Skip to main content

Sharechat Boost Post FAQ

1. ನನ್ನ ಪೋಸ್ಟ್ ಅನ್ನು ಬೂಸ್ಟ್ ಮಾಡಿದ ನಂತರ ನಾನು promoted ಟ್ಯಾಗ್ಸ್ ಏಕೆ ನೋಡುತ್ತೇನೆ?

ಬೂಸ್ಟ್ ಎನ್ನುವುದು ನಿಮಗೆ ನಿರ್ದಿಷ್ಟ ಸಂಖ್ಯೆಯ ವೀವ್ಸ್ ಖಾತರಿಪಡಿಸುವ ಫೀಚರ್ ಆಗಿದೆ. ಇದು ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಜಾಹೀರಾತು ಆಗಿರುವುದರಿಂದ ಅದನ್ನು ಸ್ಪಷ್ಟವಾಗಿ ಗುರುತಿಸಬೇಕಾಗಿದೆ.

2. ಮ್ಯೂಸಿಕ್ ಇರುವ ಪೋಸ್ಟ್ ಅನ್ನು ಬೂಸ್ಟ್ ಮಾಡಬಹುದೇ?

ನಿಮ್ಮ ಪೋಸ್ಟ್‌ಗಳು ನಮ್ಮ ಲೈಬ್ರರಿಯಿಂದ ಮ್ಯೂಸಿಕ್ ಬಳಸಿದರೆ ಅಥವಾ ಹಕ್ಕುಗಳನ್ನು ಉಲ್ಲಂಘಿಸಿದರೆ ನೀವು ಬೂಸ್ಟ್ ಮಾಡಲಾಗುವುದಿಲ್ಲ.

3. ಒಂದೇ ಸಮಯದಲ್ಲಿ ಎಷ್ಟು ಪೋಸ್ಟ್‌ಗಳನ್ನು ಬೂಸ್ಟ್ ಮಾಡಬಹುದು?

ಒಂದು ಬಾರಿಗೆ 1-5 ಪೋಸ್ಟ್‌ಗಳನ್ನು ಬೂಸ್ಟ್ ಮಾಡಬಹುದು

4. ನಾನು ಬಹು ಪೋಸ್ಟ್‌ಗಳನ್ನು ಆಯ್ಕೆ ಮಾಡಿದಾಗ, ಹೇಗೆ ಬೂಸ್ಟ್ ಮಾಡಲಾಗುತ್ತದೆ?

ನೀವು ಬಹು ಪೋಸ್ಟ್‌ಗಳನ್ನು ಆಯ್ಕೆ ಮಾಡಿದರೆ, ಆ ಪ್ಯಾಕೇಜ್‌ನಲ್ಲಿನ ವೀವ್ಸ್ ಅನ್ನು ಎಲ್ಲಾ ಪೋಸ್ಟ್‌ಗಳಿಗೆ ಅವುಗಳಿಗೆ ತಕ್ಕಂತೆ ವಿತರಿಸಲಾಗುತ್ತದೆ. ರೂ.99 ಗೆ 5000 ವೀವ್ಸ್ ಪ್ಯಾಕೇಜ್‌ನಲ್ಲಿ, ನೀವು 4 ಪೋಸ್ಟ್‌ಗಳನ್ನು ಆಯ್ಕೆ ಮಾಡಿದರೆ 5000 ವೀವ್ಸ್ 4 ಪೋಸ್ಟ್‌ಗಳ ನಡುವೆ ವಿಂಗಡಿಸಲಾಗುತ್ತದೆ. ವೀವ್ಸ್ ಅಥವಾ ನಾವು ಒದಗಿಸಿದ ಯಾವುದೇ ಇತರ ಮೆಟ್ರಿಕ್ ಎಂಬುದು ಅಂದಾಜು ಸಂಖ್ಯೆಯಾಗಿದೆ ಮತ್ತು ಹೇಳಲಾದ ಸಂಖ್ಯೆಗಿಂತ ಹೆಚ್ಚಿರಬಹುದು ಅಥವಾ ಕಡಿಮೆ ಇರಬಹುದು.

5. ಬೂಸ್ಟ್ ಪ್ರೊಫೈಲ್‌ಗೆ ಬದಲಾವಣೆಗಳನ್ನು ಮಾಡುತ್ತದೆಯೇ?

ಇತರ ಪೋಸ್ಟ್‌ಗಳಿಗೆ ನೀವು ಪಡೆಯುವ ವೀವ್ಸ್ ಮೇಲೆ ಬೂಸ್ಟ್ ಪರಿಣಾಮ ಬೀರುವುದಿಲ್ಲ.

6. ಪೋಸ್ಟ್ ಅನ್ನು ಬೂಸ್ಟ್ ಮಾಡಿದ ನಂತರ ಮೈಲ್​ಸ್ಟೋನ್ ರಿವಾರ್ಡ್‌ಗಳನ್ನು ಪಡೆಯಬಹುದೇ?

ಬೂಸ್ಟ್ ಮೂಲಕ ಗಳಿಸಿದ ವೀವ್ಸ್ ಮೈಲ್​ಸ್ಟೋನ್ ರಿವಾರ್ಡ್‌ಗಳನ್ನು ಪಡೆಯಲು ಸಹಾಯ ಮಾಡುವುದಿಲ್ಲ

7. ಜಾಹೀರಾತು/ಬ್ರ್ಯಾಂಡ್ ಕಂಟೆಂಟ್ ಪೋಸ್ಟ್ ಬೂಸ್ಟ್ ಮಾಡಬಹುದೇ?

ನೀವು ಜಾಹೀರಾತು ಅಥವಾ ಬ್ರ್ಯಾಂಡ್ ಕಂಟೆಂಟ್ ಪೋಸ್ಟ್ ಅನ್ನು ಬೂಸ್ಟ್ ಮಾಡಬಹುದು. ಆದರೆ ಇದು ಶೇರ್‌ಚಾಟ್ ಜಾಹೀರಾತುಗಳ ನೀತಿಯನ್ನು ಅನುಸರಿಸಬೇಕು.

8. ರಿವ್ಯೂ ಹಂತದಲ್ಲಿ ಯಾವ ರೀತಿಯ ಪೋಸ್ಟ್‌ಗಳನ್ನು ತಿರಸ್ಕರಿಸಲಾಗುತ್ತದೆ?

ನಿಮ್ಮ ಪೋಸ್ಟ್‌ಗಳು ನಮ್ಮ ಲೈಬ್ರರಿಯಿಂದ ಮ್ಯೂಸಿಕ್ ಬಳಸಿದರೆ ಅಥವಾ ನಮ್ಮ ಬಳಕೆಯ ನಿಯಮಗಳು, ಶೇರ್‌ಚಾಟ್ ಜಾಹೀರಾತುಗಳ ನೀತಿ, ಸಮುದಾಯ ಮಾರ್ಗಸೂಚಿಗಳು ಅಥವಾ ಅನ್ವಯವಾಗುವ ಕಾನೂನುಗಳನ್ನು ಉಲ್ಲಂಘಿಸಿದರೆ, ಈ ರೀತಿಯ ಪೋಸ್ಟ್‌ಗಳನ್ನು ಬೂಸ್ಟ್ ಮಾಡಲು ಸಾಧ್ಯವಿಲ್ಲ.

9. ರಿವ್ಯೂ ಪೂರ್ಣಗೊಳಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಪೋಸ್ಟ್‌ಗಳು ರಿವ್ಯೂ ಹಂತವನ್ನು ಪೂರ್ಣಗೊಳಿಸಲು ಮತ್ತು ನಿಮ್ಮ ಪೋಸ್ಟ್‌ಗಳು ಬೂಸ್ಟ್ ಆಗಲು 48 ಗಂಟೆಗಳವರೆಗೆ ತೆಗೆದುಕೊಳ್ಳಬಹುದು.

10. ಪೇಮೆಂಟ್ ಆಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಪೇಮೆಂಟ್ ನಮ್ಮನ್ನು ಯಶಸ್ವಿಯಾಗಿ ತಲುಪಲು 3-5 ವ್ಯವಹಾರ ದಿನಗಳನ್ನು ತೆಗೆದುಕೊಳ್ಳುತ್ತದೆ

11. ನನ್ನ ಅಕೌಂಟ್‌ನಿಂದ ಹಣವನ್ನು ಕಳುಹಿಸಲಾಗಿದೆ ಮತ್ತು ನಿಮಗೆ ತಲುಪದಿದ್ದರೆ ಏನು ಮಾಡಬೇಕು?

ನಿಮ್ಮ ಅಕೌಂಟ್‌ನಿಂದ ಹಣ ಡೆಬಿಟ್ ಆಗಿದ್ದರೆ ಮತ್ತು ನಮ್ಮನ್ನು ತಲುಪದಿದ್ದರೆ, ಅದು 'ಪೇಮೆಂಟ್ ವಿಫಲವಾಗಿದೆ' ಎಂದು ತೋರಿಸುತ್ತದೆ. ಈ ಸಂದರ್ಭದಲ್ಲಿ, ಬ್ಯಾಂಕ್ ನಿಮ್ಮ ಹಣವನ್ನು 3-5 ವ್ಯವಹಾರ ದಿನಗಳಲ್ಲಿ ಮರು ಪೇಮೆಂಟ್ ಮಾಡುತ್ತದೆ

12. ಬೂಸ್ಟ್ ಪ್ರಕ್ರಿಯೆ ನಡೆಯುತ್ತಿರುವಾಗ ರಿಫಂಡ್ ಕೇಳಬಹುದೇ?

ನಿಮ್ಮ ಬೂಸ್ಟ್ ವಿನಂತಿಯನ್ನು ಸ್ವೀಕರಿಸಿದ ನಂತರ ಮತ್ತು 'ಪ್ರಕ್ರಿಯೆ' ಹಂತದಲ್ಲಿರುವಾಗ ರಿಫಂಡ್ ಕೇಳಲಾಗುವುದಿಲ್ಲ.

13. ಯಾವಾಗ ರಿಫಂಡ್ ವಿನಂತಿಯನ್ನು ಮಾಡಬಹುದು?

ಬೂಸ್ಟ್ ವಿನಂತಿಯನ್ನು ತಿರಸ್ಕರಿಸಿದರೆ, ರಿಫಂಡ್ ಸ್ವಯಂಚಾಲಿತವಾಗಿ ಆರಂಭವಾಗುತ್ತದೆ. ಬೂಸ್ಟ್ ವಿನಂತಿಯನ್ನು ತಿರಸ್ಕರಿಸಿದ ದಿನಾಂಕದಿಂದ 5-7 ಕೆಲಸದ ದಿನಗಳಲ್ಲಿ ನೀವು ರಿಫಂಡ್ ಅನ್ನು ನಿರೀಕ್ಷಿಸಬಹುದು.