದ ವ್ಯಕ್ತಿಗಳ ಬಗೆಗಿನ ಮಾಹಿತಿಯನ್ನು ನಮ್ಮ ಜಾಹೀರಾತುದಾರರಿಗೆ ನಾವು ಬಹಿರಂಗಪಡಿಸುವುದಿಲ್ಲ, ಆದರೆ ನಮ್ಮ ಬಳಕೆದಾರರ ಬಗ್ಗೆ ಒಗ್ಗೂಡಿಸಿದ ಮಾಹಿತಿಯನ್ನು ಅವರಿಗೆ ನಾವು ಒದಗಿಸಬಹುದು (ಉದಾಹರಣೆಗೆ, ಒಂದು ನಿರ್ದಿಷ್ಟ ವಯೋಮಾನದಲ್ಲಿರುವ ಮಹಿಳೆಯರ ಯಾವುದೇ ಒಂದು ಸಂಖ್ಯೆಯು ಒಂದು ನಿರ್ದಿಷ್ಟ ದಿನದಂದು ಅವರ ಜಾಹೀರಾತನ್ನು ಕ್ಲಿಕ್ ಮಾಡಿದೆ ಎಂದು ಅವರಿಗೆ ನಾವು ತಿಳಿಸಬಹುದು). ತಾವು ಉದ್ದೇಶಿಸ ಬಯಸುವ ಪ್ರೇಕ್ಷಕರ ವಿಧವನ್ನು ತಲುಪಲು ಜಾಹೀರಾತುದಾರರಿಗೆ ನೆರವಾಗಲೂ ಸಹ ಇಂಥ ಒಗ್ಗೂಡಿಸಿದ ಮಾಹಿತಿಯನ್ನು ನಾವು ಬಳಸಬಹುದು.
  • ಯಾವುದೇ ಕಾನೂನುಬದ್ಧ ಬಾಧ್ಯತೆಯನ್ನು ಅಥವಾ ಯಾವುದೇ ಸರ್ಕಾರಿ ಕೋರಿಕೆಯನ್ನು ಅನುಸರಣೆ ಮಾಡುವುದಕ್ಕಾಗಿ; ಅಥವಾ ಕಂಪನಿಯ ಹಕ್ಕುಗಳನ್ನು ಸಂರಕ್ಷಿಸಲು ಅಥವಾ ಕಂಪನಿಯ ಸ್ವತ್ತು ಅಥವಾ ಸುರಕ್ಷತೆ, ನಮ್ಮ ಗ್ರಾಹಕರು, ಅಥವಾ ಸಾರ್ವಜನಿಕರಿಗೆ ಯಾವುದೇ ಅಪಾಯವನ್ನು ತಡೆಯಲು; ಅಥವಾ ಸಾರ್ವಜನಿಕ ಸುರಕ್ಷತೆ, ವಂಚನೆ, ಭದ್ರತೆ ಅಥವಾ ತಾಂತ್ರಿಕ ಸಮಸ್ಯೆಗಳನ್ನು ಪತ್ತೆ ಹಚ್ಚಲು, ತಡೆಯಲು ಅಥವಾ ಅನ್ಯಥಾ ಉದ್ದೇಶಿಸಲು ನಿಮ್ಮ ವೈಯಕ್ತಿಕ ದತ್ತಾಂಶ ಅಥವಾ ಮಾಹಿತಿಯನ್ನು ಹಂಚಿಕೊಳ್ಳುವುದು ಸಮಂಜಸವಾಗಿ ಅವಶ್ಯಕವಾಗಿದೆ ಎಂಬ ನಂಬಿಕೆ ವಿಶ್ವಾಸವನ್ನು ನಾವು ಹೊಂದಿದ್ದಲ್ಲಿ, ಸರ್ಕಾರಿ ಸಂಸ್ಥೆಗಳು ಅಥವಾ ಕಾನೂನು ಜಾರಿ ಸಂಸ್ಥೆಗಳು

ಈ ಕೆಳಗಿನ ಸನ್ನಿವೇಶಗಳಲ್ಲಿ ಆಯ್ದ ತೃತೀಯ ಪಕ್ಷಗಳಿಗೂ ಸಹ ನಿಮ್ಮ ಮಾಹಿತಿಯನ್ನು (ವೈಯಕ್ತಿಕ ಮಾಹಿತಿಯನ್ನೂ ಒಳಗೊಂಡು) ನಾವು ಬಹಿರಂಗಪಡಿಸಬಹುದು:

  • ಕಂಪನಿ ಅಥವಾ ಸಮರ್ಥನೀಯವಾಗಿ ಅದರ ಎಲ್ಲ ಸ್ವತ್ತುಗಳು ತೃತೀಯ ಪಕ್ಷವೊಂದರಿಂದ ಸ್ವಾಧೀನಪಡಿಸಿಕೊಳ್ಳಲ್ಪಟ್ಟಲ್ಲಿ, ತನ್ನ ಗ್ರಾಹಕರ ಬಗ್ಗೆ ಅದರಿಂದ ಹಿಡಿದುಕೊಳ್ಳಲ್ಪಟ್ಟ ವೈಯಕ್ತಿಕ ಮಾಹಿತಿಯು ವರ್ಗಾವಣೆಗೊಂಡ ಸ್ವತ್ತುಗಳಲ್ಲಿ ಒಂದಾಗಿರುತ್ತದೆ. ನಿಮ್ಮ ಮಾಹಿತಿಯು ವರ್ಗಾಯಿಸಲ್ಪಡುವಂಥ ಅಥವಾ ಬೇರೆಯದ್ದೇ ಆದ ಪ್ರೈವಸಿ ಪಾಲಿಸಿಗೆ ಒಳಪಡುವಂಥ ವಿಲೀನ, ಸ್ವಾಧೀನತೆ, ದಿವಾಳಿತನ, ಮರುಆಯೋಜನೆ ಅಥವಾ ಸ್ವತ್ತುಗಳ ಮಾರಾಟದಲ್ಲಿ ನಾವು ತೊಡಗಿಕೊಂಡಿದ್ದಲ್ಲಿ, ವರ್ಗಾವಣೆಗೂ ಮೊದಲು ನಿಮ್ಮ ಖಾತೆಯನ್ನು ಅಳಿಸಿ ಹಾಕುವ ಮೂಲಕ ಇಂಥ ಯಾವುದೇ ಹೊಸ ಪಾಲಿಸಿಯಿಂದ ಹೊರನಡೆಯುವುದನ್ನು ನೀವು ಆಯ್ಕೆ ಮಾಡಲು ಅನುವಾಗುವಂತೆ ಅದನ್ನು ಮುಂಚಿತವಾಗಿಯೇ ನಿಮಗೆ ಸೂಚಿತಗೊಳಿಸುತ್ತೇವೆ.
  • ನಮ್ಮ ಷರತ್ತುಗಳು ಮತ್ತು/ಅಥವಾ ಇತರ ಯಾವುದೇ ಒಪ್ಪಂದಗಳನ್ನು ಜಾರಿಗೊಳಿಸುವುದಕ್ಕಾಗಿ ಅಥವಾ ಅನ್ವಯಿಸುವುದಕ್ಕಾಗಿ.

ಸೆಕ್ಯುರಿಟಿ ಪ್ರ್ಯಾಕ್ಟೀಸ್‌ಗಳು (ಭದ್ರತಾ ಆಚರಣೆಗಳು)

ನಮ್ಮಿಂದ ಸಂಗ್ರಹಿಸಲಾದ ಮಾಹಿತಿಯ ಭದ್ರತೆಗಾಗಿ ಸೂಕ್ತ ತಾಂತ್ರಿಕ ಮತ್ತು ಭದ್ರತಾ ಕ್ರಮಗಳನ್ನು ನಾವು ಹೊಂದಿದ್ದೇವೆ. ಪ್ಲ್ಯಾಟ್‌ಫಾರ್ಮ್‌ ಅನ್ನು ಆ್ಯಕ್ಸೆಸ್ ಮಾಡಲು ನಿಮ್ಮನ್ನು ಸಶಕ್ತಗೊಳಿಸುವ ಯೂಜರ್‌ನೇಮ್ ಮತ್ತು ಪಾಸ್‌ವರ್ಡ್ ಅನ್ನು ನಾವು ನಿಮಗೆ ನೀಡಿರುವಲ್ಲಿ (ಅಥವಾ ನೀವು ಆಯ್ಕೆ ಮಾಡಿರುವಲ್ಲಿ), ಈ ವಿವರಗಳನ್ನು ಗೌಪ್ಯವಾಗಿ ಇರಿಸಲು ನೀವು ಜವಾಬ್ದಾರರಾಗಿರುತ್ತೀರಿ. ನಿಮ್ಮ ಪಾಸ್‌ವರ್ಡ್ ಅನ್ನು ಯಾರೊಂದಿಗೂ ಶೇರ್ ಮಾಡಿಕೊಳ್ಳಬಾರದು ಎಂದು ನಿಮ್ಮನ್ನು ನಾವು ಕೇಳುತ್ತೇವೆ.

ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಎಲ್ಲಿ ಸ್ಟೋರ್ ಮಾಡುತ್ತೇವೆ

ನಿಮ್ಮ ದತ್ತಾಂಶವನ್ನು ಅಮೇಝಾನ್ ವೆಬ್ ಸರ್ವೀಸಸ್‌ ಇಂಕ್. (410, ಟೆರಿ, ಅವೆನ್ಯೂ, ನಾರ್ಥ್ ಸಿಯಾಟಲ್, ವಾಶಿಂಗ್ಟನ್ 98109, ಯುಎಸ್ಎ, ಇಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ) ನಿಂದ ಒದಗಿಸಲಾದ ಅಮೇಝಾನ್ ವೆಬ್ ಸರ್ವೀಸಸ್‌ ಕ್ಲೌಡ್ ಪ್ಲ್ಯಾಟ್‌ಫಾರ್ಮ್‌ನಲ್ಲಿ ಮತ್ತು ಗೂಗಲ್ ಎಲ್ಎಲ್‌ಸಿ (1101, ಎಸ್. ಫ್ಲಾವರ್ ಸ್ಟ್ರೀಟ್, ಬರ್‌ಬ್ಯಾಂಕ್, ಕ್ಯಾಲಿಫೋರ್ನಿಯಾ 91502, ಯುಎಸ್ಎ, ಇಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ) ಯಿಂದ ಒದಗಿಸಲಾದ ಗೂಗಲ್ ಕ್ಲೌಡ್ ಪ್ಲ್ಯಾಟ್‌ಫಾರ್ಮ್‌ನಲ್ಲಿಯೂ ಸಹ, ಭಾರತ ಮತ್ತು ವಿದೇಶಗಳಲ್ಲಿ ಸ್ಥಿತವಾಗಿರುವ ಅವರ ಸರ್ವರ್‌ಗಳಲ್ಲಿ ನಾವು ಸ್ಟೋರ್ ಮಾಡುತ್ತೇವೆ. ಮಾಹಿತಿಯ ನಷ್ಟ, ದುರ್ಬಳಕೆ ಹಾಗೂ ಮಾರ್ಪಡಿಸುವಿಕೆಯಿಂದ ರಕ್ಷಣೆ ಒದಗಿಸಲು ಭದ್ರತಾ ಕ್ರಮಗಳನ್ನು ಅಮೇಝಾನ್ ವೆಬ್ ಸರ್ವೀಸಸ್‌ ಹಾಗೂ ಗೂಗಲ್ ಕ್ಲೌಡ್ ಪ್ಲ್ಯಾಟ್‌ಫಾರ್ಮ್‌, ಎರಡೂ ಸಂಸ್ಥೆಗಳು ಜಾರಿಗೊಳಿಸುತ್ತವೆ, ಅವುಗಳ ವಿವರಗಳು https://aws.amazon.com/ ಮತ್ತು https://cloud.google.com ನಲ್ಲಿ ಲಭ್ಯವಿವೆ. ಅಮೇಝಾನ್ ವೆಬ್ ಸರ್ವೀಸಸ್ ಹಾಗೂ ಗೂಗಲ್ ಕ್ಲೌಡ್ ಪ್ಲ್ಯಾಟ್‌ಫಾರ್ಮ್‌‌ಗಳಿಂದ ಅಳವಡಿಸಿಕೊಳ್ಳಲಾದ ಪ್ರೈವಸಿ ಪಾಲಿಸಿಗಳು https://aws.amazon.com/privacy/?nc1=f_prಮತ್ತು https://policies.google.com/privacy ಇಲ್ಲಿ ಲಭ್ಯವಿವೆ.

ಈ ಪಾಲಿಸಿಗೆ ಬದಲಾವಣೆಗಳು

ಈ ಪ್ರೈವಸಿ ಪಾಲಿಸಿಯನ್ನು ಕಂಪನಿಯು ಆಗಾಗ್ಗೆ ಅಪ್‌ಡೇಟ್ ಮಾಡಬಹುದು. ಈ ಪ್ರೈವಸಿ ಪಾಲಿಸಿಗೆ ಮಾಡಿದ ಬದಲಾವಣೆಗಳ ಬಗ್ಗೆ ನೀವು ತಿಳಿದುಕೊಂಡಿರುವುದು ಪ್ರಮುಖವಾಗುವಂಥ ಬದಲಾವಣೆಗಳನ್ನು ನಾವು ಮಾಡಿದಾಗಲೆಲ್ಲ, ಅಪ್‌ಡೇಟ್ ಮಾಡಿದ ಪಾಲಿಸಿಯನ್ನು ಈ ಲಿಂಕ್‌ನಲ್ಲಿ ನಾವು ಪೋಸ್ಟ್ ಮಾಡುತ್ತೇವೆ. ಈ ಪ್ರೈವಸಿ ಪಾಲಿಸಿಗೆ ಮಾಡಲಾದ ಯಾವುದೇ ಬದಲಾವಣೆಗಳ ಬಗ್ಗೆ ತಿಳಿದುಕೊಂಡಿರುವ ಸಲುವಾಗಿ ಈ ಪುಟವನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಿರುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ.

ನಿರಾಕರಣೆ

ದುರದೃಷ್ಟಾವಶಾತ್, ಅಂತರ್ಜಾಲದ ಮೂಲಕ ಮಾಹಿತಿಯ ಪ್ರಸರಣವು ಸಂಪೂರ್ಣವಾಗಿ ಸುಭದ್ರವಾಗಿರುವುದಿಲ್ಲ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂರಕ್ಷಿಸಲು ನಮ್ಮ ಅತ್ಯುತ್ತಮ ಪ್ರಯತ್ನಗಳನ್ನು ನಾವು ಮಾಡುತ್ತೇವೆಯಾದರೂ, ಪ್ಲ್ಯಾಟ್‌ಫಾರ್ಮ್‌ಗೆ ಪ್ರಸರಣ ಮಾಡಲಾದ ನಿಮ್ಮ ದತ್ತಾಂಶದ ಖಾತರಿಯನ್ನು ನಾವು ನೀಡಲಾಗುವುದಿಲ್ಲ; ಯಾವುದೇ ಪ್ರಸರಣವನ್ನು ನಿಮ್ಮ ಜವಾಬ್ದಾರಿಯಲ್ಲಿಯೇ ಮಾಡಬೇಕಾಗುತ್ತದೆ. ನಿಮ್ಮ ಮಾಹಿತಿಯನ್ನು ನಾವು ಸ್ವೀಕರಿಸಿದ ನಂತರ, ಅನಧೀಕೃತ ಪ್ರವೇಶಾವಕಾಶವನ್ನು ತಪ್ಪಿಸಲು ಪ್ರಯತ್ನಿಸುವುದಕ್ಕಾಗಿ ಕಟ್ಟುನಿಟ್ಟಿನ ಕಾರ್ಯವಿಧಾನಗಳು ಮತ್ತು ಭದ್ರತಾ ವೈಶಿಷ್ಟ್ಯತೆಗಳನ್ನು ನಾವು ಬಳಸುತ್ತೇವೆ.

ನಿಮ್ಮ ಹಕ್ಕುಗಳು

ನಿಮ್ಮ ಯೂಜರ್ ಅಕೌಂಟ್ / ಪ್ರೊಫೈಲ್‌ನಿಂದ ವಿಷಯವನ್ನು ತೆಗೆದುಹಾಕಲು ಅಥವಾ ಅಳಿಸಲು ಮತ್ತು ನಿಮ್ಮ ಯೂಜರ್ ಅಕೌಂಟ್ / ಪ್ರೊಫೈಲ್‌ ಅನ್ನು ಅಳಿಸಲು ನೀವು ಮುಕ್ತರಾಗಿರುತ್ತೀರಿ. ಆದಾಗ್ಯೂ, ನಮ್ಮ ಪ್ಲ್ಯಾಟ್‌ಫಾರ್ಮ್‌‌ನಲ್ಲಿ ನಿಮ್ಮ ಚಟುವಟಿಕೆಗಳು ಮತ್ತು ಖಾತೆಯ ಇತಿಹಾಸವು ನಮ್ಮ ಬಳಿ ಲಭ್ಯವಾಗಿರುವಂತೆ ಉಳಿಯುತ್ತದೆ.

ಲಾಗಿನ್ ಆಗಿ ನಿಮ್ಮ ಪ್ರೊಫೈಲ್ ಪುಟಕ್ಕೆ ಭೇಟಿ ನೀಡುವ ಮೂಲಕ ನಿಮ್ಮ ಅಕೌಂಟ್‌ನಿಂದ ವೈಯಕ್ತಿಕ ಮಾಹಿತಿಯನ್ನು ಯಾವುದೇ ಸಮಯದಲ್ಲಿ ನೀವು ಸರಿಪಡಿಸಬಹುದು, ತಿದ್ದುಪಡಿ ಮಾಡಬಹುದು, ಸೇರಿಸಬಹುದು ಅಥವಾ ಅಳಿಸಬಹುದು. ಈ ಮೇಲೆ ಸೂಚಿಸಿದಂತೆ, ಮೆಸೇಜಿನಲ್ಲಿರುವ ನಿರ್ದೇಶನಗಳನ್ನು ಅನುಸರಿಸುವ ಮೂಲಕ ನಮ್ಮಿಂದ ಕಳುಹಿಸಲಾಗುವ ಅನಪೇಕ್ಷಿತ ಇ-ಮೇಲ್ ಸಂವಹನಗಳು ಬೇಡವೆಂಬ ಆಯ್ಕೆಯನ್ನು ನೀವು ಮಾಡಿಕೊಳ್ಳಬಹುದು. ಆದಾಗ್ಯೂ, ನಿಮ್ಮ ಅಕೌಂಟ್ ಅಳಿಸಿಹಾಕಲ್ಪಡುವವರೆಗೆ ಎಲ್ಲ ಸಿಸ್ಟಂ ಇ-ಮೇಲ್‌ಗಳನ್ನು ನೀವು ಸ್ವೀಕರಿಸುವುದು ಮುಂದುವರೆಯುತ್ತದೆ.

ಮಾಹಿತಿ ತಂತ್ರಜ್ಞಾನ (ಸಮಂಜಸ ಭದ್ರತಾ ಆಚರಣೆಗಳು ಮತ್ತು ಕಾರ್ಯವಿಧಾನಗಳು ಹಾಗೂ ಸೂಕ್ಷ್ಮ ವೈಯಕ್ತಿಕ ದತ್ತಾಂಶ ಅಥವಾ ಮಾಹಿತಿ) ನಿಯಮಗಳು, 2011 ("ನಿಯಮಗಳು"), ಕಲಂ 5(6) ಅಡಿ ನಿಮ್ಮ ಬಗ್ಗೆ ನಾವು ಸಂಗ್ರಹಿಸುವ ಮಾಹಿತಿಯನ್ನು ಯಾವುದೇ ಸಮಯದಲ್ಲಿ ಪುನರಾವಲೋಕಿಸುವಂತೆ, ಸರಿಪಡಿಸುವಂತೆ ಮತ್ತು ತಿದ್ದುಪಡಿ ಮಾಡುವಂತೆ ನಮ್ಮನ್ನು ಕೇಳುವ ಹಕ್ಕನ್ನು ನೀವು ಹೊಂದಿರುತ್ತೀರಿ. ಈ ನಿಯಮಗಳ ಕಲಂ 5(7) ಅಡಿ, ಮುಂದೆ ಹೋಗುತ್ತಾ ನಿಮ್ಮ ಮಾಹಿತಿ ಸಂಗ್ರಹಣೆಗಾಗಿನ ನಿಮ್ಮ ಸಮ್ಮತಿಯನ್ನು ಹಿಂಪಡೆಯುವ ಹಕ್ಕನ್ನೂ ಸಹ ನೀವು ಹೊಂದಿರುತ್ತೀರಿ. ಆದಾಗ್ಯೂ, ನಿಮ್ಮ ಸಮ್ಮತಿಯನ್ನು ಹಿಂಪಡೆಯುವಿಕೆಯು ಈ ಪ್ಲ್ಯಾಟ್‌ಫಾರ್ಮ್‌ ಅನ್ನು ನೀವು ಬಳಸುವುದರ ಮೇಲೆ ನಕಾರಾತ್ಮಕ ಪರಿಣಾಮ ಹೊಂದಿರಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ನಿದರ್ಶನಕ್ಕಾಗಿ, ನಿಮ್ಮ ಮೊಬೈಲ್ ಡಿವೈಸ್‌ನಿಂದ ಪಿಕ್ಚರ್‌ಗಳನ್ನು ಕ್ಲಿಕ್ ಮಾಡಿ, ಅವುಗಳನ್ನು ನಮ್ಮ ಪ್ಲ್ಯಾಟ್‌ಫಾರ್ಮ್‌‌ನಲ್ಲಿ ಪೋಸ್ಟ್ ಮಾಡಲು ಅನುವಾಗುವಂತೆ ನಿಮ್ಮ ಮೊಬೈಲ್ ಡಿವೈಸಿನ ಮೀಡಿಯಾ ಫೋಲ್ಡರ್‌ ಹಾಗೂ ಕ್ಯಾಮರಾಗಳಿಗೆ ನಮಗೆ ಪ್ರವೇಶಾವಕಾಶ ಬೇಕಿರುತ್ತದೆ, ಇಂಥ ಪ್ರವೇಶಾವಕಾಶವನ್ನು ನೀವು ನಮಗೆ ನೀಡದಿದ್ದಲ್ಲಿ, ಈ ಫಂಕ್ಷನಾಲಿಟಿಯು ನಿಮಗೆ ಲಭ್ಯವಾಗುವುದಿಲ್ಲ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಮಾರ್ಕೆಟಿಂಗ್ ಉದ್ದೇಶಗಳಿಗಾಗಿ ಸಂಸ್ಕರಿಸದಿರುವಂತೆಯೂ ಸಹ ನೀವು ನಮ್ಮನ್ನು ಕೇಳಬಹುದು. ಈ ಮುಂದಿನ ಇ-ಮೇಲ್ ವಿಳಾಸದ ಮುಖಾಂತರ ನಮ್ಮನ್ನು ಸಂಪರ್ಕಿಸುವ ಮೂಲಕ ಈ ಯಾವುದೇ ಹಕ್ಕುಗಳನ್ನು ಯಾವುದೇ ಸಮಯದಲ್ಲಿ ನೀವು ಚಲಾವಣೆ ಮಾಡಬಹುದು: grievance@sharechat.co "Shagun Baldwa +918025533388". ಆದಾಗ್ಯೂ, ನಿಮ್ಮ ಯಾವುದೇ ಕೋರಿಕೆಗಳನ್ನು ಅನುಸರಣೆ ಮಾಡಲು 30 (ಮೂವತ್ತು) ದಿನಗಳ ಸಮಂಜಸ ಅವಧಿಯು ನಮಗೆ ಬೇಕಾಗುತ್ತದೆ.ಹೆಚ್ಚುವರಿಯಾಗಿ, ಪ್ಲಾಟ್‌ಫಾರ್ಮ್‌ನಿಂದ ನಿಮ್ಮ ಖಾತೆಯನ್ನು ಅಳಿಸಲು ಮತ್ತು ಬಳಕೆದಾರರ ಡೇಟಾವನ್ನು ತೆಗೆದುಹಾಕಲು, ದಯವಿಟ್ಟು ನಿಮ್ಮ ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು 'ಖಾತೆ ಅಳಿಸು' ಆಯ್ಕೆಯನ್ನು ಕ್ಲಿಕ್ ಮಾಡಿ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಖಾತೆ ಅಳಿಸುವಿಕೆಯ ಕುರಿತು FAQ ಗಳನ್ನು ನೋಡಿ.

ದತ್ತಾಂಶ ಧಾರಣೆ (ಉಳಿಸಿಕೊಳ್ಳುವಿಕೆ)

ನಿಮ್ಮ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು (ಈ ಪರಿಚ್ಛೇದದಲ್ಲಿ ಕೆಳಗೆ ವಿವರಿಸಿದಂತೆ), ಆ ಮಾಹಿತಿಯು ಕಾನೂನುಬದ್ಧವಾಗಿ ಬಳಸಲ್ಪಡುವ ಉದ್ದೇಶಗಳಿಗೆ ಬೇಕಾಗಿರುವುದಕ್ಕಿಂತ ಹೆಚ್ಚು ಕಾಲ ನಾವು ಉಳಿಸಿಕೊಳ್ಳುವುದಿಲ್ಲ. ಇತರ ಯಾವುದೇ ವಿಷಯಕ್ಕೆ, ಅಳಿಸುವಿಕೆಯ ನಿಮ್ಮ ಕೋರಿಕೆಯನ್ನು ನಾವು ಪರಿಗಣಿಸುತ್ತೇವೆಯಾದರೂ, ಯಾವುದೇ ಸಾರ್ವಜನಿಕ ವಿಷಯದ ಪ್ರತಿಗಳು ನಮ್ಮ ಪ್ಲ್ಯಾಟ್‌ಫಾರ್ಮ್‌ನ ಕ್ಯಾಶ್ ಹಾಗೂ ಆರ್ಕೈವ್ ಪುಟಗಳನ್ನೂ ಒಳಗೊಂಡು ನಮ್ಮ ಸಿಸ್ಟಂಗಳಲ್ಲಿ ಅನಿರ್ದಿಷ್ಟಾವಧಿಗೆ ಉಳಿದುಕೊಂಡು ಬಿಡುವ ಅಥವಾ ಆ ಮಾಹಿತಿಯನ್ನು ಇತರ ಬಳಕೆದಾರರು ನಕಲಿಸಿಕೊಂಡಿರಬಹುದಾದ ಅಥವಾ ಉಳಿಸಿಕೊಂಡಿರಬಹುದಾದ ಬಲವಾದ ಸಾಧ್ಯತೆ ಇರುತ್ತದೆ. ಹೆಚ್ಚುವರಿಯಾಗಿ, ಅಂತರ್ಜಾಲದ ಸ್ವರೂಪದಿಂದಾಗಿ, ನಿಮ್ಮ ಖಾತೆಯಿಂದ ನೀವು ತೆಗೆದುಹಾಕಿರಬಹುದಾದ ಅಥವಾ ಅಳಿಸಿಹಾಕಿರಬಹುದಾದ ವಿಷಯವನ್ನೂ ಒಳಗೊಂಡಂತೆ ನಿಮ್ಮ ವಿಷಯದ ಪ್ರತಿಗಳು, ಅಂತರ್ಜಾಲದಲ್ಲಿ ಇನ್ನೆಲ್ಲಿಯೋ ಇರಬಹುದು ಹಾಗೂ ಅನಿರ್ದಿಷ್ಟಾವಧಿಗೆ ಉಳಿಸಿಕೊಳ್ಳಲ್ಪಡಬಹುದು. "ಸೂಕ್ಷ್ಮ ವೈಯಕ್ತಿಕ ಮಾಹಿತಿ" ಎಂದರೆ ಪಾಸ್‌ವರ್ಡ್‌ಗಳು ಮತ್ತು ನಿಯಮಗಳ ಕಲಂ 3 ರಡಿ ಸೂಕ್ಷ್ಮ ಎಂಬುದಾಗಿ ವರ್ಗೀಕರಿಸಲಾದ ಇತರ ಯಾವುದೇ ಮಾಹಿತಿ.

ಥರ್ಡ್ ಪಾರ್ಟಿ ಲಿಂಕ್‌ಗಳು

ಈ ಪ್ಲ್ಯಾಟ್‌ಫಾರ್ಮ್‌, ಕಾಲಕಾಲಕ್ಕೆ, ನಮ್ಮ ಪಾಲುದಾರ ನೆಟ್‌ವರ್ಕ್‌ಗಳು, ಜಾಹೀರಾತುದಾರರು, ಸಹಯೋಗಿಗಳ ವೆಬ್‌ಸೈಟ್‌ಗಳಿಗೆ ಮತ್ತು ವೆಬ್‌ಸೈಟ್‌ಗಳಿಂದ ಮತ್ತು/ಅಥವಾ ಇತರ ಯಾವುದೇ ವೆಬ್‌ಸೈಟ್‌ಗಳು ಅಥವಾ ಮೊಬೈಲ್ ಅಪ್ಲಿಕೇಶನ್‌ಗಳ ಲಿಂಕ್‌ಗಳನ್ನು ಒಳಗೊಳ್ಳಬಹುದು. ಈ ಯಾವುದೇ ವೆಬ್‌ಸೈಟ್‌ಗಳ ಲಿಂಕ್‌ವೊಂದನ್ನು ನೀವು ಅನುಸರಿಸಿದಲ್ಲಿ, ಈ ವೆಬ್‌ಸೈಟ್‌ಗಳು ತಮ್ಮದೇ ಆದ ಪ್ರೈವಸಿ ಪಾಲಿಸಿಯನ್ನು ಹೊಂದಿರುತ್ತವೆ ಎಂಬುದನ್ನು ಮತ್ತು ಈ ಪಾಲಿಸಿಗಳಿಗೆ ಯಾವುದೇ ಜವಾಬ್ದಾರಿಯನ್ನು ಅಥವಾ ಬಾಧ್ಯತೆಯನ್ನು ನಾವು ತೆಗೆದುಕೊಳ್ಳುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್‌ಸೈಟ್‌ಗಳಿಗೆ ಅಥವಾ ಮೊಬೈಲ್ ಅಪ್ಲಿಕೇಶನ್‌ಗಳಿಗೆ ಯಾವುದೇ ವೈಯಕ್ತಿಕ ದತ್ತಾಂಶವನ್ನು ನೀವು ಸಲ್ಲಿಸುವ ಮೊದಲು ಈ ಪಾಲಿಸಿಗಳನ್ನು ದಯವಿಟ್ಟು ಪರಿಶೀಲಿಸಿ.

ಥರ್ಡ್-ಪಾರ್ಟಿ ಎಂಬೆಡ್‌ಗಳು

ಥರ್ಡ್-ಪಾರ್ಟಿ ಎಂಬೆಡ್‌ಗಳು ಎಂದರೇನು?

ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿ ಪ್ರದರ್ಶಿತವಾದ ನೀವು ನೋಡುವ ಕೆಲವು ವಿಷಯಗಳು ನಮ್ಮ ಪ್ಲ್ಯಾಟ್‌ಫಾರ್ಮ್‌ನಿಂದ ಹೋಸ್ಟ್ ಮಾಡಲ್ಪಟ್ಟಿರುವುದಿಲ್ಲ. ಈ "ಎಂಬೆಡ್‌ಗಳು" ಥರ್ಡ್-ಪಾರ್ಟಿಯೊಂದರಿಂದ ಹೋಸ್ಟ್ ಮಾಡಲ್ಪಟ್ಟು ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿ ಎಂಬೆಡ್‌ ಆಗಿರುತ್ತವೆ. ಉದಾಹರಣೆಗಾಗಿ: ನಮ್ಮ ಪ್ಲ್ಯಾಟ್‌ಫಾರ್ಮ್‌ನ ಪೋಸ್ಟ್‌ವೊಂದರಲ್ಲಿ ಕಾಣಿಸಿಕೊಳ್ಳುವ ಯೂಟ್ಯೂಬ್ ಅಥವಾ ವಿಮಿಯೋ ವಿಡಿಯೋಗಳು, ಇಮ್‌ಗುರ್ ಅಥವಾ ಜೈಫಿ ಜಿಐಎಫ್‌ಗಳು, ಸೌಂಡ್‌ಕ್ಲೌಡ್ ಆಡಿಯೋ ಫೈಲ್‌ಗಳು, ಟ್ವಿಟರ್ ಟ್ವೀಟ್‌ಗಳು, ಅಥವಾ ಸ್ಕ್ರಿಬ್ಡ್ ಡಾಕ್ಯುಮೆಂಟ್‌ಗಳು. ಈ ಫೈಲ್‌ಗಳು, ಆ ಸೈಟಿಗೆ ನೀವು ನೇರವಾಗಿ ಭೇಟಿ ಮಾಡಿದಂತೆಯೇ, ಹೋಸ್ಟ್ ಮಾಡಿದ ಸೈಟಿಗೆ ಡೇಟಾವನ್ನು ಕಳುಹಿಸುತ್ತವೆ (ಉದಾಹರಣೆಗಾಗಿ, ಅದರಲ್ಲಿ ಯೂಟ್ಯೂಬ್ ವಿಡಿಯೋ ಒಂದು ಎಂಬೆಡ್ ಆಗಿರುವ ಪ್ಲ್ಯಾಟ್‌ಫಾರ್ಮ್‌ ಪೋಸ್ಟ್ ಪೇಜನ್ನು ನೀವು ಲೋಡ್ ಮಾಡಿದಾಗ, ನಿಮ್ಮ ಚಟುವಟಿಕೆಯ ಬಗ್ಗೆ ಯೂಟ್ಯೂಬ್ ಡೇಟಾ ಸ್ವೀಕರಿಸುತ್ತದೆ).

ಥರ್ಡ್ ಪಾರ್ಟಿ ಎಂಬೆಡ್‌ಗಳ ಬಗ್ಗೆ ಖಾಸಗಿತನದ ಕಳಕಳಿಗಳು

ಥರ್ಡ್ ಪಾರ್ಟಿಗಳು ಯಾವ ಡೇಟಾ ಸಂಗ್ರಹಿಸುತ್ತವೆ ಅಥವಾ ಅದನ್ನು ಏನು ಮಾಡುತ್ತವೆ ಎಂಬುದನ್ನು ಈ ಪ್ಲ್ಯಾಟ್‌ಫಾರ್ಮ್‌ ನಿಯಂತ್ರಿಸುವುದಿಲ್ಲ. ಹಾಗಾಗಿ, ಈ ಪ್ಲ್ಯಾಟ್‌ಫಾರ್ಮ್‌ನಲ್ಲಿನ ಥರ್ಡ್ ಪಾರ್ಟಿ ಎಂಬೆಡ್‌ಗಳನ್ನು ಈ ಪ್ರೈವಸಿ ಪಾಲಿಸಿಯ ವ್ಯಾಪ್ತಿಯೊಳಗೆ ತರಲಾಗಿಲ್ಲ. ಅವುಗಳನ್ನು ಥರ್ಡ್ ಪಾರ್ಟಿ ಸರ್ವೀಸ್‌ನ ಪ್ರೈವಸಿ ಪಾಲಿಸಿಯ ವ್ಯಾಪ್ತಿಯಲ್ಲಿ ತರಲಾಗಿದೆ. ಅಂತಹ ಎಂಬೆಡ್ ಅಥವಾ API ಸೇವೆಗಳನ್ನು ಬಳಸುವ ಮೂಲಕ, ನೀವು ಮೂರನೇ ವ್ಯಕ್ತಿಯ ಸೇವಾ ನಿಯಮಗಳಿಗೆ ಬದ್ಧರಾಗಿರಲು ಒಪ್ಪುತ್ತೀರಿ.

ಥರ್ಡ್-ಪಾರ್ಟಿಯ ಎಂಬೆಡ್‌ಗಳು ಮತ್ತು API ಸೇವೆಗಳ ಬಳಕೆಗೆ ಅನ್ವಯವಾಗುವ ಥರ್ಡ್-ಪಾರ್ಟಿಯ ನೀತಿಗಳ ಪಟ್ಟಿ:

ಪ್ಲಾಟ್‌ಫಾರ್ಮ್‌ನಲ್ಲಿ ಬಳಸುತ್ತಿರುವ ಪ್ರಸ್ತುತ ಥರ್ಡ್-ಪಾರ್ಟಿಯ API ಸೇವೆಗಳ ಸಂಪೂರ್ಣವಲ್ಲದ ಪಟ್ಟಿಯನ್ನು ದಯವಿಟ್ಟು ಕೆಳಗೆ ಹುಡುಕಿ:

  • YouTube API ಸೇವೆಗಳು ಇಲ್ಲಿ ಲಭ್ಯವಿರುವ ನೀತಿಗಳಿಂದ ನಿಯಂತ್ರಿಸಲ್ಪಡುತ್ತವೆ: https://www.youtube.com/t/terms
  • Snap Inc ನ ಸೇವೆಗಳನ್ನು ಸೇವಾ ನಿಯಮಗಳಿಂದ ನಿಯಂತ್ರಿಸಲಾಗುತ್ತದೆ, ಇಲ್ಲಿ ಲಭ್ಯವಿದೆ: https://snap.com/en-US/terms

ನೀತಿಗಳ ಅನ್ವಯಕ್ಕೆ ಸಂಬಂಧಿಸಿದಂತೆ ಯಾವುದೇ ಸಂಘರ್ಷ ಅಥವಾ ಅಸಮಂಜಸತೆಯ ಸಂದರ್ಭದಲ್ಲಿ, ಅಂತಹ ಥರ್ಡ್-ಪಾರ್ಟಿಯ ಸೇವಾ ನಿಯಮಗಳು ಥರ್ಡ್-ಪಾರ್ಟಿಯ ಉತ್ಪನ್ನ/ಸೇವೆಗಳ ಬಳಕೆಯನ್ನು ನಿಯಂತ್ರಿಸುತ್ತದೆ ಮತ್ತು ಇಲ್ಲಿ ಲಭ್ಯವಿರುವ MTPL ಪ್ಲಾಟ್‌ಫಾರ್ಮ್ ನೀತಿಗಳು ಇದರಲ್ಲಿ ಲಭ್ಯವಿರುವ ವಿಷಯವನ್ನು ಮತ್ತು MTPL ಒದಗಿಸಿದ ಸೇವೆಗಳು ನಿಯಂತ್ರಿಸುತ್ತದೆ.

ಥರ್ಡ್ ಪಾರ್ಟಿ ಎಂಬೆಡ್‌ಗಳೊಂದಿಗೆ ವೈಯಕ್ತಿಕ ಮಾಹಿತಿಯನ್ನು ಶೇರ್ ಮಾಡಿಕೊಳ್ಳುವುದು

ಒಂದು ನಮೂನೆಯ ಮೂಲಕ ನಿಮ್ಮ ಇ-ಮೇಲ್ ವಿಳಾಸಗಳಂಥ ವೈಯಕ್ತಿಕ ಮಾಹಿತಿಯನ್ನು ಕೆಲವು ಎಂಬೆಡ್‌ಗಳು ನಿಮ್ಮನ್ನು ಕೇಳಬಹುದು. ಕೆಟ್ಟ ಕ್ರಿಯಾಕಾರಕಗಳನ್ನು ನಮ್ಮ ಪ್ಲ್ಯಾಟ್‌ಫಾರ್ಮ್‌ನಿಂದ ಹೊರಗಿಡಲು ನಮ್ಮ ಎಲ್ಲಾ ಪ್ರಯತ್ನವನ್ನೂ ನಾವು ಮಾಡುತ್ತೇವೆ. ಆದಾಗ್ಯೂ, ಥರ್ಡ್ ಪಾರ್ಟಿಯೊಂದಕ್ಕೆ ಈ ರೀತಿಯಲ್ಲಿ ನಿಮ್ಮ ಮಾಹಿತಿಯನ್ನು ಸಲ್ಲಿಸಲು ನೀವು ಆಯ್ಕೆ ಮಾಡಿಕೊಂಡಲ್ಲಿ, ಅವರು ಅದನ್ನು ಏನು ಮಾಡಬಹುದು ಎಂಬುದು ನಮಗೆ ತಿಳಿದಿರುವುದಿಲ್ಲ. ಈ ಮೇಲೆ ವಿವರಿಸಿದಂತೆ, ಅವರ ಕ್ರಿಯೆಗಳು ಈ ಪ್ರೈವಸಿ ಪಾಲಿಸಿಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಹಾಗಾಗಿ, ನಿಮ್ಮ ಇ-ಮೇಲ್ ವಿಳಾಸ ಅಥವಾ ಇತರ ಯಾವುದೇ ವೈಯಕ್ತಿಕ ಮಾಹಿತಿಗಾಗಿ ನಿಮ್ಮನ್ನು ಕೇಳುವ, ಎಂಬೆಡ್ ಆಗಿರುವ ನಮೂನೆಗಳನ್ನು ಈ ಪ್ಲ್ಯಾಟ್‌ಫಾರ್ಮ್‌ನಲ್ಲಿ ನೀವು ನೋಡಿದಾಗ ದಯವಿಟ್ಟು ಎಚ್ಚರಿಕೆ ವಹಿಸಿ. ನಿಮ್ಮ ಮಾಹಿತಿಯನ್ನು ನೀವು ಯಾರಿಗೆ ಸಲ್ಲಿಸುತ್ತಿದ್ದೀರಿ ಮತ್ತು ಅದನ್ನು ಅವರು ಏನು ಮಾಡಬೇಕೆಂದು ಯೋಜಿಸಿದ್ದಾರೆ ಎಂಬುದರ ಬಗ್ಗೆ ಅವರೇನು ಹೇಳುತ್ತಾರೆ ಎಂಬುದನ್ನು ನೀವು ತಿಳಿದುಕೊಂಡಿರುವುದನ್ನು ಖಚಿತಪಡಿಸಿಕೊಳ್ಳಿ. ಎಂಬೆಡ್ ಆಗಿರುವ ನಮೂನೆಯ ಮೂಲಕ ಯಾವುದೇ ಥರ್ಡ್ ಪಾರ್ಟಿಗೆ ವೈಯಕ್ತಿಕ ಮಾಹಿತಿಯನ್ನು ಸಲ್ಲಿಸಬೇಡಿ ಎಂದು ನಾವು ಸಲಹೆ ನೀಡುತ್ತೇವೆ.

ನಿಮ್ಮದೇ ಆದ ಥರ್ಡ್ ಪಾರ್ಟಿ ಎಂಬೆಡ್ ಅನ್ನು ಸೃಷ್ಟಿಸುವುದು

ಬಳಕೆದಾರರಿಂದ ವೈಯಕ್ತಿಕ ಮಾಹಿತಿಯ ಸಲ್ಲಿಸುವಿಕೆಯನ್ನು ಅನುಮತಿಸುವ ನಮೂನೆಯೊಂದನ್ನು ನೀವು ಎಂಬೆಡ್ ಮಾಡಿದಲ್ಲಿ, ಸಂಗ್ರಹಿಸಿದ ಯಾವುದೇ ಮಾಹಿತಿಯನ್ನು ಹೇಗೆ ಬಳಸುವ ಉದ್ದೇಶವನ್ನು ನೀವು ಹೊಂದಿದ್ದೀರಿ ಎಂಬುದನ್ನು ಸ್ಪಷ್ಟವಾಗಿ ನಮೂದಿಸುವ, ಅನ್ವಯವಾಗುವ ಪ್ರೈವಸಿ ಪಾಲಿಸಿಯ ಎದ್ದು ಕಾಣುವ ಲಿಂಕ್‌ವೊಂದನ್ನು ಎಂಬೆಡ್ ಮಾಡಿದ ನಮೂನೆಯ ಬಳಿ ನೀವು ಒದಗಿಸಬೇಕು. ಹಾಗೆ ಮಾಡಲು ವಿಫಲತೆಯು, ಆ ಪೋಸ್ಟ್ ಅನ್ನು ಕಂಪನಿಯು ನಿಷ್ಕ್ರಿಯಗೊಳಿಸುವುದಕ್ಕೆ ಅಥವಾ ನಿಮ್ಮ ಖಾತೆಯನ್ನು ಸೀಮಿತ ಅಥವಾ ನಿಷ್ಕ್ರಿಯಗೊಳಿಸಲು ಇತರ ಕ್ರಮವನ್ನು ಕೈಗೊಳ್ಳುವುದಕ್ಕೆ ಕಾರಣವಾಗಬಹುದು.

ನಮ್ಮಿಂದ ಮಾಡಲಾಗುವ ಸಂವಹನಗಳು

ಸೇವಾ-ಸಂಬಂಧಿತ ಘೋಷಣೆಗಳನ್ನು ಕಳುಹಿಸುವುದು ಅವಶ್ಯಕವೆಂದು ನಾವು ಪರಿಗಣಿಸಿದಾಗ, ನಾವು, ಕಾಲಕಾಲಕ್ಕೆ, ಹಾಗೆ ಮಾಡಬಹುದು (ನಿರ್ವಹಣೆ, ಅಥವಾ ಭದ್ರತೆ, ಖಾಸಗೀತನಕ್ಕಾಗಿ ಪ್ಲ್ಯಾಟ್‌ಫಾರ್ಮ್‌ ಅನ್ನು ತಾತ್ಕಾಲಿಕವಾಗಿ ನಾವು ಅಮಾನತು ಮಾಡಿದಾಗ, ಅಥವಾ ಆಡಳಿತಾತ್ಮಕ-ಸಂಬಂಧಿ ಸಂವಹನಗಳಂಥವು). ಇವುಗಳನ್ನು ನಾವು ನಿಮಗೆ ಎಸ್ಎಂಎಸ್ ಮುಖಾಂತರ ಕಳುಹಿಸುತ್ತೇವೆ. ಈ ಸೇವಾ-ಸಂಬಂಧಿ ಘೋಷಣೆಗಳಿಂದ ನೀವು ಹೊರಬೀಳುವ ಆಯ್ಕೆಯನ್ನು ಮಾಡಲಿಕ್ಕಿಲ್ಲ, ಇವುಗಳು ಪ್ರೊಮೋಶನ್ ಸ್ವರೂಪದವುಗಳಾಗಿರುವುದಿಲ್ಲ ಹಾಗೂ ಸಂಪೂರ್ಣವಾಗಿ ನಿಮ್ಮ ಖಾತೆಯನ್ನು ರಕ್ಷಿಸಲು ಹಾಗೂ ಪ್ಲ್ಯಾಟ್‌ಫಾರ್ಮ್‌ಗೆ ಮಾಡಲಾದ ಪ್ರಮುಖ ಬದಲಾವಣೆಗಳನ್ನು ನಿಮಗೆ ತಿಳಿಸಲು ಬಳಸಲಾಗುತ್ತದೆ.

ದೂರು ನಿವಾರಣಾ ಅಧಿಕಾರಿ

ದತ್ತಾಂಶ ಸುರಕ್ಷತೆ, ಖಾಸಗಿತನ ಹಾಗೂ ಈ ಪ್ಲ್ಯಾಟ್‌ಫಾರ್ಮ್‌‌‌ನ ಬಳಕೆಗೆ ಸಂಬಂಧಿಸಿದ ಕಳಕಳಿಗಳನ್ನು ಉದ್ದೇಶಿಸಲು ಒಬ್ಬ ದೂರು ನಿವಾರಣಾ ಅಧಿಕಾರಿಯನ್ನು ನಾವು ಹೊಂದಿದ್ದೇವೆ. ನಿಮ್ಮಿಂದ ವರದಿ ಮಾಡಲ್ಪಟ್ಟ ಸಮಸ್ಯೆಗಳನ್ನು ಅವುಗಳನ್ನು ಸ್ವೀಕರಿಸಿದ 15 (ಹದಿನೈದು) ದಿನಗಳೊಳಗಾಗಿ ನಾವು ಪರಿಹರಿಸುತ್ತೇವೆ. ಈ ಕೆಳಗಿನ ಯಾವುದರ ಮೂಲಕವಾದರೂ ದೂರು ನಿವಾರಣಾ ಅಧಿಕಾರಿಯನ್ನು ನೀವು ಸಂಪರ್ಕಿಸಬಹುದು:

ಹೆಸರು: ಮಿಸ್ ಹರ್ಲೀನ್ ಸೇಥಿ
ವಿಳಾಸ: ಮೊಹಲ್ಲಾ ಟೆಕ್ ಪ್ರೈವೆಟ್ ಲಿಮಿಟೆಡ್,
ನಾರ್ತ್ ಟವರ್ ಸ್ಮಾರ್ಟ್‌ವರ್ಕ್ಸ್, ವೈಷ್ಣವಿ ಟೆಕ್ ಪಾರ್ಕ್,
ಸರ್ವೆ ನಂ. 16/1 & ನಂ. 17/2 ಅಂಬಲಿಪುರ ಗ್ರಾಮ, ವರ್ತೂರು ಹೋಬಳಿ,
ಬೆಂಗಳೂರು ನಗರ, ಕರ್ನಾಟಕ - 560103
ಇಮೇಲ್: grievance@sharechat.co
ಗಮನಿಸಿ - ದಯವಿಟ್ಟು ಬಳಕೆದಾರರ ಸಂಬಂಧಿತ ಎಲ್ಲಾ ಕುಂದುಕೊರತೆಗಳನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸಲು ಮತ್ತು ಪರಿಹರಿಸಲು ಮೇಲೆ ತಿಳಿಸಿದ ಇಮೇಲ್ ಐಡಿಗೆ ಸಂಪರ್ಕಿಸಿ.

ನೋಡಲ್ ಸಂಪರ್ಕ ವ್ಯಕ್ತಿ - ಮಿಸ್ ಹರ್ಲೀನ್ ಸೇಥಿ
ಇಮೇಲ್: nodalofficer@sharechat.co
ಗಮನಿಸಿ - ಈ ಇಮೇಲ್ ಕೇವಲ ಪೊಲೀಸ್ ಮತ್ತು ತನಿಖಾ ಸಂಸ್ಥೆಗಳ ಬಳಕೆಗಾಗಿ ಮಾತ್ರ. ಎಲ್ಲಾ ಬಳಕೆದಾರ ಸಂಬಂಧಿತ ಕುಂದುಕೊರತೆಗಳಿಗಾಗಿ, ದಯವಿಟ್ಟು ನಮ್ಮನ್ನು grievance@sharechat.co ನಲ್ಲಿ ಸಂಪರ್ಕಿಸಿ.